ಕುಲ್ಲೇಟಿರ ಕಪ್ ಹಾಕಿ ನಮ್ಮೆ ಪುಚ್ಚಿಮಂಡ, ಪಾಡೆಯಂಡ, ನಾಗಂಡ ಸೇರಿ 11 ತಂಡ ಮುನ್ನಡೆ
ಕೊಡಗು

ಕುಲ್ಲೇಟಿರ ಕಪ್ ಹಾಕಿ ನಮ್ಮೆ ಪುಚ್ಚಿಮಂಡ, ಪಾಡೆಯಂಡ, ನಾಗಂಡ ಸೇರಿ 11 ತಂಡ ಮುನ್ನಡೆ

April 25, 2018

ನಾಪೋಕ್ಲು: ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವರ್ಷದ 22ನೇ ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ನುಚ್ಚಿಮಣ ಯಂಡ, ಪುಚ್ಚಿಮಂಡ, ಪಾಡೆಯಂಡ, ಪಟ್ರಪಂಡ, ಕುಂಡ್ಯೋಳಂಡ, ಪಾಲೆಯಂಡ, ಮದ್ರಿರ, ನಾಗಂಡ, ಚಂದೂರ, ಮುರುವಂಡ, ಕೀತಿಯಂಡ, ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು.

ಇಂದು ನಡೆದ ಮೊದಲ ಪಂದ್ಯದಲ್ಲಿ ಪಾಲೇಯಂಡ ತಂಡವು ಮೂವೇರ ತಂಡ ವನ್ನು 3-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದು ಕೊಂಡಿತು, ಪಾಲೇಯಂಡ ಪರ ಸುರಿ ಸುಬ್ಬಯ್ಯ, ರಾಬಿನ್ ದೇವಯ್ಯ ಒಂದೊಂದು ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣ ರಾದರು. ನಂತರದ ಪಂದ್ಯಾಟದಲ್ಲಿ ಮದ್ರೀರ ತಂಡವು ಬಡ್ಡೀರ ತಂಡವನ್ನು 1-0 ಗೋಲು ಗಳಿಂದ ಮಣ ಸಿತು. ಮದ್ರೀರ ಹರೀನ್ ಅಯ್ಯಪ್ಪ ಗೆಲುವಿನ ಗೋಲು ಗಳಿಸಿದರು.

ಮೂರನೇ ಪಂದ್ಯವು ಪೋರ್ಕೂವಂಡ ಮತ್ತು ಚಂದೂರ ತಂಡಗಳ ನಡುವೆ ನಡೆದು ಚಂದೂರ ತಂಡವು 3-0 ಗೋಲಿನಿಂದ ವಿಜಯ ಸಾಧಿಸಿತು. ಚಂದೂರ ತಂಡದ ಪರ ಪ್ರಧಾನ್ ಪೂವಣ್ಣ ಹ್ಯಾಟ್ರಿಕ್ ಗೋಲು ಬಾರಿಸಿ ತಂಡದ ಗೆಲು ವಿಗೆ ಕಾರಣರಾದರು.
ಮುರುವಂಡ ತಂಡವು ಮುಂಡಚಾಡೀರ ತಂಡವನ್ನು 5-0 ಗೋಲಿನಿಂದ ಮಣ ಸಿತು. ಏಕಪಕ್ಷೀಯವಾಗಿದ್ದ ಈ ಪಂದ್ಯದಲ್ಲಿ ಮುರು ವಂಡ ತಂಡದ ಅಣ್ಣಯ್ಯ 3, ತನುಶ್ 1, ಶಶಾಂಕ್ 1 ಗೋಲು ಗಳಿಸಿ ಭರ್ಜರಿ ಗೆಲುವಿಗೆ ಕಾರಣರಾದರು.

ಕೀತಿಯಂಡ ತಂಡವು ಮಂದೆಯಂಡ ತಂಡದ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಿತು. ಕೀತಿಯಂಡ ದೇವಯ್ಯ 1 ಗೋಲು ಹೊಡೆದರು.

ನಾಗಂಡ ತಂಡವು ಚೇಮೆರ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ನಾಗಂಡ ಪರ ರೋಶನ್ 2, ದಿವಿನ್ 1 ಗೋಲು ಬಾರಿಸಿದರು.

ಎರಡನೇ ಮೈದಾನದಲ್ಲಿ ನಡೆದ ಮೊದಲ ಪಂದ್ಯಾಟದಲ್ಲಿ ನುಚ್ಚಿಮಣ ಯಂಡ ತಂಡ ಕಂಬೇಯಂಡ ತಂಡಗಳ ನಡುವೆ ನಡೆದು ನಿಗದಿತ ಅವಧಿಯಲ್ಲಿ ಯಾವುದೇ ಗೋಲು ಬಾರದ ಕಾರಣ ಟೈ ಬ್ರೇಕರ್ ವ್ಯವಸ್ಥೆ ಯನ್ನು ಅಳವಡಿಸಲಾಯಿತು. ಇದರಲ್ಲಿ ನುಚ್ಚಿಮಣ ಯಂಡ ತಂಡವು 5-4 ಗೋಲಿನಿಂದ ಜಯಸಾಧಿಸಿತು.

