ವಿರಾಜಪೇಟೆ: ಕೊಡವ ಭಾಷೆ, ಸಂಸ್ಕøತಿ, ಆಚಾರ-ವಿಚಾರಗಳನ್ನು ಹಲವಾರು ವರ್ಷಗಳಿಂದಲೂ ಅಖಿಲ ಕೊಡವ ಸಮಾಜ ಉಳಿಸಿ ಬೆಳೆಸುವಂ ತಹ ಕಾರ್ಯವನ್ನು ಮಾಡುತ್ತ ಬಂದಿದ್ದು, ಮುಂದೆಯೂ ಹೆಚ್ಚಿನ ಕಾರ್ಯಗಳಿಗೆ ಜನರ ಸಹಕಾರ ಅಗತ್ಯ ಎಂದು ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹೇಳಿದರು.
ವಿರಾಜಪೇಟೆ ಅಖಿಲ ಕೊಡವ ಸಮಾ ಜದ ಸಭಾಂಗಣದಲ್ಲಿ ಆಯೋಜಿಸಲಾ ಗಿದ್ದ ಸಮಾಜದ 41ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡಗಿನ ಸಮಸ್ಯೆಗಳ ಬಗ್ಗೆ ಅಖಿಲ ಕೊಡವ ಸಮಾಜ ಪ್ರಾಥಮಿಕವಾಗಿ ಧ್ವನಿ ಎತ್ತುತ್ತದೆ. ಕೊಡಗಿನವರ ಭಾವನೆಗೆ ಧಕ್ಕೆ ಉಂಟಾದಾಗ ಸಂಘಟಿತರಾಗಿ ಹೋರಾಟ ನಡೆಸಬೇಕಾಗುತ್ತದೆ. ಅಖಿಲ ಕೊಡವ ಸಮಾಜಕ್ಕೆ 76 ವರ್ಷಗಳ ಇತಿಹಾಸ ವಿದ್ದು, ಮುಂದೆಯು ಯುವ ಜನತೆ ಭಿನ್ನಾ ಭಿಪ್ರಾಯಗಳನ್ನು ಮರೆತು ಏಕತೆಯಿಂದ ಸಮಾಜವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೈ ಜೋಡಿಸಬೇಕಾಗಿದೆ ಎಂದರು.
ಸಭೆಯಲ್ಲಿ ಸಮಾಜದ ಉಳಿವಿಗೆ ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಾಜದ ಸದಸ್ಯರಾದ ಚೆಪ್ಪುಡಿರ ಹ್ಯಾರಿ ದೇವಯ್ಯ, ಬಲ್ಯಮಿದೇರಿರ ಸುಬ್ರಮಣಿ, ಅಜ್ಜಿನಿಕಂಡ ಮಹೇಶ್ ನಾಚಯ್ಯ ಮುಂತಾ ದವರು ಮಾತನಾಡಿದರು. ಕೊಡವ ಅರಿವೋಲೆ ಎಂಬ ಕೃತಿ ರಚಿಸಿದ ಡಾ.ಬೊವ್ವೇ ರಿಯಂಡ ಉತ್ತಯ್ಯ ದಂಪತಿ ಹಾಗೂ ಹೆಸರಾಂತ ರಂಗಭೂಮಿ ಕಲಾವಿದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಸಿ.ಕಾರ್ಯಪ್ಪ ಮತ್ತು ಅನಿತಾ ಕಾರ್ಯಪ್ಪ ದಂಪತಿಗಳನ್ನು ಗೌರವಿಸಲಾಯಿತು. ನಂತರ ಸನ್ಮಾನಿತರಾದ ಬೊವ್ವೇರಿಯಂಡ ಉತ್ತಯ್ಯ, ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿ ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಮಾ ಜದ ಕಾರ್ಯಾಧ್ಯಕ್ಷ ಇಟ್ಟೀರ ಬಿದ್ದಪ್ಪ, ಉಪಾದ್ಯಕ್ಷ ಅಜ್ಜಿಕುಟ್ಟಿರ ಎನ್.ಮಾದಯ್ಯ, ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಜಂಟಿ ಕಾರ್ಯದರ್ಶಿ ನಂದೇಟಿರ ರಾಜ ಮಾದಪ್ಪ, ಮತ್ತು ಅಪ್ಪುಮಣಿಯಂಡ ತುಳಸಿ ಕಾಳಪ್ಪ, ಕಾನೂನು ಸಲಹೆಗಾರ ವಕೀಲ ಬಲ್ಯ ಮಾಡ ಬಿ.ಮಾದಪ್ಪ, ದೇಶತಕ್ಕರಾದ ಪೆಮ್ಮಯ್ಯ, ಪರದಂಡ ವಿಠಲ, ಸಮಾಜದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿ ಯಂಡ ರಾಣು ಅಪ್ಪಣ್ಣ, ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮುಂತಾದ ಪ್ರಮುಖರು ಮಾತನಾಡಿದರು. ಸಮಾ ಜದ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ ಸಮಾಜದ ವರದಿ ಮಂಡಿಸಿದರು.