ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಕೊಲೆ ಬೆದರಿಕೆ; ಭದ್ರತೆಗೆ ಆಗ್ರಹ
ಕೊಡಗು

ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಕೊಲೆ ಬೆದರಿಕೆ; ಭದ್ರತೆಗೆ ಆಗ್ರಹ

November 20, 2018

ಪೊನ್ನಂಪೇಟೆ: ಟಿಪ್ಪುವಿನ ಕ್ರೌರ್ಯದ ಬಗ್ಗೆ ಇತಿಹಾಸದ ವಾಸ್ತವಂಶವನ್ನು ತೆರೆದಿಟ್ಟ ಪತ್ರಕರ್ತ ಹಾಗೂ ಅಂಕಣಕಾರ ಸಂತೋಷ್‍ತಮ್ಮಯ್ಯನವರಿಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದ್ದು ಸರ್ಕಾರವು  ಕೂಡಲೇ ಸಮಾಜಘಾತುಕ ಶಕ್ತಿಗಳನ್ನು ಬಂಧಿಸಿ ಸಂತೋಷ್‍ತಮ್ಮಯ್ಯನವರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಯುಕೊ ಸಂಸ್ಥೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಒತ್ತಾಯಿಸಿದರು.

ಗೋಣಿಕೊಪ್ಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದ 19(1)ಎ ವಿಧಿಯಂತೆ ಈ ದೇಶದ ಎಲ್ಲಾ ನಾಗರಿಕರಿಗೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾಧ್ಯಮದ ಮೂಲಕ ತಮ್ಮ ಅನಿಸಿಕೆ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾದ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಕೇವಲ ನಮ್ಮ 5 ತಲೆಮಾರಿನ ಹಿಂದೆ ಕೊಡವ ಜನಾಂಗದ ಮಾರಣ ಹೋಮ ನಡೆಸಿ, ಮತಾಂತರ ನಡೆಸಿ ಜನಾಂಗದ ನಾಶಕ್ಕೆ ಪ್ರಯತ್ನಿಸಿದ ಟಿಪ್ಪುವಿನ ಜಯಂತಿಯನ್ನು ನಮ್ಮದೇ ನೆಲದಲ್ಲಿ ಬಲವಂತವಾಗಿ ಆಚರಿಸಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರವು ಒಂದು ಜನಾಂಗಕ್ಕೆ ಅವಮಾನ ಮಾಡಿದಾಗ ಅದನ್ನು ಪ್ರತಿಭಟಿ ಸಲೂ ಸಹ ಅವಕಾಶವಿಲ್ಲದಿದ್ದರೆ ಇದು ಏನು ನಿರಂಕುಶ ಪ್ರಭುತ್ವದ ದೇಶವೋ, ಇಲ್ಲ ಪ್ರಜಾ ಪ್ರಭುತ್ವ ದೇಶವೋ ಎಂದು ಕಿಡಿಕಾರಿದರು.

ಇತ್ತೀಚೆಗೆ ನಡೆದ ವಿಚಾರ ಸಂಕಿರಣ ಕಾರ್ಯಕ್ರಮವೊಂದರಲ್ಲಿ, 85 ವರ್ಷದ ಹಿರಿಯ ಸಾಹಿತಿ, ಕೊಡವ ಭಾಷಾ ಹಾಗೂ ಸಂವಿಧಾನ ತಜ್ಞ ಬಾಚರಣಿಯಂಡ ಅಪ್ಪಣ್ಣರವರು ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಟಿಪ್ಪು ಹಾಗು ಈ ನಾಡಿಗೆ ಆತನಿಂದಾದ ಕೆಡುಕುಗಳ ಬಗ್ಗೆ ವಿಚಾರ ಮಂಡನೆ ಮಾಡಿದ್ದಕ್ಕಾಗಿ, ಧರ್ಮವನ್ನು ಅವಹೇಳನ ಮಾಡಿದ ಆರೋಪದಲ್ಲಿ ಮೊಖದ್ದಮ್ಮೆಯನ್ನು ದಾಖಲಿಸಿ ಹಿಂಸಿಸುವುದಾದರೆ, ಒಬ್ಬ ಪತ್ರಕರ್ತ ಸಂತೋಷ್ ತಮ್ಮಯ್ಯರನ್ನು ಒಬ್ಬ ದರೋಡೆಕೋರನಂತೆ ಹಿಂಬಾಲಿಸಿ ಉದ್ದೇಶ ಪೂರ್ವಕವಾಗಿ ಮಧ್ಯರಾತ್ರಿ ಮನೆ ಮೇಲೆ ದಾಳಿ ನಡೆಸಿ ಬಂಧಿಸುವುದಾದರೆ, ಈ ದೇಶದಲ್ಲಿ ಪ್ರಜಾ ಪ್ರಭುತ್ವ ಬದುಕಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದರು. ಅಪ್ಪಣ್ಣನವರಂ ತಹ ಹಿರಿ ಜೀವದ ವಿರುದ್ಧ ಮೊಕದ್ದಮೆ ಹೂಡಿ ಈ ಸರ್ಕಾರ ಹಿಂಸಿಸುತ್ತದೆ ಎಂದಾ ದರೆ, ನಾವು ಈ ದೇಶದಲ್ಲಿ ತೃತೀಯ ದರ್ಜೆ ನಾಗರೀಕರೇ? ಇದುವೇ ಈ ಸರ್ಕಾರವು ಹಿರಿಯ ನಾಗರೀ ಕರನ್ನು ನಡೆಸಿಕೊಳ್ಳುವ ರೀತಿಯೇ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ ಅಪ್ಪಣ್ಣನವರ ಹೆಸರನ್ನು ಮೊಕದ್ದಮೆಯಿಂದ ಕೈಬಿಡಬೇಕೆಂದು ಅವರು  ಒತ್ತಾಯಿಸಿದರು.

ಟಿಪ್ಪು ಎಂಬ ಭಯೋತ್ಪಾದಕನ ಜಯಂತಿ ಯನ್ನು ಕೂಡಲೇ ರದ್ದುಗೊಳಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಯುಕೊ ಬೀದಿಗಿಳಿದು ಹೋರಾಟ ನಡೆಸಲಿದೆ. ಮಾತ್ರವಲ್ಲದೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಕೊಡಗಿನಲ್ಲಿ ಬಹಿಷ್ಕರಿಸಬೇಕಾಗುತ್ತದೆ. ಹಾಗೆಯೇ ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ಮೇಲೆ ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿ ಸರ್ಕಾರ ನಡೆದು ಕೊಂಡರೆ ಮುಂದಿನ ಕನ್ನಡ ರಾಜ್ಯೋತ್ಸವ ವನ್ನು ಕೊಡಗಿನಲ್ಲಿ ಕರಾಳ ದಿನವನ್ನಾಗಿ ಆಚರಿ ಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜುಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ, ಮಾದೇಟಿರ ತಿಮ್ಮಯ್ಯ, ಅಪ್ಪರಂಡ ವೇಣುಪೊನ್ನಪ್ಪ ಉಪಸ್ಥಿತರಿದ್ದರು.

 

Translate »