ಕೊಡಗು

ಲಸಿಕಾ ಅಭಿಯಾನಕ್ಕೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ
ಕೊಡಗು

ಲಸಿಕಾ ಅಭಿಯಾನಕ್ಕೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ

July 19, 2021

ವಿರಾಜಪೇಟೆ, ಜು.18-ಕೊರೊನಾ ನಿಯಂತ್ರಣ ಹಾಗೂ ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಖಾಸಗಿ ಸಂಘ-ಸಂಸ್ಥೆಗಳು ಉಚಿತವಾಗಿ ಕೋವಿಡ್ ಲಸಿಕಾ ಅಭಿಯಾನ ನಡೆಸುತ್ತಿರುವುದು ಉತ್ತಮ ಕಾರ್ಯ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ಸಮೀಪದ ಪೆರುಂಬಾಡಿ ಗ್ರಾಮಸ್ಥರಿಗೆ ಅಲ್ಲಿನ ಮಗ್ನೋಲಿಯ ರೆಸಾರ್ಟ್ ಸಂಸ್ಥೆಯಿಂದ ಆಯೋಜಿಸಿದ್ದ ಕೋವಿಡ್ ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳು ಕೋವಿಡ್ ಲಸಿಕಾ ಅಭಿಯಾನಕ್ಕೆ ಕೈಜೋಡಿ ಸಿದರೆ ಕೊರೊನಾ ಸೋಂಕು ನಿಯಂತ್ರಿಸು ವಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ. ಖಾಸಗಿ ಸಂಸ್ಥೆಗಳು ಗ್ರಾಮಸ್ಥರ…

ಸಿದ್ದಾಪುರ ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ
ಕೊಡಗು

ಸಿದ್ದಾಪುರ ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

July 18, 2021

ಸಿದ್ದಾಪುರ, ಜು.17- ಮಳೆ ಪ್ರವಾಹ, ಪ್ರಕೃತಿ ವಿಕೋಪದಿಂದ ಸೂರು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು, 3 ವರ್ಷ ಕಳೆದರೂ ಇಂದಿಗೂ ಸಮಸ್ಯೆ ಬಗೆಹರಿಯದೆ ಮತ್ತೊಮ್ಮೆ ಮಳೆಯ ಪ್ರವಾಹ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗೀಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೀಪಲ್ಸ್ ಫೌಂಡೇಷನ್, ಟೆಚ್ ಚಾರಿಟಬಲ್ ಟ್ರಸ್ಟ್ ಹಾಗೂ ಹೆಚ್‍ಆರ್‍ಎಸ್, ಜಮಾ ಅತೆ ಇಸ್ಲಾಮಿ ಹಿಂದ್ ವತಿಯಿಂದ ನೆರೆ ಸಂತ್ರಸ್ತರಿಗೆ 25 ಮನೆ ನಿರ್ಮಾಣ ಮಾಡಲು ನೆಲ್ಯಹುದಿ…

