ಕೊಡಗು

ಮಡಿಕೇರಿಯಲ್ಲಿ ವಿಚಾರಣಾಧೀನ ಕೈದಿ ಸಾವು
ಕೊಡಗು

ಮಡಿಕೇರಿಯಲ್ಲಿ ವಿಚಾರಣಾಧೀನ ಕೈದಿ ಸಾವು

April 26, 2018

ಮಡಿಕೇರಿ: ನಗರದ ಕೇಂದ್ರ ಕಾರಾಗೃಹದಲ್ಲಿ ಪ್ರಕರಣವೊಂದರ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಕೈದಿಯೊಬ್ಬ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬಾಳೆಲೆಯ ದೇವನೂರು ನಿವಾಸಿ ಮುತ್ತ(32) ಮೃತಪಟ್ಟ ವಿಚಾರಣಾಧೀನ ಕೈದಿಯಾಗಿದ್ದಾನೆ, ಮಂಗಳವಾರ ಸಂಜೆ ವೇಳೆ ಬ್ಯಾರಕ್‍ನಲ್ಲಿದ್ದ ಮುತ್ತನಿಗೆ ಎದೆನೋವು ಕಾಣ ಸಿಕೊಂಡಿತ್ತು. ಜೈಲು ಸಿಬ್ಬಂದಿ ಆತನನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುತ್ತ ಮೃತಪಟ್ಟಿದ್ದಾನೆ. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಸಮ್ಮುಖದಲ್ಲಿ ಮೃತ ದೇಹದ ಮಹಜರು ನಡೆಸಲಾಯಿತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು…

ವಿರಾಜಪೇಟೆಯಲ್ಲಿ ಬಿಜೆಪಿಯಿಂದ ಶಾಸಕ ಕೆ.ಜಿ.ಬೋಪಯ್ಯ ನಾಮಪತ್ರ ಸಲ್ಲಿಕೆ
ಕೊಡಗು

ವಿರಾಜಪೇಟೆಯಲ್ಲಿ ಬಿಜೆಪಿಯಿಂದ ಶಾಸಕ ಕೆ.ಜಿ.ಬೋಪಯ್ಯ ನಾಮಪತ್ರ ಸಲ್ಲಿಕೆ

April 25, 2018

ವಿರಾಜಪೇಟೆ: ವಿರಾಜಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಕೆ.ಜಿ.ಬೋಪಯ್ಯ, ಕಾಂಗ್ರೆಸ್ ಬಂಡಾಯ ಅಭ್ಯ ರ್ಥಿಗಳಾಗಿ ಅರಣ್ಯ ಅಭಿವೃದ್ಧಿ ನಿಗಮದ ಉಪಾ ಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ, ಪಕ್ಷೇತರರಾಗಿ ವಕೀಲ ಅಚ್ಚಪಂಡ ಗಿರೀಶ್, ಗಿರಿ ಜನ ಮುಖಂಡ ಪಿ.ಎಸ್.ಮುತ್ತ, ಪೈಯಾಜ್ ಸೇರಿ 6 ಮಂದಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪದ್ಮಿನಿ ಪೊನ್ನಪ್ಪ, ನಾನು 2008 ಮತ್ತು 2013ರಲ್ಲೂ ಕಾಂಗ್ರೆಸ್ ಟಿಕೆಟ್…

