ಕೊಡಗು

ದ್ವೇಷದಿಂದ ಕಾಳುಮೆಣಸು ಬಳ್ಳಿ ಧ್ವಂಸ
ಕೊಡಗು

ದ್ವೇಷದಿಂದ ಕಾಳುಮೆಣಸು ಬಳ್ಳಿ ಧ್ವಂಸ

May 26, 2018

ಸೋಮವಾರಪೇಟೆ:  ಕಾಫಿ ತೋಟದಲ್ಲಿದ್ದ ಕಾಳುಮೆಣಸು ಬಳ್ಳಿಗಳನ್ನು ಕತ್ತಿಯಿಂದ ಕಡಿದು ನಷ್ಟಗೊಳಿಸಿರುವ ಘಟನೆ ಸಮೀಪದ ಚೌಡ್ಲು ಗ್ರಾಮದಲ್ಲಿ ನಡೆದಿದೆ. ಚೌಡ್ಲು ಗ್ರಾಮದ ಸಿ.ಕೆ. ದೇವಯ್ಯ ಅವರಿಗೆ ಸೇರಿದ 2 ಎಕರೆ ಕಾಫಿ ತೋಟದಲ್ಲಿದ್ದ ಸುಮಾರು 10 ರಿಂದ 12 ವರ್ಷದ ಕಾಳುಮೆಣಸಿನ 200ಕ್ಕೂ ಅಧಿಕ ಬಳ್ಳಿಗಳನ್ನು ಕತ್ತಿಯಿಂದ ಕಡಿದು ತುಂಡರಿಸಲಾಗಿದ್ದು, ಸಹೋದರನ ಪತ್ನಿ ಹಾಗೂ ಪುತ್ರನಿಂದ ಕೃತ್ಯ ನಡೆದಿದೆ ಎಂದು ದೇವಯ್ಯ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಠಾಣಾಧಿಕಾರಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕರಿಗೆ…

ಇಂದು ವಿದ್ಯುತ್ ವ್ಯತ್ಯಯ
ಕೊಡಗು

ಇಂದು ವಿದ್ಯುತ್ ವ್ಯತ್ಯಯ

May 26, 2018

ಮಡಿಕೇರಿ:  ಮಡಿಕೇರಿ 66/11ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಂPಆಖP Pಚಿಡಿಣ-ಃ (ತ್ವರಿತ ವಿದ್ಯುತ್ ಜಾಲದ ಸಮಗ್ರ ಅಭಿವೃದ್ದಿ ಯೋಜನೆ ಮತ್ತು ಸುಧಾರಣಾ) ಕಾಮಗಾರಿ ನಡೆಯುತ್ತಿರುವುದರಿಂದ ಮೇ 26 ರಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯ ವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಅದ್ದರಿಂದ ಮಡಿಕೇರಿ ಪಟ್ಟಣ ವ್ಯಾಪ್ತಿಯಲ್ಲಿ, ಹೆಬ್ಬೆಟ್ಟ ಗೇರಿ, ಬೋಯಿಕೇರಿ, ಮಕ್ಕಂದೂರು, ಮೂರನೇಮೈಲು, ಕರ್ಣಗೇರಿ, ಮೂಕ್ಕೋಡ್ಲು, ಆವಂಡಿಮ ಹಮ್ಮಿಯಾಲ ಮೇಕೇರಿ, ಕಡಗದಾಳು, ಕಗ್ಗೋಡು, ಅರುವತೋಕ್ಲು, ಹಾಕತ್ತೂರು, ಭಾಗಮಂಡಲ, ಬೆಟ್ಟಗೇರಿ, ಮದೆನಾಡು, ಬೆಟ್ಟತ್ತೂರು, ಚೇರಂಬಾಣೆ, ಚೆಟ್ಟಿಮಾನಿ, ಐಯ್ಯಂಗೇರಿ,…

