ಹಳ್ಳಿಗಟ್ಟುನಲ್ಲಿ ವಿಶೇಷ ಉಪನ್ಯಾಸ
ಕೊಡಗು

ಹಳ್ಳಿಗಟ್ಟುನಲ್ಲಿ ವಿಶೇಷ ಉಪನ್ಯಾಸ

November 19, 2018

ಗೋಣಿಕೊಪ್ಪಲು: ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿಯು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯ ಕ್ರಮದಲ್ಲಿ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ ನಡೆಯಿತು. ಜಾನಪದ ಸಮೂಹಗಾಯನ ಸ್ಪರ್ಧೆಯಲ್ಲಿ ಚೈತ್ರ ಮತ್ತು ತಂಡ ಪ್ರಥಮ, ರಿನ್ಯ ಮತ್ತು ತಂಡ ದ್ವಿತೀಯ, ಭಾವಗೀತೆ ಸ್ಪರ್ಧೆಯಲ್ಲಿ ಶೃದ್ಧಾಶಾಸ್ತ್ರಿ (ಪ್ರ), ಅಪರ್ಣ ಭಾರಧ್ವಾಜ್ (ದ್ವಿ) ಬಹುಮಾನ ಪಡೆದುಕೊಂಡರು.

ಮುಖ್ಯ ಅತಿಥಿಯಾಗಿ ಜಿಲ್ಲಾ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ.ಎನ್.ಪ್ರಕಾಶ್ ಪಾಲ್ಗೊಂಡು ಬಹುಮಾನ ವಿತರಿಸಿದರು. ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿಯು ಕಾಲೇಜು ಪ್ರಾಂಶು ಪಾಲೆ ಸಣ್ಣುವಂಡ ರೋಹಿಣಿ ತಿಮ್ಮಯ್ಯ ಮಾತನಾಡಿ ಕನ್ನಡ ಭಾಷೆಯನ್ನು ವಿದ್ಯಾ ರ್ಥಿಗಳು ಉಳಿಸಿ ಬೆಳೆಸುವಂತಾಗಬೇಕು ಎಂದರು.

Translate »