ಮಡಿಕೇರಿ: ಕೆ.ಪಿ.ಚಂದ್ರಕಲಾ ಸೇರಿ 10 ಮಂದಿ ನಾಮಪತ್ರ ಸಲ್ಲಿಕೆ
ಕೊಡಗು

ಮಡಿಕೇರಿ: ಕೆ.ಪಿ.ಚಂದ್ರಕಲಾ ಸೇರಿ 10 ಮಂದಿ ನಾಮಪತ್ರ ಸಲ್ಲಿಕೆ

April 25, 2018

ಮಡಿಕೇರಿ: ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಕೆ.ಪಿ.ಚಂದ್ರ ಕಲಾ ಸೇರಿದಂತೆ ಒಟ್ಟು 10 ನಾಮ ಪತ್ರಗಳು ಸಲ್ಲಿಕೆಯಾಗಿವೆ. ಮಹಿಳಾ ಎಂಪವರ್‍ಮೆಂಟ್ ಪಾರ್ಟಿ (ಎಂಇಪಿ)ಯಿಂದ ಮಡಿಕೇರಿ ಕ್ಷೇತ್ರದ ಮಹಿಳಾ ಅಭ್ಯರ್ಥಿಯಾಗಿ ಗೋಣ ಕೊಪ್ಪ ಮೂಲದ ರಶೀದಾ ಬೇಗಂ ಅವರು ಎಂಇಪಿ ಪಕ್ಷದ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಹೆಚ್.ಡಿ.ಬಸವರಾಜು ಅವರೊಂದಿಗೆ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾ ಉಪಚುನಾ ವಣಾಧಿಕಾರಿ ರಮೇಶ್ ಕೋನರೆಡ್ಡಿ ಅವ ರಿಗೆ ನಾಮಪತ್ರ ಸಲ್ಲಿಸಿದರು. ಬಳಿಕ…

ಏ.27, ಗೋಣ ಕೊಪ್ಪಲಿಗೆ ರಾಹುಲ್‍ಗಾಂಧಿ ಭೇಟಿ ಹಿರಿಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಕೊಡಗು

ಏ.27, ಗೋಣ ಕೊಪ್ಪಲಿಗೆ ರಾಹುಲ್‍ಗಾಂಧಿ ಭೇಟಿ ಹಿರಿಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

April 25, 2018

ಗೋಣ ಕೊಪ್ಪಲು: ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೆ ರಾಜಕೀಯ ರಂಗು ಏರತೊಡಗಿದೆ. ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ವಾಣ ಜ್ಯ ನಗರ ಗೋಣ ಕೊಪ್ಪಲುವಿಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‍ಗಾಂಧಿ ಚುನಾವಣಾ ಪ್ರಚಾ ರಕ್ಕೆ ಆಗಮಿಸುತ್ತಿದ್ದಾರೆ. ಏ.27ರಂದು ರಾಹುಲ್‍ಗಾಂಧಿ ಕರ್ನಾಟಕ ರಾಜ್ಯಕ್ಕೆ ಆಗಮಿಸುತ್ತಿದ್ದು, ಅಂದು 3 ಗಂಟೆಗೆ ಗೋಣ ಕೊಪ್ಪಲುವಿನ ದಸರಾ ಮೈದಾನದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಧರ್ಮಸ್ಥಳದ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 3 ಗಂಟೆಗೆ ಗೋಣ ಕೊಪ್ಪಲು…

ಕಾಂಗ್ರೆಸ್ ಆಡಳಿತದಲ್ಲಿ ಅನುದಾನ ಕೊರತೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ
ಕೊಡಗು

ಕಾಂಗ್ರೆಸ್ ಆಡಳಿತದಲ್ಲಿ ಅನುದಾನ ಕೊರತೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ

April 25, 2018

ವಿರಾಜಪೇಟೆ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಕೊಡಗಿನ ಜಮ್ಮ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಕೊಡಗಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಗೊಳಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ ಕಾರ ಐದು ವರ್ಷದ ಅವಧಿಯಲ್ಲಿ ಅನು ದಾನದ ಕೊರತೆಯಿಂದ ಯಾವುದೇ ಅಭಿ ವೃದ್ಧಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಸ್ಥಳೀಯ ತಾಲೂಕು ಮೈದಾನ ದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆ ಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ…

ಜಿಲ್ಲೆಯ 2 ಕ್ಷೇತ್ರಗಳಿಂದ ಒಟ್ಟು 25 ಮಂದಿ ನಾಮಪತ್ರ ಸಲ್ಲಿಕೆ
ಕೊಡಗು

ಜಿಲ್ಲೆಯ 2 ಕ್ಷೇತ್ರಗಳಿಂದ ಒಟ್ಟು 25 ಮಂದಿ ನಾಮಪತ್ರ ಸಲ್ಲಿಕೆ

April 25, 2018

ಮಡಿಕೇರಿ:  ವಿಧಾನಸಭಾ ಚುನಾವಣೆ ಸಂಬಂಧ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಮಂಗಳವಾರ ಜಿಲ್ಲೆಯ ಎರಡೂ ಕ್ಷೇತ್ರಗಳಿಂದ ಒಟ್ಟು 16 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಇಂದು ಕೆ.ಪಿ.ಚಂದ್ರಕಲಾ (ಕಾಂಗ್ರೆಸ್), ಭಾರ್ಗವ(ಹಿಂದೂ ಮಹಾಸಭಾ), ರಶೀದಾ ಬೇಗಂ(ಎಂಇಪಿ), ಎಂ.ಕಲೀಲ್, ಪಿ.ಯು.ಕಿಶನ್, ವೆಂಕಟೇಶ್, ಹೇಮಂತ್ ಕುಮಾರ್, ನಾಪಂಡ ಮುತ್ತಪ್ಪ, ಕೆ.ಬಿ.ರಾಜು, ಎಂ.ಮಹಮದ್ ಹನೀಫ್ ಇವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಇಂದು ಕೆ.ಜಿ.ಬೋಪಯ್ಯ (ಬಿಜೆಪಿ), ಪದ್ಮಿನಿ ಪೊನ್ನಪ್ಪ, ಹರೀಶ್ ಬೋಪಣ್ಣ, ಅಚ್ಚಪಂಡ ಗಿರಿ ಉತ್ತಪ್ಪ,…

ಎ.ಕೆ.ಸುಬ್ಬಯ್ಯ ಭೇಟಿ ಮಾಡಿದ ಸಂಕೇತ್ ಪೂವಯ್ಯ
ಕೊಡಗು

ಎ.ಕೆ.ಸುಬ್ಬಯ್ಯ ಭೇಟಿ ಮಾಡಿದ ಸಂಕೇತ್ ಪೂವಯ್ಯ

April 25, 2018

ಗೋಣ ಕೊಪ್ಪಲು: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಹಿರಿಯ ರಾಜಕೀಯ ಮುತ್ಸದಿ ಹೈಕೋರ್ಟಿನ ಖ್ಯಾತ ವಕೀಲರಾದ ಎ.ಕೆ.ಸುಬ್ಬಯ್ಯನವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸುಬ್ಬಯ್ಯನವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ಸಂಕೇತ್, ಕ್ಷೇತ್ರದ ರಾಜಕಾರಣದ ಬಗ್ಗೆ ವಿವರ ನೀಡಿದರು. ಈ ಸಂದರ್ಭ ಸುಬ್ಬಯ್ಯನವರು ಸಂಕೇತ್ ಪೂವಯ್ಯ ನವರಿಗೆ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಈ ವೇಳೆ ವಿರಾಜಪೇಟೆ ಕ್ಷೇತ್ರದ ಕ್ಷೇತ್ರ ಅಧ್ಯಕ್ಷ ಎಸ್.ಹೆಚ್ ಮತೀನ್ ಉಪಸ್ಥಿತರಿದ್ದರು.

