ಜೆಡಿಎಸ್ ಮುಖಂಡರಿಂದ ಸಾ.ರಾ.ಮಹೇಶ್ ಭೇಟಿ
ಕೊಡಗು

ಜೆಡಿಎಸ್ ಮುಖಂಡರಿಂದ ಸಾ.ರಾ.ಮಹೇಶ್ ಭೇಟಿ

August 2, 2018

ಗೋಣಿಕೊಪ್ಪಲು: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ರಾಜ್ಯ ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆಯ ಸಚಿವ ಸಾ.ರಾ. ಮಹೇಶ್‍ಅವರನ್ನು ಜೆಡಿಎಸ್‍ನ ಮುಖಂಡ ರಾದ ಮೇರಿಯಂಡ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಭೇಟಿ ಮಾಡಿ ಶುಭ ಕೋರಿದರು.

ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕಗೊಳ್ಳುತ್ತಿದ್ದಂತೆ ಬೆಂಗಳೂರಿ ನಲ್ಲಿರುವ ಸಚಿವರ ಅಧಿಕೃತ ನಿವಾಸಕ್ಕೆ ತೆರಳಿದ ಕೊಡಗು ಜಿಲ್ಲಾ ಜಾತ್ಯತೀತಾ ಜನತಾದಳದ ಮುಖಂಡರ ತಂಡ ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು.

ಮುಖ್ಯಮಂತ್ರಿ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ 100 ಕೋಟಿ ವಿಶೇಷ ಅನುದಾನ ನೀಡಿರುವ ಬಗ್ಗೆ ಸಂಕೇತ್ ಪೂವಯ್ಯ ಮೆಚ್ಚುಗೆ ವ್ಯಕ್ತ ಪಡಿಸಿ, ಜಿಲ್ಲೆಯ ಅಭಿವೃದ್ದಿಗೆ ಮತ್ತಷ್ಟು ಅನುದಾನದ ಬಿಡುಗಡೆಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವಂತೆ ಈ ಸಂದರ್ಭ ನೂತನ ಸಚಿವರನ್ನು ವಿನಂತಿಸಿಕೊಂಡರು.

ನಿಯೋಗದಲ್ಲಿ ಕೊಡಗು ಜಿಲ್ಲಾ ಜೆಡಿಎಸ್‍ನ ಪ್ರಚಾರ ಸಮಿತಿಯ ಅಧ್ಯಕ್ಷ ಕೆ.ಎಂ.ಬಿ.ಗಣೇಶ್, ರಾಜ್ಯ ಉಪಾಧ್ಯಕ್ಷ ಎಂ.ಎಂ.ಶರೀಫ್, ಕೊಡಗು ಜಿಲ್ಲಾ ವಕ್ತಾರ ಶನಿವಾರ ಸಂತೆ ಹೋಬಳಿಯ ಅಧ್ಯಕ್ಷ ಅದೀಲ್ ಪಾಷ, ಮಡಿಕೇರಿ ಕ್ಷೇತ್ರದ ಹಿಂದುಳಿದ ವರ್ಗದ ಅಧ್ಯಕ್ಷ ಎನ್.ಸಿ. ಸುನೀಲ್, ಜಿಲ್ಲಾ ಯುವ ಜನತಾ ದಳದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಜಾಸೀರ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ಡಿ.ಪಿ.ಬೋಜಪ್ಪ, ಸೋಮವಾರಪೇಟೆ ತಾಲೂಕು ಕಾರ್ಯ ದರ್ಶಿ ತೀರ್ಥನಂದಾ, ವಿರಾಜಪೇಟೆ ವಿಧಾ ನಸಭಾ ಕ್ಷೇತ್ರದ ಯುವ ಜನತಾದಳದ ಅಧ್ಯಕ್ಷ ಅಮ್ಮಂಡ ವಿವೇಕ್, ವಿರಾಜಪೇಟೆ ನಗರ ಅಧ್ಯಕ್ಷ ಪಿ.ಎ.ಮಂಜುನಾಥ್, ಮಡಿ ಕೇರಿ ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎ.ಇಬ್ರಾಹಿಂ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Translate »