ಮೇ 27ರಂದು ಫುಟ್ಬಾಲ್ ಕ್ರೀಡಾಪಟುಗಳ ಆಯ್ಕೆ
ಕೊಡಗು

ಮೇ 27ರಂದು ಫುಟ್ಬಾಲ್ ಕ್ರೀಡಾಪಟುಗಳ ಆಯ್ಕೆ

May 26, 2018

ವಿರಾಜಪೇಟೆ: ರಾಜ್ಯ ಫುಟ್ಟಾಲ್ ಸಂಸ್ಥೆಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜೂನ್ 10ರಿಂದ ಪ್ರಾರಂಭಗೊಳ್ಳಲಿರುವ ದ್ವಿತೀಯ ವರ್ಷದ ರಾಷ್ಟ್ರಮಟ್ಟದ ಊರ್ಜಾ ಕಪ್ ಫುಟ್ಬಾಲ್ ಪಂದ್ಯಾಟಕ್ಕೆ 19 ವರ್ಷ ವಯೋಮಾನದ ಬಾಲಕ ಹಾಗೂ ಬಾಲಕಿಯರ ಕೊಡಗು ಜಿಲ್ಲಾ ತಂಡವನ್ನು ಮೇ 27 ರಂದು ಪೂರ್ವಾಹ್ನ 9 ಗಂಟೆಗೆ ಕುಶಾಲನಗರದ ಗುಡ್ಡೆಹೊಸೂರಿನ ಐ.ಎನ್.ಎಸ್ ಫುಟ್ಬಾಲ್ ಕ್ರೀಡಾಂಗಣ ದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಆಯ್ಕೆಗೆ ಬರುವ ಕ್ರೀಡಾಪಟುಗಳು ಕಡ್ಡಾಯವಾಗಿ ಆಧಾರ್ ಕಾರ್ಡ್‍ನ ಪ್ರತಿಯನ್ನು ಹಾಜರು ಪಡಿಸಬೇಕು ಎಂದು ಜಿಲ್ಲಾ ಪುಟ್ಭಾಲ್ ಸಂಸ್ಥೆಯ ಅಧ್ಯಕ್ಷ…

ಮಹಿಳೆಯರಿಂದ ಬ್ರಹ್ಮಗಿರಿ ಬೆಟ್ಟದ ಪಾವಿತ್ಯ್ರತೆಗೆ ಧಕ್ಕೆ
ಕೊಡಗು

ಮಹಿಳೆಯರಿಂದ ಬ್ರಹ್ಮಗಿರಿ ಬೆಟ್ಟದ ಪಾವಿತ್ಯ್ರತೆಗೆ ಧಕ್ಕೆ

May 25, 2018

ಮಡಿಕೇರಿ: ಮಹಿಳೆಯರು ಪುರಾಣ ಪ್ರಸಿದ್ಧ ಬ್ರಹ್ಮಗಿರಿ ಬೆಟ್ಟ ಹತ್ತು ವಂತಿಲ್ಲ ಎಂದು ದೈವಜ್ಞರಾದ ನೀಲೇಶ್ವರ ಪದ್ಮನಾಭ ತಂತ್ರಿ ಹೇಳಿದ್ದಾರೆ. ಮೂರು ದಿನಗಳಿಂದ ಮಡಿಕೇರಿಯ ತಲಕಾವೇರಿ ಯಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ವೇಳೆ ಅವರು, ಬ್ರಹ್ಮಗಿರಿ ಪವಿತ್ರ ಕ್ಷೇತ್ರ. ಮಹಿಳೆಯರು, ಶರ್ಟ್ಸ್ ಮತ್ತು ಟಿಶರ್ಟ್ ಧರಿಸಿ ಬೆಟ್ಟವೇರುವ ಮೂಲಕ ಸ್ಥಳದ ಪವಿತ್ರತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ‘ತುಲಾ ಸಂಕ್ರಮ’ (ಅಕ್ಟೋಬರ್ 17) ಆರಂಭದಿಂದ’ ವೃಷಭ ಸಂಕ್ರಮಣದ ಅವಧಿಯವರೆಗೆ ಪುರುಷರು, 10 ವರ್ಷ ಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳು…

ಸೋಮವಾರಪೇಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ
ಕೊಡಗು

ಸೋಮವಾರಪೇಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ

May 25, 2018

ಸೋಮವಾರಪೇಟೆ:  ಡಾ.ಬಿ.ಆರ್. ಅಂಬೇಡ್ಕರ್ ತನ್ನ ವಿದ್ಯಾರ್ಥಿ ದಿಸೆ ಯಿಂದಲೇ ಸಾಕಷ್ಟು ಕಷ್ಟ ಕಾರ್ಪಣ್ಯ ಗಳನ್ನು ಎದುರಿಸಿದ್ದರೂ ಅವರು ಗಳಿಸಿದ ಉನ್ನತ ಶಿಕ್ಷಣವನ್ನು ಇಡೀ ವಿಶ್ವವೇ ಗೌರವ ನೀಡುವಂತೆ ಮಾಡಿದೆ ಎಂದು ಜಾನಪದ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ.ಮುರಳೀಧರ್ ಅಭಿಪ್ರಾಯಿಸಿದರು. ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸ ಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ, ಆದಿದ್ರಾವಿಡ ಸಮಾ ಜದ ಮೊದಲನೇ ವರ್ಷದ ವಾರ್ಷಿಕೋ ತ್ಸವ ಹಾಗೂ ಜನಾಂದೋಲನ ಸಮಾವೇಶ ದಲ್ಲಿ ಮುಖ್ಯಭಾಷಣಕಾರರಾಗಿ…

ವಿ.ಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಕೆ
ಕೊಡಗು

ವಿ.ಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಕೆ

May 25, 2018

ವಿರಾಜಪೇಟೆ:  ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು ಅಧಿಕಾರದಿಂದ ವಂಚನೆಗೊಳಗಾಗಿದ್ದರೂ ರಾಜಕೀಯ ರಹಿತವಾಗಿ ನಮ್ಮ ಕ್ಷೇತ್ರದ ಅಭಿವೃದ್ಧಿ, ಜನಪರ ಕೆಲಸಗಳು ಮುಂದುವರೆ ಯುವುದು ಎಂದು ವಿಧಾನಸಭೆಯ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಹೇಳಿದರು. ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಕೊಡಗಿಗೆ ಆಗಮಿಸಿ ತಾಲೂಕು ಬಿಲ್ಲವ ಸೇವಾ ಸಂಘದಿಂದ ವಿರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿ ಕೊಂಡಿದ್ದ ಬಿಲ್ಲವ ಕಪ್ ಕ್ರೀಡೋತ್ಸವದ ಸಮಾರೋಪ-ಸಮಾರಂಭದಲ್ಲಿ ಅತಿಥಿ ಯಾಗಿ ಭಾಗವಹಿಸಿ ಬಿಲ್ಲವ…

`ಸಿದ್ದರುಪಯ್ಯ’ ಸರ್ಕಾರ ಇರುವವರೆಗೂ ಅಭಿವೃದ್ಧಿ ಅಸಾಧ್ಯ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ
ಕೊಡಗು

`ಸಿದ್ದರುಪಯ್ಯ’ ಸರ್ಕಾರ ಇರುವವರೆಗೂ ಅಭಿವೃದ್ಧಿ ಅಸಾಧ್ಯ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ

May 8, 2018

ಸೋಮವಾರಪೇಟೆ:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ದರುಪಯ್ಯ ಎಂದು ಕರೆದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಕರ್ನಾಟಕದಲ್ಲಿ ಸಿದ್ದರುಪಯ್ಯಾ ಸರ್ಕಾರ ಇರುವವರೆಗೆ ರಾಜ್ಯ ಅಭಿವೃದ್ಧಿ ಅಸಾಧ್ಯ ಎಂದು ಹೇಳಿದರು. ಭಾರತೀಯ ಜನತಾಪಕ್ಷದ ವತಿಯಿಂದ ಇಲ್ಲಿನ ಜೇಸಿವೇದಿಕೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲ. ಅಭಿವೃದ್ಧಿಯ ಚಿಂತನೆಯಿಲ್ಲ. ಜನನಿ ಜನ್ಮ ಭೂಮಿಯ ಮೇಲೆ ಕಾಂಗ್ರೆಸ್ಸಿಗೆ ಪ್ರೀತಿ ಮತ್ತು ಗೌರವ ಇಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆಯ…

ಅಪ್ಪಚ್ಚಕವಿ ಅನುವಾದಿತ ನಾಟಕಗಳ ಸಂಕಲನ ಪ್ರಕಟಿಸಲು ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ಧಾರ
ಕೊಡಗು

ಅಪ್ಪಚ್ಚಕವಿ ಅನುವಾದಿತ ನಾಟಕಗಳ ಸಂಕಲನ ಪ್ರಕಟಿಸಲು ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ಧಾರ