ಕೊಡಗಿನತ್ತ ಹರಿದು ಬಂದ ಪ್ರವಾಸಿಗರ ದಂಡು
ಕೊಡಗು

ಕೊಡಗಿನತ್ತ ಹರಿದು ಬಂದ ಪ್ರವಾಸಿಗರ ದಂಡು

July 18, 2021

ಮಡಿಕೇರಿ, ಜು.17- ಕೋವಿಡ್ ಸಂದಿಗ್ಧ ಪರಿಸ್ಥಿತಿಯ ಹಿನ್ನೆಲೆ ಕಳೆದ 3 ತಿಂಗಳಿನಿಂದ ಬಂದ್ ಆಗಿದ್ದ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳೆಲ್ಲವೂ ಅನ್ ಲಾಕ್ ಆಗಿವೆ. ಪರಿಣಾಮ ಕೊಡಗು ಜಿಲ್ಲೆಗೆ ಪ್ರವಾಸಿಗರ ಆಗಮನವಾಗುತ್ತಿದೆ. ಮಳೆ, ಚಳಿಯ ನಡುವೆ ಮಾನ್ಸೂನ್ ಪ್ರವಾಸೋದ್ಯಮ ಹೆಸರಿನಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯಲು ಬರುತ್ತಿರು ವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಡಿಕೇರಿಯ ಪ್ರಕೃತಿ ಪ್ರಿಯರ ನೆಚ್ಚಿನ ತಾಣ ಅಬ್ಬಿ ಜಲಪಾತ ವೀಕ್ಷಿಸಲೆಂದು ಇಂದು ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಕಳೆದ ಒಂದು ವಾರದ ಮಳೆಗೆ ಧುಮ್ಮಿಕ್ಕಿ ಹರಿಯುತ್ತಿರುವ…

ಮರ ತೆರವು, ವಿದ್ಯುತ್ ತಂತಿ ಮರ ಜೋಡನೆ ಕಾರ್ಯ ಬಿರುಸು
ಕೊಡಗು

ಮರ ತೆರವು, ವಿದ್ಯುತ್ ತಂತಿ ಮರ ಜೋಡನೆ ಕಾರ್ಯ ಬಿರುಸು

July 17, 2021

ಮಡಿಕೇರಿ, ಜು.16- ಕೊಡಗು ಜಿಲ್ಲೆಯಾ ದ್ಯಂತ ಶುಕ್ರವಾರ ಮಳೆ ಬಿಡುವು ನೀಡಿದ್ದು ಕಂಡು ಬಂತು. ನದಿಗಳಲ್ಲೂ ಕೂಡ ನೀರಿನ ಪ್ರಮಾಣ ತುಸು ಇಳಿಕೆ ಕಾಣುತ್ತಿದ್ದು ಭಾರೀ ಪ್ರವಾಹ ತಲೆದೋರುವ ಸಾಧ್ಯತೆಯಿಂದ ಭೀತಿಗೆ ಒಳಗಾಗಿದ್ದ ನದಿ ತಟದ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ಗಣನೀಯ ಪ್ರಮಾಣದಲ್ಲಿ ನೀರು ಇಳಿಕೆ ಕಂಡಿದೆ. ಇತ್ತ ಬಲಮುರಿ ಕೆಳ ಸೇತುವೆ ಮುಳುಗಡೆಯಾಗಿದ್ದು, ಇದೇ ರೀತಿ ಮಳೆ ಬಿಡುವು ನೀಡಿದರೆ ಕೆಳ ಸೇತುವೆಯ 2 ದಿನದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ….

ಕೋಟೆ ಅರಮನೆ ಕಾಮಗಾರಿ ವೀಕ್ಷಿಸಿದ ಡಿಸಿ
ಕೊಡಗು

ಕೋಟೆ ಅರಮನೆ ಕಾಮಗಾರಿ ವೀಕ್ಷಿಸಿದ ಡಿಸಿ

July 17, 2021

ಮಡಿಕೇರಿ, ಜು.16- ನಗರದ ಪ್ರತಿಷ್ಠಿತ ಅರಮನೆ ನವೀಕರಣ ಕಾಮಗಾರಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ವಿರೂಪಾಕ್ಷಯ್ಯ, ಎಸ್.ಮಹೇಶ್ ಇತರರು ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು. ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತವಾಯಿತು. ಸರ್ಕಾರ 9.75 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕೋಟೆ ನವೀಕರಣ ಮಾಡಲು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ವಸ್ತು ಸಂಗ್ರಹಾಲಯದ ಅಧಿಕಾರಿ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್…

