ಮಡಿಕೇರಿ: ಕೆ.ಪಿ.ಚಂದ್ರಕಲಾ ಸೇರಿ 10 ಮಂದಿ ನಾಮಪತ್ರ ಸಲ್ಲಿಕೆ
ಕೊಡಗು

ಮಡಿಕೇರಿ: ಕೆ.ಪಿ.ಚಂದ್ರಕಲಾ ಸೇರಿ 10 ಮಂದಿ ನಾಮಪತ್ರ ಸಲ್ಲಿಕೆ

April 25, 2018

ಮಡಿಕೇರಿ: ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಕೆ.ಪಿ.ಚಂದ್ರ ಕಲಾ ಸೇರಿದಂತೆ ಒಟ್ಟು 10 ನಾಮ ಪತ್ರಗಳು ಸಲ್ಲಿಕೆಯಾಗಿವೆ.

ಮಹಿಳಾ ಎಂಪವರ್‍ಮೆಂಟ್ ಪಾರ್ಟಿ (ಎಂಇಪಿ)ಯಿಂದ ಮಡಿಕೇರಿ ಕ್ಷೇತ್ರದ ಮಹಿಳಾ ಅಭ್ಯರ್ಥಿಯಾಗಿ ಗೋಣ ಕೊಪ್ಪ ಮೂಲದ ರಶೀದಾ ಬೇಗಂ ಅವರು ಎಂಇಪಿ ಪಕ್ಷದ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಹೆಚ್.ಡಿ.ಬಸವರಾಜು ಅವರೊಂದಿಗೆ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾ ಉಪಚುನಾ ವಣಾಧಿಕಾರಿ ರಮೇಶ್ ಕೋನರೆಡ್ಡಿ ಅವ ರಿಗೆ ನಾಮಪತ್ರ ಸಲ್ಲಿಸಿದರು. ಬಳಿಕ ಮಾತ ನಾಡಿದ ಹೆಚ್.ಡಿ.ಬಸವರಾಜು, ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ನೌಹೇರಾ ಶೇಕ್ ಅವರ ಕನಸನ್ನು ನನಸು ಮಾಡಲು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲಾಗಿದೆ. ಜಿಲ್ಲೆಯ ಎರಡು ಕ್ಷೇತ್ರಗಳಿಂದಲೂ ಪಕ್ಷದಿಂದ ಸ್ಪರ್ಧಿಸಲಾ ಗುತ್ತಿದೆ ಎಂದು ಬಸವರಾಜು ತಿಳಿಸಿದರು.

ಸಮಾಜವಾದಿ ಪಕ್ಷದಿಂದ ಸಿ.ಕಿಷನ್ ಪೂವಯ್ಯ ಉಪಚುನಾವಣಾಧಿಕಾರಿ ಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂಸಿಂಗ್ ಅವರನ್ನು ಕರೆ ತಂದು ಪ್ರಚಾರ ನಡೆಸುವು ದಾಗಿ ಚಿತ್ರನಟ, ನಿರ್ದೇಶಕರು ಆಗಿರುವ ಕಿಷನ್ ಪೂವಯ್ಯ ತಿಳಿಸಿದರು. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು. ಇಂಡಿಯನ್ ರಿಪಬ್ಲಿಕ್ ಪಾರ್ಟಿಯಿಂದ ಕೆ.ಬಿ.ರಾಜು ನಾಮ ಪತ್ರ ಸಲ್ಲಿಸಿದರೇ, ಪಕ್ಷೇತರ ಅಭ್ಯರ್ಥಿ ಗಳಾಗಿ ಮಡಿಕೇರಿಯ ಸಂಪಿಗೆಕಟ್ಟೆ ನಿವಾಸಿ ಎಂ.ಖಲೀಲ್ ಹದಿನೈದನೇ ಬಾರಿಗೆ ನಾಮ ಪತ್ರ ಸಲ್ಲಿಸಿದರು. ಮಡಿಕೇರಿಯ ಚಾಮುಂಡೇ ಶ್ವರಿ ನಗರ ನಿವಾಸಿ ಮೈ ಟೈಸನ್ ಎಂ.ಮಹ ಮ್ಮದ್ ಹನೀಫ್, ಕುಶಾಲನಗರದ ವೆಂಕ ಟೇಶ್, ಹೇಮಂತ್ ಕುಮಾರ್ ಅವರುಗಳು ಪಕ್ಷೇತರ ಅಭ್ಯರ್ಥಿಗಳಾಗಿ ಉಪವಿಭಾಗಾ ಧಿಕಾರಿ ರಮೇಶ್ ಕೋನಾರೆಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ದಾಖಲೆ ಸರಿ ಇಲ್ಲದ್ದರಿಂದ ಸೋಮವಾರಪೇಟೆ ಹೆಗ್ಗಡೆಮನೆ ಚಂದ್ರಶೇಖರ್, ಸೂರ್ಲಬ್ಬಿ ಗ್ರಾಮದ ಕನ್ನಿಕಂಡ ಪವನ್ ಅವರ ನಾಮ ಪತ್ರಗಳನ್ನು ಚುನಾವಣಾಧಿಕಾರಿಗಳು ಸ್ವೀಕರಿಸಲಿಲ್ಲ. ನಾಮಪತ್ರ ಸಲ್ಲಿಸಲು ನಿಗ ಧಿತ ಸಮಯ ಮೀರಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಡಿಕೇರಿ ಕ್ಷೇತ್ರ ದಿಂದ ಸ್ಪರ್ಧಿಸಲು ಮುಂದಾಗಿದ್ದ ದಿಡ್ಡಳ್ಳಿ ಹೋರಾಟಗಾರ್ತಿ ಜೆ.ಕೆ.ಮುತ್ತಮ್ಮ ಮತ್ತು ಬೆಂಗಳೂರು ಮೂಲದ ನಿವಾಸಿ ಸಂಕರ ಮಣ ಅವರನ್ನು ಹಿಂದಕ್ಕೆ ಕಳುಹಿಸಲಾಯಿತು.

Translate »