ಭಜನಾ ಮಂಡಳಿ ಬೆಳ್ಳಿ ಹಬ್ಬದ ಶೋಭಾಯಾತ್ರೆ
ಹಾಸನ

ಭಜನಾ ಮಂಡಳಿ ಬೆಳ್ಳಿ ಹಬ್ಬದ ಶೋಭಾಯಾತ್ರೆ

November 19, 2018

ಬೇಲೂರು: ಶ್ರೀ ಗಾಯಿತ್ರಿ ಭಜನಾ ಮಂಡಳಿಗೆ 25 ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಶೋಭಾಯಾತ್ರೆ ಮತ್ತು ಶಿವಾನಂದ ಲಹರಿ ಪಾರಾಯಣವನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಶ್ರೀ ಗಾಯಿತ್ರಿ ಭಜನಾ ಮಂಡಳಿ ಆರಂಭವಾಗಿ 25 ವರ್ಷದ ಬೆಳ್ಳಿ ಹಬ್ಬ ಪ್ರಯುಕ್ತ ಶೋಭಾಯಾತ್ರೆಯನ್ನು ನಡೆ ಸಲಾಯಿತು. ಈ ಸಂದರ್ಭದಲ್ಲಿ ಭಾನು ವಾರ ಬೆಳಿಗ್ಗೆ ಶಿವಾನಂದ ಲಹರಿ ಪಾರಾ ಯಣದೊಂದಿಗೆ ಶ್ರೀ ಚೆನ್ನಕೇಶವಸ್ವಾಮಿ ದೇಗುಲದ ಸುತ್ತ ಮತ್ತು ರಾಜಬೀದಿಯಲ್ಲಿ ಶೋಭಾಯಾತ್ರೆ ನಡೆಸಿದರು. ಭಜನಾ ಮಂಡಳಿ ಮಹಿಳಾ ಸದಸ್ಯರು ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು.

ನಂತರ ಪಟ್ಟಣದ ನಂಜುಂಡೇಶ್ವರ ಸ್ವಾಮಿ ದೇಗುಲದಲ್ಲಿ ಪೂಜಾ ಕಾರ್ಯ ಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಗಣಪತಿ ಹೋಮ, ಲಲಿತಾ ಹೋಮ, ರುದ್ರ ಹೋಮವನ್ನು ವೇ.ಬ್ರ ಕೆ.ಆರ್.ಮಂಜು ನಾಥ್ ನಡೆಸಿಕೊಟ್ಟರು. ಶ್ರೀ ನಂಜುಂ ಡೇಶ್ವರ ಸ್ವಾಮಿ ಮತ್ತು ಪಾರ್ವತಿ ಅಮ್ಮನ ವರಿಗೆ ಅಭಿಷೇಕ ಹಾಗೂ ಅದೇ ಸಮಯ ದಲ್ಲಿ ಲಲಿತಾ ಸಹಸ್ರನಾಮ ಕುಂಕುಮಾ ರ್ಚನೆಯನ್ನು ಭಜನಾ ಮಂಡಳಿ ಸದಸ್ಯರಿಂದ ಏರ್ಪಡಿಸಲಾಗಿತ್ತು.

ನಂಜುಂಡೇಶ್ವರ ಸ್ವಾಮಿ ಮತ್ತು ಶಂಕರಾ ಚಾರ್ಯ, ದಕ್ಷಿಣಾಮೂರ್ತಿ ವಿಗ್ರಹ ಗಳನ್ನು ಬಗೆಬಗೆಯ ಹೂಗಳಿಂದ ಸಿಂಗಾರ ಮಾಡಲಾಗಿತ್ತು. ಭಜನಾ ಮಂಡಳಿಯ ಎಲ್ಲಾ ಮಹಿಳೆಯರು ಒಟ್ಟಿಗೆ ಸೌಂದರ್ಯ ಲಹರಿ, ವಿಷ್ಣುಸಹಸ್ರನಾಮ, ಲಲಿತಾ ಸಹಸ್ರನಾಮವನ್ನು ಪಠಿಸಿದರು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಶಾರದಮ್ಮ ಮಾತನಾಡಿ, ಗಾಯಿತ್ರಿ ಭಜನಾ ಮಂಡಳಿ ಆರಂಭವಾಗಿ 25 ವರ್ಷಗಳು ತುಂಬಿದ ನೆನಪಿಗಾಗಿ ಶೋಭಾಯಾತ್ರೆ ಹಾಗೂ ಹೋಮ-ಹವನವನ್ನು ನಡೆಸ ಲಾಗುತ್ತಿದೆ. ದೇಶದಲ್ಲಿ ಶಾಂತಿ, ಮಳೆ, ಬೆಳೆ ಚೆನ್ನಾಗಿ ಬರಲಿ, ನಮ್ಮ ರಾಜ್ಯ, ದೇಶ ದವಸ ಧಾನ್ಯ, ಸಂಪತ್ತಿನಿಂದ ತುಂಬಿ ಸುಭಿಕ್ಷವಾಗಿರಲಿ, ಮಹಿಳೆಯರಿಗೆ ಒಳಿತಾಗಲಿ, ಕುಟುಂಬದವರಿಗೆ ದೇವರು ಆರೋಗ್ಯವನ್ನು ಕರುಣಿಸಲಿ ಎಂಬ ಆಶಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ ಕೆ.ಆರ್ ಮಂಜುನಾಥ್, ಶತನಾಟಕ ಬರಹಗಾರ ಬೇಲೂರು ಕೃಷ್ಣಮೂರ್ತಿ, ಶಂಕರ ಮಠದ ಅಧ್ಯಕ್ಷ ಜಿ.ಕೆ.ರವೀಂದ್ರ ಅವರನ್ನು ಸನ್ಮಾನಿಸಲಾಯಿತು.

Translate »