ಹಾರಂಗಿಗೆ ಉಸ್ತುವಾರಿ ಸಚಿವರಿಂದ ಬಾಗಿನ
ಕೊಡಗು

ಹಾರಂಗಿಗೆ ಉಸ್ತುವಾರಿ ಸಚಿವರಿಂದ ಬಾಗಿನ

July 17, 2021

ಮಡಿಕೇರಿ, ಜು.16- ಹಾರಂಗಿ ಅಣೆಕಟ್ಟು ಭರ್ತಿಯಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಅರಕಲಗೋಡು ಶಾಸಕ ಎ.ಟಿ. ರಾಮಸ್ವಾಮಿ, ಹುಣಸೂರು ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಚಾರು ಲತಾ ಸೋಮಲ್, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರುಗಳು ಶುಕ್ರ ವಾರ ಮೈದುಂಬಿದ ಹಾರಂಗಿ ಜಲಾಶ ಯಕ್ಕೆ ಸಾಂಪ್ರದಾಯಿಕ ಬಾಗಿನ ಸಮರ್ಪಿಸಿ ದರು. ಜಲಾಶಯದ 4 ಕ್ರೆಸ್ಟ್ ಗೇಟ್‍ಗಳಿಗೆ ಪೂಜೆ ಸಲ್ಲಿಸಿದ ಸಚಿವ ಸೋಮಣ್ಣ, ಗೇಟ್‍ನ ಸ್ವಯಂ ಚಾಲಿತ…

ಕೊಡಗಿನಲ್ಲಿ ಮಳೆ ಆರ್ಭಟ: ಕೆಲವೆಡೆ  ಭೂ ಕುಸಿತ, ಸಂಚಾರಕ್ಕೆ ಅಡ್ಡಿ
ಕೊಡಗು

ಕೊಡಗಿನಲ್ಲಿ ಮಳೆ ಆರ್ಭಟ: ಕೆಲವೆಡೆ ಭೂ ಕುಸಿತ, ಸಂಚಾರಕ್ಕೆ ಅಡ್ಡಿ

July 15, 2021

ಮಡಿಕೇರಿ, ಜು.14- ಕೊಡಗು ಜಿಲ್ಲೆ ಯಾದ್ಯಂತ ವರುಣ ಆರ್ಭಟಿಸುತ್ತಿದ್ದು, ಭಾರೀ ಗಾಳಿ ಸಹಿತ ಮಳೆಯಿಂದಾಗಿ ಕೆಲವೆಡೆ ರಸ್ತೆಗೆ ಮರಗಳು ಉರುಳಿ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತ ವಾಗಿದೆ. ವಿದ್ಯುತ್ ಕಂಬಗಳು, ಟ್ರಾನ್ಸ್‍ಫಾರ್ಮರ್ ಗಳಿಗೂ ಭಾರೀ ಹಾನಿಯಾಗಿದ್ದು, ಮಳೆ ಗಾಳಿಯ ತೀವ್ರತೆಯ ನಡುವೆಯೇ ದುರಸ್ತಿ ಕಾರ್ಯ ನಡೆಯುತ್ತಿದೆ. ಕೆಲವು ಮನೆಗಳ ಮೇಲೂ ಮರಗಳು ಬಿದ್ದಿದ್ದು, ಹಾನಿ ಯಾಗಿದೆ. ಈ ಮಧ್ಯೆ ಬುಧವಾರ ಸಂಜೆ ಮಡಿ ಕೇರಿ ತಾಲೂಕು ಅವ್ವಂ ದೂರು ಗ್ರಾಮದ ಬಳಿ ವಿಕಲಚೇತನ ಬೊಮ್ಮೇಗೌಡನ ಬಾಬಿ (70), ಕಿರು…

