ಜಿಲ್ಲೆಯ 2 ಕ್ಷೇತ್ರಗಳಿಂದ ಒಟ್ಟು 25 ಮಂದಿ ನಾಮಪತ್ರ ಸಲ್ಲಿಕೆ
ಕೊಡಗು

ಜಿಲ್ಲೆಯ 2 ಕ್ಷೇತ್ರಗಳಿಂದ ಒಟ್ಟು 25 ಮಂದಿ ನಾಮಪತ್ರ ಸಲ್ಲಿಕೆ

April 25, 2018

ಮಡಿಕೇರಿ:  ವಿಧಾನಸಭಾ ಚುನಾವಣೆ ಸಂಬಂಧ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಮಂಗಳವಾರ ಜಿಲ್ಲೆಯ ಎರಡೂ ಕ್ಷೇತ್ರಗಳಿಂದ ಒಟ್ಟು 16 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಇಂದು ಕೆ.ಪಿ.ಚಂದ್ರಕಲಾ (ಕಾಂಗ್ರೆಸ್), ಭಾರ್ಗವ(ಹಿಂದೂ ಮಹಾಸಭಾ), ರಶೀದಾ ಬೇಗಂ(ಎಂಇಪಿ), ಎಂ.ಕಲೀಲ್, ಪಿ.ಯು.ಕಿಶನ್, ವೆಂಕಟೇಶ್, ಹೇಮಂತ್ ಕುಮಾರ್, ನಾಪಂಡ ಮುತ್ತಪ್ಪ, ಕೆ.ಬಿ.ರಾಜು, ಎಂ.ಮಹಮದ್ ಹನೀಫ್ ಇವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಇಂದು ಕೆ.ಜಿ.ಬೋಪಯ್ಯ (ಬಿಜೆಪಿ), ಪದ್ಮಿನಿ ಪೊನ್ನಪ್ಪ, ಹರೀಶ್ ಬೋಪಣ್ಣ, ಅಚ್ಚಪಂಡ ಗಿರಿ ಉತ್ತಪ್ಪ, ಫೈಜಲ್ ಎಂ.ಕೆ, ಮುತ್ತ ಪಿ.ಎಸ್. ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೆ ಇದುವರೆಗೆ ಮಡಿಕೇರಿ ಕ್ಷೇತ್ರದಿಂದ ಒಟ್ಟು 14 ಮಂದಿ ಮತ್ತು ವಿರಾಜಪೇಟೆ ಕ್ಷೇತ್ರದಿಂದ 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಏ.25 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏ.27 ಕೊನೆಯ ದಿನವಾಗಿದೆ. ಮೇ 12 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ. ಮೇ 15 ರಂದು ಮತ ಎಣ ಕೆ ಕಾರ್ಯ ನಡೆಯಲಿದೆ.

Translate »