ಜಿಲ್ಲೆಯಲ್ಲಿ ನೂತನ ವಿವಿ ಸ್ಥಾಪನೆಗೆ ಅಗತ್ಯ ನೆರವು
ಚಾಮರಾಜನಗರ

ಜಿಲ್ಲೆಯಲ್ಲಿ ನೂತನ ವಿವಿ ಸ್ಥಾಪನೆಗೆ ಅಗತ್ಯ ನೆರವು

July 17, 2021

ಚಾಮರಾಜನಗರ, ಜು.16-ಚಾಮ ರಾಜನಗರ ಜಿಲ್ಲೆಗೆ ಪ್ರತ್ಯೇಕ ನೂತನ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಸರ್ಕಾರ ನಿರ್ಧ ರಿಸಿದ್ದು, ಅಗತ್ಯವಿರುವ ಎಲ್ಲಾ ನೆರವು ಹಾಗೂ ಸಹಕಾರವನ್ನು ಜಿಲ್ಲಾಡಳಿತ ದಿಂದ ನೀಡಲಾಗುವುದು ಎಂದು ಜಿಲ್ಲಾ ಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ನೂತನ ವಿಶ್ವವಿದ್ಯಾನಿಲಯ ಸ್ಥಾಪನೆ ಸಂಬಂಧ ತಮ್ಮ ಕಚೇರಿ ಸಭಾಂಗಣದ ಲ್ಲಿಂದು ನಡೆದ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದಿಂದ ಜಿಲ್ಲೆಯಲ್ಲಿ ಪ್ರತ್ಯೇಕ ನೂತನ ವಿಶ್ವವಿದ್ಯಾನಿಲಯ ಸ್ಥಾಪಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾ ಗಿದೆ. ಹಲವು ವೈಶಿಷ್ಟ್ಯ ಹೊಂದಿರುವ ಚಾಮರಾಜನಗರ ತಮಿಳುನಾಡು ಹಾಗೂ ಕೇರಳ ಸಂಪರ್ಕ ಸಾಧಿಸುವ ಜಿಲ್ಲೆಯಾ ಗಿದೆ. ಜಾನಪದ, ಮಹದೇಶ್ವರರ ಮಹಾ ಕಾವ್ಯ, ಸಾಂಸ್ಕøತಿಕ ಹಿನ್ನೆಲೆ, ಅರಣ್ಯ ಸಂಪತ್ತು, ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿ ರುವ ಜಿಲ್ಲೆಗೆ ತನ್ನದೇ ಆದ ವಿಶ್ವವಿದ್ಯಾ ಲಯದ ಅತ್ಯವಶ್ಯಕತೆ ಇದೆ ಎಂದರು.

ಕೌಶಲ ಹಾಗೂ ಗಿರಿಜನರ ವಿಷಯ ಗಳನ್ನು ಒಳಗೊಂಡ ವಿಶೇಷ ವಿಶ್ವವಿದ್ಯಾ ಲಯವನ್ನಾಗಿ ಜಿಲ್ಲೆಯಲ್ಲಿ ನೂತನ ವಿಶ್ವ ವಿದ್ಯಾಲಯ ರೂಪಿಸಲು ಅವಕಾಶವಿದೆ. ವೃತ್ತಿ ಆಧಾರಿತ ಕೋರ್ಸುಗಳನ್ನು ಆರಂಭಿಸ ಬಹುದು. ಜಿಲ್ಲಾಡಳಿತದಿಂದ ಚಾಮರಾಜ ನಗರ ತಾಲೂಕಿನ ಭಾಗದಲ್ಲಿ ಲಭ್ಯವಿರುವ ಕಡೆ ವಿವಿಗೆ ಹೆಚ್ಚುವರಿ ಭೂಮಿ ಗುರುತಿ ಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ವಿ.ವಿ ಸ್ಥಾಪನೆಯ ತಜ್ಞರ ಸಮಿತಿ ಅಧ್ಯಕ್ಷ ಡಾ.ಜಿ.ಹೇಮಂತ್‍ಕುಮಾರ್ ಮಾತ ನಾಡಿ, ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಈಗಾಗಲೇ ಸಭೆಗಳನ್ನು ನಡೆಸ ಲಾಗಿದೆ. ಮುಂದಿನ 25 ವರ್ಷಗಳಿಗೆ ಅಗತ್ಯ ಬೀಳಬಹುದಾದ ಯೋಜನೆಯೊಂ ದಿಗೆ 100 ಎಕರೆ ಜಾಗದಲ್ಲಿ ವಿ.ವಿ ಕ್ಯಾಂಪಸ್ ನಿರ್ಮಿಸಬೇಕಿದೆ. ಈಗಿರುವ ವಿಷಯಗಳ ಕೋರ್ಸ್‍ಗಳೊಂದಿಗೆ ಉದ್ಯೋಗ ಆಧಾರಿತ ಕೋರ್ಸ್‍ಗಳನ್ನು ಆರಂಭಿಸಲಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾ ಯಿನಿದೇವಿ, ತಹಸೀಲ್ದಾರರಾದ ಚಿದಾನಂದ ಗುರುಸ್ವಾಮಿ, ರವಿಶಂಕರ್, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಸಮಿತಿಯ ಸದಸ್ಯ ಪ್ರೊ.ಟಿ.ಡಿ. ಕೆಂಪರಾಜು, ಅಂಬೇಡ್ಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಶಿವಬಸವಯ್ಯ, ಮೈಸೂರು ವಿಶ್ವವಿದ್ಯಾ ನಿಲಯದ ಸಿಂಡಿ ಕೇಟ್ ಸದಸ್ಯ ಪ್ರದೀಪ್‍ಕುಮಾರ್ ದೀಕ್ಷಿತ್, ಎಸ್ಟೇಟ್ ಆಫೀಸರ್ ಜಯರಾಂ, ಪಿಎಂಇ ಬೋರ್ಡ್‍ನ ಚೇರ್ ಮೆನ್ ಲೋಕ್‍ನಾಥ್, ಕಾರ್ಯಪಾಲಕ ಇಂಜಿನಿಯರ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್, ಜಿಲ್ಲೆಯ ಇತರೆ ಇಲಾಖೆಗಳ ಅಧಿಕಾರಿ ಗಳು ಸಭೆಯಲ್ಲಿದ್ದರು. ಸಭೆಗೂ ಮೊದಲು ತಜ್ಞರ ಸಮಿತಿಯು ಸದಸ್ಯರು ಡಾ. ಬಿ.ಆರ್. ಅಂಬೇಡ್ಕರ್ ಸ್ನಾತ್ತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿ, ಮೂಲ ಸೌಕರ್ಯ ಪರಿಶೀಲಿಸಿದರು.

Translate »