ಬಾರ್ ಕ್ಯಾಷಿಯರ್ ಮೇಲೆ ನಾಲ್ವರ ಹಲ್ಲೆ
ಕೊಡಗು

ಬಾರ್ ಕ್ಯಾಷಿಯರ್ ಮೇಲೆ ನಾಲ್ವರ ಹಲ್ಲೆ

April 25, 2018

ಸೋಮವಾರಪೇಟೆ: ಬಾರ್ ಕ್ಯಾಷಿಯರ್ ಮೇಲೆ ನಾಲ್ವರ ತಂಡ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪಟ್ಟಣದ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ಬಾರ್‍ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡು ತ್ತಿರುವ ಶರತ್ ಎಂಬವರ ಮೇಲೆ ಕಲ್ಕಂದೂರು ಗ್ರಾಮದ ಡೀಲಾಕ್ಷ, ಪ್ರಸನ್ನ, ನಿಖಿಲ್, ಗಾಂಧಿ ಅವರುಗಳು ಹಲ್ಲೆ ನಡೆಸಿದ್ದು, ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖ ಲಾಗಿ ಚಿಕಿತ್ಸೆ ಪಡೆದು, ಪೊಲೀಸರಿಗೆ ದೂರು ನೀಡಿದ್ದಾರೆ. ನಾಲ್ವರು ಆರೋಪಿಗಳು ಮದ್ಯ ಸೇವಿ ಸಲು ಬಾರ್‍ಗೆ ಬಂದಿದ್ದ ಸಂದರ್ಭ ಹಳೆಯ ಬಾಕಿ…

ಕುಲ್ಲೇಟಿರ ಕಪ್ ಹಾಕಿ ನಮ್ಮೆ ಪುಚ್ಚಿಮಂಡ, ಪಾಡೆಯಂಡ, ನಾಗಂಡ ಸೇರಿ 11 ತಂಡ ಮುನ್ನಡೆ
ಕೊಡಗು

ಕುಲ್ಲೇಟಿರ ಕಪ್ ಹಾಕಿ ನಮ್ಮೆ ಪುಚ್ಚಿಮಂಡ, ಪಾಡೆಯಂಡ, ನಾಗಂಡ ಸೇರಿ 11 ತಂಡ ಮುನ್ನಡೆ

April 25, 2018

ನಾಪೋಕ್ಲು: ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವರ್ಷದ 22ನೇ ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ನುಚ್ಚಿಮಣ ಯಂಡ, ಪುಚ್ಚಿಮಂಡ, ಪಾಡೆಯಂಡ, ಪಟ್ರಪಂಡ, ಕುಂಡ್ಯೋಳಂಡ, ಪಾಲೆಯಂಡ, ಮದ್ರಿರ, ನಾಗಂಡ, ಚಂದೂರ, ಮುರುವಂಡ, ಕೀತಿಯಂಡ, ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಇಂದು ನಡೆದ ಮೊದಲ ಪಂದ್ಯದಲ್ಲಿ ಪಾಲೇಯಂಡ ತಂಡವು ಮೂವೇರ ತಂಡ ವನ್ನು 3-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದು ಕೊಂಡಿತು, ಪಾಲೇಯಂಡ ಪರ ಸುರಿ…

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ; ಸಿಹೆಚ್‍ವಿ
ಕೊಡಗು

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ; ಸಿಹೆಚ್‍ವಿ

April 24, 2018

ವಿರಾಜಪೇಟೆ: ಕಾಂಗ್ರೆಸ್ ಸರಕಾರ ಐದು ವರ್ಷದ ಅವಧಿಯಲ್ಲಿ ರಾಜ್ಯದ ಜನತೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಂಸದ ವಿಜಯಶಂಕರ್ ಹೇಳಿದರು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕ್ಷೇತ್ರದ ಅಭ್ಯರ್ಥಿ ಚಪ್ಪುಡಿರ ಅರುಣ್ ಮಾಚಯ್ಯ ಅವರು ನಾಮಪತ್ರ ಸಲ್ಲಿಸುವ ಮುನ್ನ ಪಟ್ಟಣದ ಸೆರಿನಿಟಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು-ಮುಖಂಡರುಗಳ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯಶಂಕರ್, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ…

1 184 185 186 187
Translate »