ಲಸಿಕಾ ಅಭಿಯಾನಕ್ಕೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ
ಕೊಡಗು

ಲಸಿಕಾ ಅಭಿಯಾನಕ್ಕೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ

July 19, 2021

ವಿರಾಜಪೇಟೆ, ಜು.18-ಕೊರೊನಾ ನಿಯಂತ್ರಣ ಹಾಗೂ ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಖಾಸಗಿ ಸಂಘ-ಸಂಸ್ಥೆಗಳು ಉಚಿತವಾಗಿ ಕೋವಿಡ್ ಲಸಿಕಾ ಅಭಿಯಾನ ನಡೆಸುತ್ತಿರುವುದು ಉತ್ತಮ ಕಾರ್ಯ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ವಿರಾಜಪೇಟೆ ಸಮೀಪದ ಪೆರುಂಬಾಡಿ ಗ್ರಾಮಸ್ಥರಿಗೆ ಅಲ್ಲಿನ ಮಗ್ನೋಲಿಯ ರೆಸಾರ್ಟ್ ಸಂಸ್ಥೆಯಿಂದ ಆಯೋಜಿಸಿದ್ದ ಕೋವಿಡ್ ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳು ಕೋವಿಡ್ ಲಸಿಕಾ ಅಭಿಯಾನಕ್ಕೆ ಕೈಜೋಡಿ ಸಿದರೆ ಕೊರೊನಾ ಸೋಂಕು ನಿಯಂತ್ರಿಸು ವಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ. ಖಾಸಗಿ ಸಂಸ್ಥೆಗಳು ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಕೋವಿಡ್ ಲಸಿಕೆಯನ್ನು ಉಚಿತವಾಗಿ ವಿತರಿಸುತ್ತಿರುವುದು ಶ್ಲಾಘನೀಯ. ಕೊರೊನಾ ನಿಯಂತ್ರಣದ ಬಗ್ಗೆ ಇನ್ನಷ್ಟು ನೆರವು ನೀಡಿದರೆ ದೇಶ ಶೀಘ್ರದಲ್ಲಿಯೇ ಕೊರೊನಾದಿಂದ ಮುಕ್ತವಾಗಲಿದೆ. ಲಸಿಕೆ ಪಡೆದವರು ತಮ್ಮ ಸುತ್ತಮುತ್ತಲಿನಲ್ಲಿರು ವವರ ಆರೋಗ್ಯದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಕೊರೊನಾ ಸೋಂಕಿತರು ಅನಗತ್ಯವಾಗಿ ಅಲೆದಾಡ ಬಾರದು. ಪ್ರತಿಯೊಬ್ಬರು ಮಾಸ್ಕ್ ಧರಿಸು ವುದು ಕಡ್ಡಾಯ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ನಿಯಂತ್ರಣಕ್ಕೆ ಕೈಜೋಡಿಸುವಂತೆ ಬೋಪಯ್ಯ ಮನವಿ ಮಾಡಿದರು.

ವಿರಾಜಪೇಟೆಯಲ್ಲಿರುವ ಸಂತ ಅನ್ನಮ್ಮ ದೇವಾಲಯದ ಗುರು ಮದಲೈ ಮುತ್ತು ಮಾತನಾಡಿ, ಪ್ರತಿಯೊಬ್ಬರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಖಾಸಗಿ ಸಂಘ-ಸಂಸ್ಥೆಗಳು ಸಹಾಯಹಸ್ತ ಚಾಚು ತ್ತಿರುವುದು ಶ್ಲಾಘನೀಯ. ಖಾಸಗಿ ಸಂಸ್ಥೆ ಗಳ ಕಾರ್ಯ ಎಲ್ಲರಿಗೂ ಪ್ರೇರಣೆ ಯಾಗಲಿ ಎಂದರು.

ಈ ವೇಳೆ ಒಟ್ಟು 550 ಮಂದಿ ಲಸಿಕೆ ಯನ್ನು ಪಡೆದುಕೊಂಡರು. ಲಸಿಕಾ ಅಭಿ ಯಾನ ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯರಾದ ಅಚ್ಚಪಂಡ ಮಹೇಶ್, ಮೂಕೊಂಡ ಶಶಿ ಸುಬ್ರಮಣಿ, ರೆಸಾರ್ಟ್‍ನ ಮಾಲೀಕ ರಾದ ಶ್ರೀಕಾಂತ್ ಮಚಾಲೀಯ, ಲಕ್ಷ್ಮಿ ಶ್ರೀಲಾಂತ್, ವ್ಯವಸ್ಥಾಪಕ ಪ್ರವೀಣ್, ಮಲ್ಲಂಡ ಮಧು ದೇವಯ್ಯ, ಜೋಕಿಂ ರಾಡ್ರಿಗಸ್, ಉದ್ಯಮಿ ಪಿ.ವಿಷ್ಣು, ಗ್ರಾಮದ ಚುಪ್ಪ ನಾಗರಾಜ್, ಆರ್ಜಿ ಹಾಗೂ ಬೇಟೋಳಿ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

Translate »