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಹೆಚ್.ಎ.ಹಂಸ
ಕೊಡಗು

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಹೆಚ್.ಎ.ಹಂಸ

July 15, 2021

ಪೆÇನ್ನಂಪೇಟೆ, ಜು.14- ಕೊಡಗು ಜಿಲ್ಲೆಯ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಕೊಟ್ಟಮುಡಿಯ ಕಾಫಿ ಬೆಳೆಗಾರರಾದ ಹೆಚ್.ಎ.ಹಂಸ ಅವರನ್ನು ಕೆಪಿಸಿಸಿ ನೇಮಕಗೊಳಿಸಿದೆ. ಕೊಡಗು ಕಾಂಗ್ರೆಸ್ ಪ್ರಮುಖರ ತಂಡ ವನ್ನು ಬೆಂಗಳೂರಿಗೆ ಕರೆಸಿಕೊಂಡ ಕೆಪಿಸಿಸಿ ನಾಯಕರು, ಕಾರ್ಯಾಧ್ಯಕ್ಷರ ಸಮ್ಮುಖ ದಲ್ಲಿ ಹಂಸ ಅವರಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಯಂತೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಿ ಕಾಂಗ್ರೆಸನ್ನು ಮತ್ತಷ್ಟು ಬಲ…

ಕೊಡಗಿನಲ್ಲಿ ಮಳೆ ಆರ್ಭಟದ ದೃಶ್ಯಾವಳಿ ಕೂಟುಹೊಳೆ ಕಿರು ಜಲಾಶಯ ಭರ್ತಿ
ಕೊಡಗು

ಕೊಡಗಿನಲ್ಲಿ ಮಳೆ ಆರ್ಭಟದ ದೃಶ್ಯಾವಳಿ ಕೂಟುಹೊಳೆ ಕಿರು ಜಲಾಶಯ ಭರ್ತಿ

July 15, 2021

ಮಡಿಕೇರಿ, ಜು.14- ಮಡಿಕೇರಿ ತಾಲೂ ಕಿನ ಗಾಳಿಬೀಡು, ವಣಚಲು, ಸೀತಾರಾಮ್ ಪಾಟಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯು ತ್ತಿರುವ ಪರಿಣಾಮ ಮಡಿಕೇರಿ ನಗರಕ್ಕೆ ನೀರು ಪೂರೈಸುವ ಕೂಟುಹೊಳೆ ಕಿರು ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದ ಅಣೆಕಟ್ಟೆಯ ಮೇಲೆ ನೀರು ಸಂಗ್ರಹಕ್ಕಾಗಿ ಅಳವಡಿಸಿದ್ದ ಮರದ ಹಲಗೆಗಳನ್ನು ತೆರವು ಮಾಡಲಾಗಿದ್ದು, ಜಲಾಶಯದಿಂದ ರಭಸವಾಗಿ ನೀರು ಉಕ್ಕಿ ಹರಿಯುತ್ತಿದೆ. ಇದೇ ನೈಸರ್ಗಿಕ ನೀರು ಅಬ್ಬಿಜಲ ಪಾತವನ್ನು ಸೇರುತ್ತಿರುವ ಕಾರಣ ಅಬ್ಬಿ ಜಲಪಾತ ಹಾಲ್ನೊರೆ ಸೂಸುತ್ತಾ ಧುಮ್ಮಿಕ್ಕು ತ್ತಿದೆ. 3 ಹಂತಗಳಾಗಿ ಧುಮ್ಮಿಕ್ಕುವ…

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿಗಳು-ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸಿ
ಕೊಡಗು

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿಗಳು-ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸಿ

July 14, 2021

ಚಾಮರಾಜನಗರ, ಜು.13- ಎಸ್‍ಎಸ್ ಎಲ್‍ಸಿ ಪರೀಕ್ಷೆಯನ್ನು ಶಿಕ್ಷಕರು ಹಗುರ ವಾಗಿ ಪರಿಗಣಿಸದೇ ಪರೀಕ್ಷಾ ಪಾವಿತ್ರ್ಯತೆ ಕಾಪಾಡುವ ಜೊತೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಸಲಹೆ ನೀಡಿದರು. ಜುಲೈ 19 ಹಾಗೂ 22ರಂದು ನಡೆಯಲಿ ರುವ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆ ಸಂಬಂಧ ನಗರದ ಜಿಪಂ ಸಭಾಂಗಣ ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬಹು ಆಯ್ಕೆ…

1 12 13 14 15 16 187
Translate »