ಎ.ಕೆ.ಸುಬ್ಬಯ್ಯ ಭೇಟಿ ಮಾಡಿದ ಸಂಕೇತ್ ಪೂವಯ್ಯ
ಕೊಡಗು

ಎ.ಕೆ.ಸುಬ್ಬಯ್ಯ ಭೇಟಿ ಮಾಡಿದ ಸಂಕೇತ್ ಪೂವಯ್ಯ

April 25, 2018

ಗೋಣ ಕೊಪ್ಪಲು: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಹಿರಿಯ ರಾಜಕೀಯ ಮುತ್ಸದಿ ಹೈಕೋರ್ಟಿನ ಖ್ಯಾತ ವಕೀಲರಾದ ಎ.ಕೆ.ಸುಬ್ಬಯ್ಯನವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಸುಬ್ಬಯ್ಯನವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ಸಂಕೇತ್, ಕ್ಷೇತ್ರದ ರಾಜಕಾರಣದ ಬಗ್ಗೆ ವಿವರ ನೀಡಿದರು. ಈ ಸಂದರ್ಭ ಸುಬ್ಬಯ್ಯನವರು ಸಂಕೇತ್ ಪೂವಯ್ಯ ನವರಿಗೆ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಈ ವೇಳೆ ವಿರಾಜಪೇಟೆ ಕ್ಷೇತ್ರದ ಕ್ಷೇತ್ರ ಅಧ್ಯಕ್ಷ ಎಸ್.ಹೆಚ್ ಮತೀನ್ ಉಪಸ್ಥಿತರಿದ್ದರು.

Translate »