ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 31 ಕೈಗಾರಿಕಾ ಘಟಕಗಳಿಗೆ ಅನುಮೋದನೆ
ಚಾಮರಾಜನಗರ

ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 31 ಕೈಗಾರಿಕಾ ಘಟಕಗಳಿಗೆ ಅನುಮೋದನೆ

July 19, 2021

ಚಾಮರಾಜನಗರ, ಜು.18- ತಾಲೂ ಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ 31 ಕೈಗಾರಿಕಾ ಘಟಕಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಅನುಮೋದನೆ ನೀಡಿದ್ದು, ಇದರಿಂದ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಉದ್ಯಮ ಚಟುವಟಿಕೆಗಳು ಗರಿಗೆದರಲಿವೆ. ಅಲ್ಲದೇ, ಸಣ್ಣ ಪ್ರಮಾಣದ ಕೈಗಾರಿಕಾ ನಿವೇ ಶನಗಳನ್ನು ಒದಗಿಸಲು 118.44 ಎಕರೆ ಜಮೀನಿನಲ್ಲಿ ಕೈಗಾರಿಕಾ ಸಬ್ ಲೇಔಟ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.

ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ವಸಾಹುತುವಿನಲ್ಲಿ ಈಗಾಗಲೇ ಹಲವು ಕೈಗಾರಿಕೆಗಳು ಕಾರ್ಯ ಆರಂಭ ಮಾಡಿವೆ. ಸುಮಾರು 1500ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶದಲ್ಲಿ ನಾನಾ ಉದ್ಯಮ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿವೆ. ಕೈಗಾರಿಕಾ ಪ್ರದೇಶದಲ್ಲಿ ಭೂ ಹಂಚಿಕೆ ಗಾಗಿ ಕೋರಿ ಇತ್ತೀಚೆಗೆ 163 ಅರ್ಜಿಗಳು ಸಲ್ಲಿಕೆ ಆಗಿದ್ದವು. ಕೆಐಎಡಿಬಿ ಅವರು ಭೂಮಿ ಲಭ್ಯತೆ ಬಗ್ಗೆ ವರದಿ ಮಾಡಿ, ಪ್ರಸ್ತುತ ಇರುವ ವಿವಿಧ ಅಳತೆಯ ನಿವೇಶನಗಳ ವಿವರ ನೀಡಿದ್ದರು. ಲ್ಯಾಂಡ್ ಆಡಿಟ್ ಸಮಿತಿ ಗೂಗಲ್ ಮೀಟ್ ಮೂಲಕ ಸಂದರ್ಶನ ನಡೆಸಿತ್ತು. ಇವುಗಳಲ್ಲಿ ಅರ್ಹರಾದ 31 ಉದ್ದಿಮೆ ದಾರರ ಆಯ್ಕೆಯನ್ನು ಪರಿಗಣಿಸಿ ಜಿಲ್ಲಾಧಿ ಕಾರಿ ಡಾ.ಎಂ.ಆರ್.ರವಿ ಅವರ ಅಧ್ಯಕ್ಷತೆ ಯಲ್ಲಿ ಶನಿವಾರ ನಡೆದ ಏಕಗವಾಕ್ಷಿ ಸಮಿತಿ ಅನುಮೋದನೆ ನೀಡಿದೆ.

ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇ ಶದಲ್ಲಿ ಸಣ್ಣ ಪ್ರಮಾಣದ ವಿಸ್ತೀರ್ಣದ ಪ್ಲಾಟ್‍ಗಳನ್ನು ಹಂಚಿಕೆ ಮಾಡಲು ಕೋರಿ ಸಾಕಷ್ಟು ಅರ್ಜಿಗಳು ಸಲ್ಲಿಕೆ ಆಗಿದ್ದವು. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿ ಶಿಷ್ಟ ವರ್ಗದ ಉದ್ಯಮಿಗಳು ಸಣ್ಣ ಪ್ರಮಾ ಣದ ಕೈಗಾರಿಕಾ ಪ್ಲಾಟ್‍ಗಳನ್ನು ನೀಡು ವಂತೆ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಉದ್ದಿಮೆ ದಾರರು, ಕಡಿಮೆ ಆರ್ಥಿಕ ಆದಾಯ ಇರುವ ವರು ಕಡಿಮೆ ಅಳತೆಯ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಇರುವ ಬಗ್ಗೆ ಮನಗಂಡ ಸಬ್ ಲೇಔಟ್ ನಿರ್ಮಾಣ ಮಾಡುವ ಸಂಬಂಧ ಪ್ರಕ್ರಿಯೆಗೆ ಈ ಹಿಂದೆ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಭೆಯಲ್ಲಿ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಬೃಹತ್ ಕೈಗಾರಿಕಾ ಸಚಿವರಾದ ಜಗ ದೀಶ್ ಶೆಟ್ಟರ್ ಅವರು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ, ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ ಅವರು ಸಣ್ಣ ಪ್ರಮಾಣ ಅಳ ತೆಯ ಕೈಗಾರಿಕಾ ಪ್ಲಾಟ್‍ಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ರಿಯಾಯಿತಿ ದರದಲ್ಲಿ ಒದಗಿಸಲು ಕೈಗಾ ರಿಕಾ ಸಬ್ ಲೇಔಟ್ ನಿರ್ಮಾಣ ಮಾಡು ವಂತೆ ಮನವಿ ಮಾಡಿದ್ದರು. ಎಲ್ಲಾ ಸಣ್ಣ ಉದ್ದಿಮೆದಾರರಿಗೂ ಸಬ್ ಲೇಔಟ್ ನಿರ್ಮಾಣ ದಿಂದ ಬಹುಬೇಡಿಕೆ ಸಣ್ಣ ಕೈಗಾರಿಕಾ ನಿವೇಶನ ಪಡೆಯಲು ಅನುಕೂಲವಾಗ ಲಿದೆ ಎಂದು ಸಚಿವರ ಗಮನ ಸೆಳೆದಿ ದ್ದರು. ಈ ಬೇಡಿಕೆ ಈಗ ಸಾಕಾರಗೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಪರಿಶಿಷ್ಟರಿಗೆ, ಆರ್ಥಿಕ ವಾಗಿ ಹಿಂದುಳಿದವರಿಗೆ ಸಣ್ಣ ಪ್ರಮಾಣದ ಅಂದರೆ, 0.25, 0.50, 0.45, 1 ಮತ್ತು 2ಎಕರೆ ವಿಸ್ತೀರ್ಣದ ಪ್ಲಾಟ್‍ಗಳನ್ನು ಹಂಚಿಕೆ ಮಾಡಲು ಒಟ್ಟು 118.44 ಎಕರೆ ಜಮೀನಿ ನಲ್ಲಿ ಕೈಗಾರಿಕಾ ಉಪ ಬಡಾವಣೆ ನಿರ್ಮಾಣ ಮಾಡಲು ಅನುಮೋದನೆ ದೊರೆತಿದೆ. ಕೈಗಾ ರಿಕಾ ಸಬ್ ಲೇಔಟ್ ನಿರ್ಮಾಣ ಕಾಮ ಗಾರಿ ಪ್ರಾರಂಭವಾಗುತ್ತಿದ್ದು, ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಇದುವರೆವಿಗೂ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 233 ವಿವಿಧ ಕೈಗಾ ರಿಕೆ ಘಟಕಗಳಿಗೆ ಅನುಮತಿ ನೀಡಲಾ ಗಿದೆ. ಈ ಪೈಕಿ 10 ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ರಾಜ್ಯ ಮಟ್ಟದಲ್ಲಿ ಒಪ್ಪಿಗೆ ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ 100ಕ್ಕೂ ಹೆಚ್ಚು ಕೈಗಾರಿಕೆ ಉದ್ಯಮಿ ಗಳಿಗೂ ಕೈಗಾರಿಕಾ ನಿವೇಶನ ಹಂಚಿಕೆ ಮಾಡಲಾ ಗಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಉದ್ಯಮಿಗಳಿಗೆ ಶೇ. 75ರಷ್ಟು ಸಹಾಯಧನ ಒದಗಿಸಲಾಗುತ್ತಿದೆ.

ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ರವಿ ಅವರು ಸಮಿತಿಯ ಸಭೆಯನ್ನು ಕಾಲಕಾಲಕ್ಕೆ ನಡೆ ಸುತ್ತಾ ಬಂದಿದ್ದು, ಕೈಗಾರಿಕಾ ಪ್ರದೇಶದಲ್ಲಿ ತ್ವರಿತವಾಗಿ ಕೈಗಾರಿಕಾ ಘಟಕಗಳ ಕಾರ್ಯಾರಂಭಕ್ಕೆ ಎಲ್ಲಾ ಅಗತ್ಯ ನೆರವು ಮೂಲ ಸೌಕರ್ಯ ಸಮರ್ಪಕವಾಗಿ ಒದಗಿಸುವಂತೆ ಸೂಚನೆ ನೀಡಿದ್ದಾರೆ.

Translate »