ಮಡಿಕೇರಿ, ಜು.17- ಕೋವಿಡ್ ಸಂದಿಗ್ಧ ಪರಿಸ್ಥಿತಿಯ ಹಿನ್ನೆಲೆ ಕಳೆದ 3 ತಿಂಗಳಿನಿಂದ ಬಂದ್ ಆಗಿದ್ದ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳೆಲ್ಲವೂ ಅನ್ ಲಾಕ್ ಆಗಿವೆ. ಪರಿಣಾಮ ಕೊಡಗು ಜಿಲ್ಲೆಗೆ ಪ್ರವಾಸಿಗರ ಆಗಮನವಾಗುತ್ತಿದೆ.
ಮಳೆ, ಚಳಿಯ ನಡುವೆ ಮಾನ್ಸೂನ್ ಪ್ರವಾಸೋದ್ಯಮ ಹೆಸರಿನಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯಲು ಬರುತ್ತಿರು ವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಡಿಕೇರಿಯ ಪ್ರಕೃತಿ ಪ್ರಿಯರ ನೆಚ್ಚಿನ ತಾಣ ಅಬ್ಬಿ ಜಲಪಾತ ವೀಕ್ಷಿಸಲೆಂದು ಇಂದು ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಕಳೆದ ಒಂದು ವಾರದ ಮಳೆಗೆ ಧುಮ್ಮಿಕ್ಕಿ ಹರಿಯುತ್ತಿರುವ ಅಬ್ಬಿಯ ಸೊಬಗನ್ನು ನೋಡಿ ಪುಳಕಿತಗೊಂಡ ಪ್ರವಾಸಿಗರು ಜಿಲ್ಲೆಯ ಇತರ ಪ್ರವಾಸಿತಾಣಗಳಿಗೂ ತೆರಳುವ ಅಭಿಲಾಷೆ ವ್ಯಕ್ತಪಡಿಸಿದರು.
ಕೋವಿಡ್ ನಿಯಮ ಪಾಲಿಸಲು ಪ್ರವಾ ಸಿಗರಿಗೆ ಅಧಿಕಾರಿಗಳು ಹಾಗೂ ಸ್ವಯಂ ಸೇವಕರು ಸಲಹೆ ನೀಡುತ್ತಿದ್ದಾರೆ. ಪ್ರವಾಸಿ ಗರ ಆಗಮನದಿಂದ ಪ್ರವಾಸೋದ್ಯಮ ವನ್ನೇ ನಂಬಿರುವವರು ಕೊಂಚ ನೆಮ್ಮ ದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ದುಬಾರೆ ಯಲ್ಲಿಯೂ ರಿವರ್ ರ್ಯಾಫ್ಟಿಂಗ್ ಆರಂಭ ವಾಗಿದೆ. ಲಾಕ್‍ಡೌನ್ ಮತ್ತು ಕೊರೊನಾ ಸೋಂಕಿನ ಭೀತಿಯಿಂದ ಮೂಲೆ ಸೇರಿದ್ದ ರ್ಯಾಫ್ಟ್‍ಗಳು ಇದೀಗ ಕಾವೇರಿ ನದಿಗೆ ಇಳಿ ದಿದ್ದು, ಸಾಹಸ ಕ್ರೀಡೆಗೆ ಸಜ್ಜಾಗಿವೆ. ಆದರೆ ಕೆಲವು ಸಂಘಟನೆಗಳು ಕೋವಿಡ್ ಆತಂ ಕದ ಹಿನ್ನೆಲೆ ಪ್ರವಾಸಿಗರ ಆಗಮನವನ್ನು ಇಂದಿಗೂ ವಿರೋಧಿಸುತ್ತಿವೆ.
ಜಲ ಸೆಲೆಗಳಿಗೆ ಜೀವಕಳೆ: ಇನ್ನು ನಿರಂ ತರ ಸುರಿದ ಮಳೆಯಿಂದ ಗಿರಿ ಕಂದ ರದ ಮೂಲಕ ಧುಮ್ಮಿಕ್ಕುವ ಜಲಪಾತ ಗಳಿಗೆ ಜೀವಕಳೆ ತುಂಬಿವೆ. ಅಬ್ಬಿ ಫಾಲ್ಸ್, ಮೇದುರ ಅಬ್ಬಿ, ಕೋಟೆ ಅಬ್ಬಿ, ಇರ್ಪು, ಚೇಲಾವರ, ಮಲ್ಲಳ್ಳಿ ಜಲಪಾತಗಳು ಹಾಲ್ನೊರೆ ಸೂಸುತ್ತಾ ಧುಮ್ಮಿಕ್ಕುತ್ತಿವೆ. ಇನ್ನು ಕರಿಕೆ ರಸ್ತೆಯ ಉದ್ದಕ್ಕೂ ಮಳೆಗಾಲ ಹತ್ತಾರು ಜಲಪಾತಗಳು ಸೃಷ್ಟಿಯಾಗಿದ್ದು, ವಾಹನ ಸಂಚಾರಿಗಳಿಗೆ ಮುದ ನೀಡುತ್ತಿವೆ.
ರಂಗಸಮುದ್ರ ಸಮೀಪದ ಚಿಕ್ಲಿಹೊಳೆ ಜಲಾಶಯ ಜೂನ್ 2ನೇ ವಾರದಲ್ಲಿ ಭರ್ತಿ ಯಾಗಿದ್ದು, ಜಲಪಾತದ ಕೊನೆಯಲ್ಲಿರುವ ಅರ್ಧ ಚಂದ್ರಾಕೃತಿ ಮಾದರಿಯ ಹೊರ ಹರಿವಿನ ಮೂಲಕ ಜಲಾಶಯದ ನೀರು ನದಿಗೆ ಹರಿಯುತ್ತಿದೆ. ಜಲಾಶಯದ ಭದ್ರತೆಯ ದೃಷ್ಟಿಯಿಂದ ಜಲಾಶಯದ ಆವರಣಕ್ಕೆ ತೆರಳಲು ಸಾರ್ವಜನಿಕರಿಗೆ ನಿಷೇಧ ಹೇರಲಾ ಗಿದ್ದು, ಕೆಳ ಭಾಗದ ರಸ್ತೆಯ ಮೂಲಕವೇ ನೀರು ಧುಮ್ಮಿಕ್ಕುವುದನ್ನು ಕಣ್ತುಂಬಿಕೊಳ್ಳ ಬಹುದಾಗಿದೆ. ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇತ್ತ ಕಡೆ ಧಾವಿಸುತ್ತಿರುವುದು ಕಂಡು ಬರುತ್ತಿದೆ.