ಗೋಣ ಕೊಪ್ಪಲು: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಆಡಳಿತದಿಂದ ಮತದಾರ ರೋಸಿ ಹೋಗಿದ್ದು ಈ ಬಾರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದತ್ತ ಮತದಾರನ ಒಲವು ಹೆಚ್ಚಾಗಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು. ದ.ಕೊಡಗಿನ ಬಿರುನಾಣ ಬಸ್ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಜೆಡಿಎಸ್ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದಿಂದ ಆರಿಸಿಹೋದ ಶಾಸಕರು ಅಭಿವೃದ್ಧಿಗೆ ಶ್ರಮಿಸಲಿಲ್ಲ. ಸಂಸದರು ಕೂಡ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಲಿಲ್ಲ. ಈ ಭಾಗದಲ್ಲಿ ರೈತ…
ಬಸವೇಶ್ವರ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ
May 1, 2018ವಿರಾಜಪೇಟೆ: ವಿರಾಜಪೇಟೆ ಜೈನರ ಬೀದಿ ಯಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಬಸವೇಶ್ವರ ದೇವಾ ಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಶ್ರದ್ಧ ಭಕ್ತಿಯಿಂದ ಆಚರಿಸಲಾಯಿತು. ಏಪ್ರಿಲ್ 27ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಪೂಜಾ ವಿಧಿ ವಿಧಾನಗಳೊಂದಿಗೆ ಮಹಾ ಸುದರ್ಶನಹೋಮ, ವಾಸ್ತು ಹೋಮ, ವಾಸ್ತು ಬಲಿದಾನ, ಪ್ರಾಕಾರ ಬಲಿದಾನ ನಂತರ ರಾತ್ರಿ ಮಹಾ ಪೂಜೆಯ ಬಳಿಕ ಪ್ರಸಾದ ವಿನಿಯೋಗ ನಡೆಯಿತು. ಇಂದು ಅಷ್ಟಬಂಧ ಬ್ರಹ್ಮ ಕಲಶೋತ್ಸವವು ವೇದಮೂರ್ತಿ ಪಂಡರೀಶ ಅರಳಿತ್ತಾಯ ತಂತ್ರಿ ಅವರ ನೇತೃತ್ವದಲ್ಲಿ ಪುಣ್ಯ ಕಾರ್ಯಕ್ರಮಗಳು…
ಇಂದು ಗೋಣ ಕೊಪ್ಪದಲ್ಲಿ ರಾಹುಲ್ ಗಾಂಧಿ ಪ್ರಚಾರ
April 27, 2018ಗೋಣ ಕೊಪ್ಪಲು: ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷ ಗೋಣ ಕೊಪ್ಪ ನಗರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಕಾಂಗ್ರೆಸ್‍ನ ನಾಯಕರು ರಾಹುಲ್ ಅದ್ಧೂರಿ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಮೊಟ್ಟಮೊದಲ ಬಾರಿಗೆ ಕೊಡಗು ಜಿಲ್ಲೆಯ ಗೋಣ ಕೊಪ್ಪಲುವಿಗೆ ರಾಹುಲ್‍ಗಾಂಧಿಯವರು ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಸ್ಥಳೀಯ ಕಾವೇರಿ ಕಾಲೇಜು ಆವರಣದಿಂದ ಬಹಿರಂಗ ಸಭೆಯ ವೇದಿಕೆಯ ವರೆಗೂ ಡಿ ಜೋನ್ ನಿರ್ಮಾಣ ಮಾಡಲಾಗಿದೆ. ಬೃಹತ್ ವೇದಿಕೆ ನಿರ್ಮಾಣಗೊಂಡಿದ್ದು, 8 ಸಾವಿರ ಆಸನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 60 ಮಂದಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರುಗಳು ಕುಳಿತುಕೊಳ್ಳುವ…
ಕುಲ್ಲೇಟಿರ ಕಪ್ ಹಾಕಿ ಹಬ್ಬಕನ್ನಂಡ, ತಾಪಂಡ, ಚೆಯ್ಯಂಡ ಸೇರಿ 15 ತಂಡ ಮುನ್ನಡೆ
April 27, 2018ನಾಪೋಕ್ಲು, ಏ.26- 22ನೇ ವರ್ಷದ ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಪುಲಿಯಂಡ, ಮಂಡೇಟಿರ, ಅರೆಯಡ, ಚೆಯ್ಯಂಡ, ತಾಪಂಡ, ಮಂಡೇಯಡ, ಮುದ್ದಿಯಂಡ, ಕನ್ನಂಡ, ಕೆಲೇಟಿರ, ಮಂಡೀರ, ಚೇನಂಡ, ಮಣವಟ್ಟೀರ, ಮುಂಡ್ಯೋಳಂಡ, ಪಟ್ಟಡ, ಅಪ್ಪಚ್ಚೀರ, ತಂಡಗಳು ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು. ಇಂದು ನಡೆದ ಮೊದಲ ಪಂದ್ಯದಲ್ಲಿ ಪುಲಿಯಂಡ ತಂಡವು ತೆನ್ನೀರ ತಂಡ ವನ್ನು 5-0 ಗೋಲುಗಳಿಂದ ಭರ್ಜರಿಯಾಗಿ ಮಣ ಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು….
ವಿ.ಪೇಟೆ ಬಸವೇಶ್ವರ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ
April 27, 2018ವಿರಾಜಪೇಟೆ: ಪಟ್ಟಣದ ಜೈನರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವಾಲಯದಲ್ಲಿ ಏ.27 ಹಾಗೂ 28ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಜಿ.ಕಾಮತ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್.ಜಿ.ಕಾಮತ್ ಅವರು, ಏ.27ರಂದು ಸಂಜೆ 4 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಯೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಿದ್ದು, ಪೂಜಾ ವಿಧಿ ವಿಧಾನಗ ಳೊಂದಿಗೆ ಮಹಾ ಸುದರ್ಶನಹೋಮ, ವಾಸ್ತು ಹೋಮ, ವಾಸ್ತು ಬಲಿದಾನ, ಪ್ರಾಕಾರ ಬಲಿದಾನ ನಂತರ ರಾತ್ರಿ ಮಹಾ ಪೂಜೆಯ ಬಳಿಕ ಪ್ರಸಾದ ವಿನಿಯೋಗ ನಡೆಯಲಿದೆ…
ಮಡಿಕೇರಿ ಸುತ್ತಾಮುತ್ತಾ ಪ್ರಭಾವಿ ರಾಜಕಾರಣ ಸೇರಿ 68 ಮಂದಿಯಿಂದ ಅರಣ್ಯ ಅತಿಕ್ರಮಣ
April 26, 2018ಮಡಿಕೇರಿ: ಮಡಿಕೇರಿ ನಗ ರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡು ಪ್ರಾಣ ಗಳ ಹಾವಳಿ ಹೆಚ್ಚಾಗಲು ಇಲ್ಲಿನ ಅರಣ್ಯ ಪ್ರದೇಶವನ್ನು ಪ್ರಭಾವಿ ರಾಜಕಾರ ಣ ಯೊಬ್ಬರು ಸೇರಿದಂತೆ ಸುಮಾರು 68 ಮಂದಿ ಅತಿಕ್ರಮಿಸಿಕೊಂಡಿರುವುದೇ ಕಾರಣ ಎಂದು ಆರೋಪಿಸಿರುವ ಕಾವೇರಿಸೇನೆ, ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಮಾಡಿಕೊಂಡ ಮನವಿಗೆ ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ನ್ಯಾಯಾ ಲಯದ ಮೊರೆ ಹೋಗಿರುವುದಾಗಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿಸೇನೆಯ ಸಂಚಾಲಕ ಕೆ.ಎ.ರವಿ ಚಂಗಪ್ಪ ಅವರು, ಸಮಾಜಕ್ಕೆ ಮಾದರಿಯಾಗ ಬೇಕಾಗಿದ್ದ ಪ್ರಭಾವಿ ರಾಜಕಾರಣ ಯೊಬ್ಬರು…
ಸುಂಟಿಕೊಪ್ಪದಲ್ಲಿ ಅರೆ ಸೇನಾಪಡೆ ಪಥ ಸಂಚಲನ
April 26, 2018ಸುಂಟಿಕೊಪ್ಪ: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆ ಆರೆ ಸೇನಾಪಡೆ ವತಿಯಿಂದ ಸುಂಟಿಕೊಪ್ಪ ಪಟ್ಟಣದಲ್ಲಿ ಬುಧವಾರ ಪಥಸಂಚಲನ ನಡೆಸಲಾಯಿತು. ರಾಜ್ಯದಲ್ಲಿ ವಿಧಾಸಭಾ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಅರೆ ಸೇನಾಪಡೆಯ ಸಿಬ್ಬಂದಿಗಳು ವಿವಿಧ ಶಸ್ತಾಸ್ತ್ರಗಳೊಂದಿಗೆ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯಿಂದ ಗದ್ದೆಹಳ್ಳದ ಗಾಂಧಿ ವೃತ್ತದವರೆಗೆ ಪಥಸಂಚಲನ ನಡೆಸುವ ಮೂಲಕ ರಾಜ್ಯ ವಿಧಾನಸಭೆಗೆ ಮೇ 12 ರಂದು ಸಾರ್ವತ್ರಿಕ ಚುನಾವಣೆಯು ನಡೆಯುತ್ತಿದ್ದು ಜನತೆಯು ಮತದಾನಕ್ಕೆ ಯಾವುದೇ ರೀತಿಯ ಅಡ್ಡಿ ಅತಂಕಗಳು ಎದುರಾಗದಂತೆ ಮುಂಜಾಗ್ರತ…
ಕುಲ್ಲೇಟಿರ ಕಪ್ ಹಾಕಿ ನಮ್ಮೆ: ಕುಲ್ಲೇಟಿರ, ತೆಕ್ಕೆಡ, ಅಪ್ಪಾರಂಡ ಸೇರಿ 11 ತಂಡ ಮುನ್ನಡೆ
April 26, 2018ನಾಪೋಕ್ಲು: 22ನೇ ವರ್ಷದ ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂ ಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಚೋಯಮಾಡಂಡ, ಮಂಡೇಟ್ಟಿರ, ತೆಕ್ಕಡ,ತಿತೀರ, ಕುಲ್ಲೇಟಿರ, ಮೂಕಳಮಾಡ, ಮುಕ್ಕಾಟೀರ, ಅಪ್ಪಾರಂಡ, ಪಟ್ಟಚೇರುವಂಡ, ಕೊಂಗೇಟಿರ, ಬೊವ್ವೇರಿ ಯಂಡ ತಂಡಗಳು ಮುನ್ನಡೆ ಸಾಧಿಸಿದವು. ಇಂದು ನಡೆದ ಮೊದಲ ಪಂದ್ಯಾಟ ದಲ್ಲಿ ಚೋಯಮಾಡಂಡ ತಂಡವು ಭರ್ಜರಿಯಾಗಿ ಆಡುವುದರ ಮೂಲಕ ಕೇಕಡ ತಂಡವನ್ನು 3-0 ಗೋಲು ಗಳಿಂದ ಪರಾಭವಗೊಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದು ಕೊಂಡಿತು. ಚೋಯಮಾಡಂಡ ಪರ ಸೋಮಣ್ಣ,…
ಅನಾಮಧೇಯ ಪತ್ರ ಬಯಲು ಮಾಡಿದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಬ್ಯಾಂಕ್ ಉದ್ಯೋಗಿ ಸೇರಿ ಇಬ್ಬರ ಬಂಧನ
April 26, 2018ಮಡಿಕೇರಿ: ಜಿಲ್ಲಾಧಿಕಾರಿಗಳಿಗೆ ತಲುಪಿದ ಅನಾಮಿಕ ಪತ್ರವೊಂದರಿಂದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವೊಂದು ಬಯಲಾ ಗಿದ್ದು, ಪೊನ್ನಂಪೇಟೆಯ ಟೌನ್ ಬ್ಯಾಂಕ್ ಉದ್ಯೋಗಿ ಮಂಜು,(44) ಮತ್ತು 9ನೇ ತರಗತಿ ವಿದ್ಯಾರ್ಥಿಯೋರ್ವನನ್ನು ಫೋಕ್ಸೊ ಕಾಯ್ದೆಅಡಿಯಲ್ಲಿ ಪೊಲೀ ಸರು ಬಂಧಿಸಿದ್ದಾರೆ. ಘಟನೆ ವಿವರ: ಅಪ್ರಾಪ್ತ ಬಾಲಕಿಯ ತಂದೆ ಪೊನ್ನಂಪೇಟೆ ಟೌನ್ ಬ್ಯಾಂಕ್ ಉದ್ಯೋಗಿಯಾಗಿದ್ದು ಕಳೆದ ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಬಳಿಕ ಈ ಕೆಲಸ ಸಂತ್ರಸ್ಥೆ ಬಾಲಕಿಯ ತಾಯಿಗೆ ಸಿಕ್ಕಿತ್ತು. ಟೌನ್ ಬ್ಯಾಂಕ್ ಉದ್ಯೋಗಿ ಆರೋಪಿ ಮಂಜು ಮತ್ತು ಬಾಲಕಿಯ…
ಮೂವರಿಗೆ ಇರಿದಿದ್ದ ಆರೋಪಿ ಬಂಧನ
April 26, 2018ಸುಂಟಿಕೊಪ್ಪ: ಕ್ಷುಲ್ಲಕ ಕಾರಣಕ್ಕೆ ಕಲಹ ನಡೆದು ಮೂವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಕುಶಾಲನಗರ ಸಮೀಪದ ಕಡುವಿನ ಹೊಸಹಳ್ಳಿ ನಿವಾಸಿಯಾದ ಪುಟ್ನಂಜ ಎಂಬಾತ ಭಾನುವಾರ ರಾತ್ರಿ ಮೂವರು ವ್ಯಕ್ತಿಗಳೊಂದಿಗೆ ಕ್ಷುಲ್ಲಕ ಕಾರಣಕ್ಕೆ ಕಲಹವೇರ್ಪಟ್ಟು ಚಾಕುವಿನಿಂದ ಇರಿದು ಗಾಯಗೊಳಿಸಿ ತಲೆಮರೆಸಿಕೊಂಡಿದ್ದ ಆರೋಪಿ ಪುಟ್ನಂಜನನ್ನು ಜಿಲ್ಲಾ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಸೋಮವಾರಪೇಟೆ ಡಿವೈಎಸ್‍ಪಿ ಕುಶಾಲನಗರ ವೃತ್ತನಿರೀಕ್ಷಕರ ಮಾರ್ಗದರ್ಶನದ ಮೇರೆ ಹಾಸನದ ಬಳಿಯಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್,…