ಹಾರಂಗಿಗೆ ಉಸ್ತುವಾರಿ ಸಚಿವರಿಂದ ಬಾಗಿನ
ಕೊಡಗು

ಹಾರಂಗಿಗೆ ಉಸ್ತುವಾರಿ ಸಚಿವರಿಂದ ಬಾಗಿನ

July 17, 2021

ಮಡಿಕೇರಿ, ಜು.16- ಹಾರಂಗಿ ಅಣೆಕಟ್ಟು ಭರ್ತಿಯಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಅರಕಲಗೋಡು ಶಾಸಕ ಎ.ಟಿ. ರಾಮಸ್ವಾಮಿ, ಹುಣಸೂರು ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಚಾರು ಲತಾ ಸೋಮಲ್, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರುಗಳು ಶುಕ್ರ ವಾರ ಮೈದುಂಬಿದ ಹಾರಂಗಿ ಜಲಾಶ ಯಕ್ಕೆ ಸಾಂಪ್ರದಾಯಿಕ ಬಾಗಿನ ಸಮರ್ಪಿಸಿ ದರು. ಜಲಾಶಯದ 4 ಕ್ರೆಸ್ಟ್ ಗೇಟ್‍ಗಳಿಗೆ ಪೂಜೆ ಸಲ್ಲಿಸಿದ ಸಚಿವ ಸೋಮಣ್ಣ, ಗೇಟ್‍ನ ಸ್ವಯಂ ಚಾಲಿತ ಗುಂಡಿಯನ್ನು ಒತ್ತುವ ಮೂಲಕ ಜಲಾಶಯದಿಂದ ನದಿಗೆ 8 ಸಾವಿರ ಕ್ಯೂಸೆಕ್ ನೀರು ಹರಿಸಿದರು. ಸ್ಥಳದಲ್ಲಿದ್ದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಹಾರಂಗಿ ಜಲಾಶಯದ ನೀರಿನ ಸಂಗ್ರಹ ಸಾಮಥ್ರ್ಯ, ಪ್ರಸ್ತುತ ಸಂಗ್ರಹ ವಾಗಿರುವ ನೀರಿನ ಪ್ರಮಾಣ, ಒಳ ಹರಿವಿನ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭ ಮಾಹಿತಿ ನೀಡಿದ ಅಧಿಕಾರಿ ಗಳು ಹಾರಂಗಿಯ ಒಟ್ಟು 8.5 ಟಿಎಂಸಿ ನೀರಿನ ಸಂಗ್ರಹ ಸಾಮಥ್ರ್ಯ ಹೊಂದಿದ್ದು, 2859 ಅಡಿ ನೀರನ್ನು ಸಂಗ್ರಹಿಸಬಹುದಾ ಗಿದೆ. ಪ್ರಸ್ತುತ 2858 ಅಡಿ ನೀರಿದ್ದು, ಪ್ರವಾಹ ಮುನ್ನೆಚ್ಚರಿಕೆ ಮಾರ್ಗಸೂಚಿಯಂತೆ 2856 ಅಡಿ ನೀರನ್ನು ಮಾತ್ರವೇ ಶೇಖರಿಸ ಲಾಗುತ್ತದೆ. ಹೆಚ್ಚುವರಿ ನೀರನ್ನು ನದಿ ಮತ್ತು ನಾಲೆಗೆ ಹರಿಸಲಾಗುತ್ತದೆ. ಇದರಿಂದ ಹಾರಂಗಿ ಮತ್ತು ಕಾವೇರಿ ನದಿ ಪ್ರವಾಹ ತಡೆಯಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು. ಜಲಾಶಯದಿಂದ ನೀರನ್ನು ಹರಿಸುವ ಸಂದರ್ಭ ಕುಶಾಲ ನಗರದಲ್ಲಿ ಪ್ರವಾಹ ಆಗದಂತೆ ನೋಡಿ ಕೊಳ್ಳಬೇಕು. ಯವುದೇ ಕಾರಣಕ್ಕೂ ಜನರಿಗೆ ತೊಂದರೆಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಕೃತಿ ಹರಸಿದೆ: ಬಳಿಕ ಸುದ್ದಿಗಾರರೊಂ ದಿಗೆ ಮಾತನಾಡಿದ ಸಚಿವ ವಿ. ಸೋಮಣ್ಣ, ರಾಜ್ಯದಲ್ಲಿಯೇ ಈ ವರ್ಷ ಹಾರಂಗಿ ಜಲಾ ಶಯ ಮೊದಲು ಭರ್ತಿಯಾದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೊಡಗು, ಕೆ.ಆರ್.ನಗರ, ಮೈಸೂರು, ಹಾಸನ ಜಿಲ್ಲೆಗಳ 5 ತಾಲೂಕು ಗಳ 1.65 ಲಕ್ಷ ಹೆಕ್ಟೇರ್ ಪ್ರದೇಶಗಳಿಗೆ ಹಾರಂಗಿ ನೀರು ಒದಗಿಸುತ್ತಿದೆ. ರೈತರ ಖಾರೀಫ್ ಬೆಳೆ ಮತ್ತು ನದಿ ಹಾಗೂ ನಾಲೆಗೂ ನೀರನ್ನು ಹರಿಸಲಾಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ ಪ್ರಕೃತಿ ನೀರಿನ ವಿಚಾರದಲ್ಲಿ ಒಳ್ಳೆಯದನ್ನೇ ಮಾಡಿದೆ. ಎರಡು ವರ್ಷದಲ್ಲಿ ಬರ ಪರಿಸ್ಥಿತಿ ರಾಜ್ಯ ದಲ್ಲಿ ಕಂಡು ಬಂದಿಲ್ಲ. ಅತಿವೃಷ್ಟಿಯಿಂದ ತೊಂದರೆಯಾಗಿರಬಹುದು. ಆದರೆ ಕೃಷಿ ಚಟುವಟಿಕೆಗಳಿಗೆ ನೀರು ಸಿಕ್ಕಿದೆ ಎಂದು ಸಚಿವ ಸೋಮಣ್ಣ ಹೇಳಿದರು.

