ಬಾರ್ ಕ್ಯಾಷಿಯರ್ ಮೇಲೆ ನಾಲ್ವರ ಹಲ್ಲೆ
ಕೊಡಗು

ಬಾರ್ ಕ್ಯಾಷಿಯರ್ ಮೇಲೆ ನಾಲ್ವರ ಹಲ್ಲೆ

April 25, 2018

ಸೋಮವಾರಪೇಟೆ: ಬಾರ್ ಕ್ಯಾಷಿಯರ್ ಮೇಲೆ ನಾಲ್ವರ ತಂಡ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪಟ್ಟಣದ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ಬಾರ್‍ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡು ತ್ತಿರುವ ಶರತ್ ಎಂಬವರ ಮೇಲೆ ಕಲ್ಕಂದೂರು ಗ್ರಾಮದ ಡೀಲಾಕ್ಷ, ಪ್ರಸನ್ನ, ನಿಖಿಲ್, ಗಾಂಧಿ ಅವರುಗಳು ಹಲ್ಲೆ ನಡೆಸಿದ್ದು, ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖ ಲಾಗಿ ಚಿಕಿತ್ಸೆ ಪಡೆದು, ಪೊಲೀಸರಿಗೆ ದೂರು ನೀಡಿದ್ದಾರೆ.

ನಾಲ್ವರು ಆರೋಪಿಗಳು ಮದ್ಯ ಸೇವಿ ಸಲು ಬಾರ್‍ಗೆ ಬಂದಿದ್ದ ಸಂದರ್ಭ ಹಳೆಯ ಬಾಕಿ 2 ಸಾವಿರ ರೂಪಾಯಿ ಗಳನ್ನು ನೀಡುವಂತೆ ಕ್ಯಾಷಿಯರ್ ಶರತ್ ಕೇಳಿದ್ದಾರೆ ಎನ್ನಲಾಗಿದ್ದು, ಇದೇ ವಿಚಾ ರಕ್ಕೆ ಸಂಬಂಧಿಸಿದಂತೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಇದರೊಂದಿಗೆ ಬಾರ್ ನಲ್ಲಿ ಕೆಲಸ ಮಾಡುವ ಚಂದ್ರ ಎಂಬವರಿಗೂ ಕೊಲೆ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿ ಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »