ಕೊಡಗಿನ ನೆರೆ ಸಂತ್ರಸ್ತರ ನೆರವಿಗೆ ಕೊಡವ ಸಮಾಜಗಳ ಒಕ್ಕೂಟ ನಿರ್ಧಾರ
ಕೊಡಗು

ಕೊಡಗಿನ ನೆರೆ ಸಂತ್ರಸ್ತರ ನೆರವಿಗೆ ಕೊಡವ ಸಮಾಜಗಳ ಒಕ್ಕೂಟ ನಿರ್ಧಾರ

November 18, 2018

ಮಡಿಕೇರಿ: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಸಂತ್ರಸ್ತರಿಗೆ ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಮೂಲಕ ಅಗತ್ಯ ನೆರ ವನ್ನು ನೀಡಲು ಒಕ್ಕೂಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಬಾಳುಗೋಡಿನಲ್ಲಿ ನಡೆದ ಒಕ್ಕೂಟದ ಮಾಸಿಕ ಸಭೆಯಲ್ಲಿ ಪ್ರಕೃತಿ ವಿಕೋಪ ಮತ್ತು ಮುಂದೆ ಕೈಗೊಳ್ಳಬಹುದಾದ ಪರಿಹಾರ ಕಾರ್ಯಗಳ ಕುರಿತು ಪ್ರಮುಖರು ಚರ್ಚಿಸಿದರು. ಮಡಿಕೇರಿ ಹಾಗೂ ಸೋಮವಾರ ಪೇಟೆಯಲ್ಲಿ ಸಂಭವಿಸಿದ ಮಳೆಹಾನಿ ಪ್ರದೇಶಗಳಿಗೆ ಒಕ್ಕೂಟದ ಪದಾಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆ ಸಿದ್ದರು. ಸಂತ್ರಸ್ತರಿಗೆ ಸಾಂತ್ವನ ಹೇಳಿ ಅಭಯ ನೀಡಿದ ಕುರಿತು ಮತ್ತು ಸಂಗ್ರಹಿಸಿರುವ ಮಾಹಿತಿಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಮನೆ, ಮಠ, ತೋಟ, ಜಾಗ ಕಳೆದುಕೊಂಡವರಿಗೆ ಎಲ್ಲಾ ಸಮಾಜಗಳ ಸಹಯೋಗದಲ್ಲಿ ಸಹಾಯ ಮಾಡುವುದು, ನೈಜ ಸಂತ್ರಸ್ತರ ಮನೆಗೆ ಖುದ್ದು ಭೇಟಿ ನೀಡಿ ಧನ ಸಹಾಯ ನೀಡುವುದು ಹಾಗೂ ಬೆಂಗಳೂರು ಮತ್ತು ಮೈಸೂರು ಕೊಡವ ಸಮಾಜಗಳ ಸಹಕಾರದೊಂದಿಗೆ ಸಂತ್ರಸ್ತರಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮುಂದಿನ ತಿಂಗಳ 15ರ ಒಳಗೆ ಕಲ್ಪಿಸುವ ಕುರಿತು ನಿರ್ಧರಿಸಲಾಯಿತು.

ಸಂತ್ರಸ್ತ ಕುಟುಂಬಗಳ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಕುರಿತು ಕಾಳಜಿಯ ಮಾತು ಗಳನ್ನಾಡಿದ ಪ್ರಮುಖರು ಶಾಲಾ ಶುಲ್ಕ ಮತ್ತು ಇತರ ಸೌಲಭ್ಯಗಳ ಕುರಿತು ಆಯಾ ಶಾಲೆಗಳ ಮುಖ್ಯೋಪದ್ಯಾಯರು ಗಳ ಜೊತೆ ಚರ್ಚಿಸಿ ಸಹಾಯ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿ ದರು. ಸಭೆಯ ಅಧ್ಯಕ್ಷತೆಯನ್ನು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ವಹಿಸಿದ್ದರು. ಉಪಧ್ಯಾಕ್ಷರಾದ ಮಂಡೇಡ ರವಿ ಉತ್ತಪ್ಪ, ಮಲಚ್ಚೀರ ಬೋಸ್ ಚಿಟ್ಟಿಯಪ್ಪ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಉತ್ತಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಹಾಗೂ ಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪೊಮ್ಮಕ್ಕಡ ಕೂಟದ ಸಭೆ: ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಡ ಕೂಟದ ಸಭೆ ಕೂಡ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕವಿತಾ ಭೂಕುಸಿತದಿಂದಾದ ಅನಾಹುತಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆ ಯಲ್ಲಿ ಸರೋಜ ಪ್ರಥಮ ಹಾಗೂ ಭೂಮಿಕಾ ದ್ವೀತಿಯ ಬಹುಮಾನವನ್ನು ಪಡೆದರು. ರುಚಿ ರುಚಿಯಾದ, ಬಗೆ ಬಗೆಯ ತಿಂಡಿ ತಿನಿಸುಗಳ ತಯಾರಿಕಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪದ್ಮ ಮಚ್ಚಮಾಡ, ದ್ವೀತಿಯ ಶಾಲಿನಿ, ರೇಖಾ ಪಳಂಗಂಡ ಹಾಗೂ ಸÀರೋಜ ಅಮ್ಮಣಕುಟ್ಟಂಡ ತೃತೀಯ ಬಹುಮಾನ ಪಡೆದುಕೊಂಡರು.

Translate »