ಹಾರಂಗಿ ಜಲಾಶಯದ ಹೂಳೆತ್ತುವ ಕಾಮಗಾರಿಗೆ ಸಂಬಂಧಿಸಿದಂತೆ ಸರಕಾರ ಹಣ ಬಿಡುಗಡೆ ಮಾಡಿದ್ದು, ಶಾಸಕ ರಂಜನ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಚಾರು ಲತಾ ಸೋಮಲ್ ಅವರುಗಳು ಆಸಕ್ತಿ ವಹಿಸಿದ್ದಾರೆ ಎಂದು ಸಚಿವ ಸೋಮಣ್ಣ ಹೇಳಿದರು. ಟೆಂಡರ್ ಪ್ರಕ್ರಿಯೆ ಜಾರಿಯ ಲ್ಲಿದೆ. ಅದನ್ನು ಕೈಬಿಟ್ಟಿಲ್ಲ. 2 ಬಾರಿ ಟೆಂಡರ್ ಕರೆದ ಸಂದರ್ಭ ಅರ್ಹ ಗುತ್ತಿಗೆದಾರ ಸಂಸ್ಥೆ ಗಳು ಮುಂದೆ ಬಂದಿಲ್ಲ. ಹೀಗಾಗಿ ತಡ ವಾಗಿದೆ. 3ನೇ ಬಾರಿಗೆ ಅರ್ಹ ಗುತ್ತಿಗೆ ದಾರರು ಮುಂದೆ ಬಂದಲ್ಲಿ ಅವರಿಗೆ ಕಾಮಗಾರಿ ಒಪ್ಪಿಸಲು ಕ್ರಮ ಕೈಗೊಳ್ಳಲಾ ಗುತ್ತದೆ ಎಂದು ಸೋಮಣ್ಣ ಹೇಳಿದರು. ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಈವರೆಗೆ 95 ಲಕ್ಷ ರೂ. ನಷ್ಟವಾಗಿರುವ ಬಗ್ಗೆ ಜಿಲ್ಲಾಧಿ ಕಾರಿ ಮಾಹಿತಿ ನೀಡಿದ್ದಾರೆ. ಓರ್ವ ವ್ಯಕ್ತಿ ನೀರಿನಲ್ಲಿ ಬಿದ್ದು, ಮೃತಪಟ್ಟಿದ್ದಾರೆ. ಅವರಿಗೆ ಪರಿಹಾರ ನೀಡಲು ಕೂಡ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಗಣ್ಯರು ಹಾರಂಗಿ ಜಲಾಶಯದ ಕೆಳ ಭಾಗದಲ್ಲಿರುವ ಕಾವೇರಿ ಮಾತೆಯ ಗುಡಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಮಹದೇವ್, ಮಾಜಿ ಶಾಸಕ ಸಿ.ರಮೇಶ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಸೇರಿ ದಂತೆ ಬಿಜೆಪಿ ಪ್ರಮುಖರು ಹಾಜರಿದ್ದರು.

Translate »