ನಂತರದ ಪಂದ್ಯಾಟದಲ್ಲಿ ಪುಚ್ಚಿಮಂಡ ತಂಡವು ಚಂಗೇಟಿರ ತಂಡವನ್ನು 1-0 ಗೋಲಿನಿಂದ ಮಣ ಸಿತು. ಕುತೂಹಲ ದಿಂದ ಕೂಡಿದ ಆಟದಲ್ಲಿ ಸುಬ್ಬಯ್ಯ ನವರು ಗೋಲು ಹೊಡೆಯುವುದರ ಮೂಲಕ ಪುಚ್ಚಿಮಂಡಕ್ಕೆ ಜಯ ತಂದುಕೊಟ್ಟರು.
ನಂತರದ ಪಂದ್ಯದಲ್ಲಿ ಪಾಡೇಯಂಡ ತಂಡವು ಮಂಡಂಗಡ ತಂಡವನ್ನು 4-1 ಗೋಲಿನಿಂದ ಸೋಲಿಸಿತು. ಪಾಡೇಯಂಡ ತಂಡದ ಪರ ಸಂತೋಷ್ ಅಯ್ಯಪ್ಪ 2, ಮಂದಣ್ಣ 1, ವರುಣ್ 1 ಗೋಲು ಗಳಿಸಿದರೆ, ಮಂಡಂಗಡ ಪರ ವಿಕ್ಕಿ ಮಂದಣ್ಣ 1 ಗೋಲು ಬಾರಿಸಿದರು.

ಐದನೇ ಪಂದ್ಯಾಟದಲ್ಲಿ ಪಟ್ರಪಂಡ ತಂಡವು ಅಪ್ಪಚಟ್ಟೋಳಂಡ ತಂಡವನ್ನು 2-1 ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು. ಪಟ್ರಪಂಡ ಪರ ವಿತಾ ಗಣಪತಿ 2 ಗೋಲು ಬಾರಿಸಿದರೆ, ಅಪ್ಪಚಟ್ಟೋಳಂಡ ಪರ ಯಾನ್ ಬೋಪಣ್ಣ 1 ಗೋಲು ಬಾರಿಸಿದರು.

ಕುಂಡ್ಯೋಳಂಡ ಮತ್ತು ಕೋಳೇರ ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಕುಂಡ್ಯೋಳಂಡ ತಂಡವು ಕೋಳೇರ ತಂಡವನ್ನು 2-1 ಗೋಲಿನಿಂದ ಮಣ ಸಿತು. ಕುಂಡ್ಯೋಳಂಡ ಪ್ರಪುಲ್ ಪೊನ್ನಪ್ಪ, ಲಂಚನ್ ಚಿಣ್ಣಪ್ಪ ಗೋಲು ಹೊಡೆದರೆ, ಕೋಳೇರ ಪರ ಮಿಲನ್ ಮಾಚಯ್ಯ 1 ಗೋಲು ಬಾರಿಸಿದರು.

ಮೈದಾನ 2 ರಲ್ಲಿ ನಡೆಯಬೇಕಾಗಿದ್ದ, ಮಣವಟ್ಟೀರ ಮತ್ತು ಬಯವಂಡ ತಂಡ ಗಳ ಪಂದ್ಯಾಟವನ್ನು ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಇಂದಿನ ಪಂದ್ಯಾಟ

ಮೈದಾನ- 1

ಬೆ.9ಕ್ಕೆ ಕೇಕಡ-ಚೋಯಮಾಡಂಡ
ಬೆ.10ಕ್ಕೆ ಮಂಡೇಟಿರ-ಅಜ್ಜಮಡ
ಬೆ.11ಕ್ಕೆ ತೆಕ್ಕಡ-ಚಂಬಂಡ
ಮ.12ಕ್ಕೆ ಐಚೆಟ್ಟೀರ-ತೀತಿರ
ಮ.1ಕ್ಕೆ ಕುಲ್ಲೇಟಿರ-ಮುಕ್ಕಾಟಿರ (ಬೇತ್ರಿ)

ಮೈದಾನ- 2
ಬೆ.9ಕ್ಕೆ ಮೂಕಳ್‍ಮಡ-ಮಲ್ಲಂಗಡ
ಬೆ.10ಕ್ಕೆ ಮುಕ್ಕಾಟಿರ(ಮಾದಪುರ)-ಕುಟ್ಟೇಟಿರ
ಬೆ.11ಕ್ಕೆ ಬಲ್ಯಮಂಡ-ಅಪ್ಪಾರಂಡ
ಮ.12ಕ್ಕೆ ಕಂಜಿತಂಡ-ಪಟ್ಟಚೆರುವಂಡ
ಮ.1ಕ್ಕೆ ಮೇರಿಯಂಡ-ಕೊಂಗೇಟಿರ
ಮ.2ಕ್ಕೆ ಬೌವೇರಿಯಂಡ-ಚೆರಿಯಪ್ಪಂಡ

Translate »