May 8, 2018

ಬೆಂಗಳೂರು: ಡಾ.ಐ.ಮಾ.ಮುತ್ತಣ್ಣನವರು ಕನ್ನಡಕ್ಕೆ ಅನುವಾದ ಮಾಡಿರುವ ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚಕವಿ ಅವರ ನಾಲ್ಕು ನಾಟಕಗಳ ಸಂಕಲನವನ್ನು ಪ್ರಕಟಿಸಲು ಕೇಂದ್ರ ಸಾಹಿತ್ಯ ಅಕಾಡೆಮಿ ತೀರ್ಮಾನಿಸಿದೆ. ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚಕವಿ ಅವರ 150ನೇ ಜನ್ಮ ವರ್ಷದ ಅಂಗವಾಗಿ ಕವಿಗೆ ಗೌರವಪೂರ್ಣ ನಮನ ಸಲ್ಲಿಸುವ ಉದ್ದೇಶದಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಈ ನಿರ್ಧಾರ ಕೈಗೊಂಡಿದೆ. ಮಡಿಕೇರಿಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಪ್ಪಚ್ಚಕವಿ 150ನೇ ಜನ್ಮೋತ್ಸವ ಮತ್ತು ಎರಡು ದಿನಗಳ ವಿಚಾರ ಸಂಕಿರಣ ನಡೆಸುವುದು. ಈ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ…

ಮಡಿಕೇರಿಯಲ್ಲಿ ಧಾರಾಕಾರ ಮಳೆ
ಕೊಡಗು

ಮಡಿಕೇರಿಯಲ್ಲಿ ಧಾರಾಕಾರ ಮಳೆ

May 8, 2018

ಮಡಿಕೇರಿ:  ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಮಡಿಕೇರಿ ನಗರ ಸಂಪೂರ್ಣ ತತ್ತರಗೊಂಡಿತು. ಭಾರೀ ಗಾಳಿ ಸಹಿತ ಮಳೆ ಸುರಿದ ಪರಿಣಾಮ ನಗರದ ಕೆಲವೆಡೆ ರಾಜಾಕಾಲುವೆ ತುಂಬಿ ಹರಿದು ರಸ್ತೆಗಳು ಜಲಾವೃತಗೊಂಡವು. ನಗರದ ಜನರಲ್ ತಿಮ್ಮಯ್ಯ ಶಾಲೆಯ ಬಳಿ ಕಿರುಕಾಲುವೆ ತುಂಬಿ ಹರಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿ ತ್ತಲ್ಲದೇ, ಚರಂಡಿ ಮತ್ತು ರಸ್ತೆ ಯಾವುದೆಂದು ಗೊತ್ತಾಗದೇ ವಾಹನ ಸವಾರರು ಪರದಾಡುವಂತಾಯಿತು. ಗಾಳಿ ಸಹಿತ ಭಾರೀ ಮಳೆಯಿಂದ ಕೆಲಕಾಲ ವಿದ್ಯುತ್ ಪೂರೈಕೆ ಯಲ್ಲೂ ವ್ಯತ್ಯಯ ಉಂಟಾಯಿತು. ದಿಢೀರನೇ ಮಳೆ…

ಕೊಡಗಿನಲ್ಲಿ ಕೊಡವರಿಗೆ ಕೋವಿ ಪರವಾನಗಿ ವಿಶೇಷ ವಿನಾಯಿತಿಗೆ ಕ್ಯಾತೆ ಸಾಂಪ್ರದಾಯಿಕ ಸವಲತ್ತು ಉಳಿಸಿಕೊಳ್ಳಲು ಕಾನೂನು ಮೊರೆ
ಕೊಡಗು

ಕೊಡಗಿನಲ್ಲಿ ಕೊಡವರಿಗೆ ಕೋವಿ ಪರವಾನಗಿ ವಿಶೇಷ ವಿನಾಯಿತಿಗೆ ಕ್ಯಾತೆ ಸಾಂಪ್ರದಾಯಿಕ ಸವಲತ್ತು ಉಳಿಸಿಕೊಳ್ಳಲು ಕಾನೂನು ಮೊರೆ

May 8, 2018

ಮಡಿಕೇರಿ:  ಕೊಡಗಿನಲ್ಲಿ ಕೊಡವರಿಗೆ ಕೋವಿ ಪರವಾನಗಿ ವಿಶೇಷ ವಿನಾಯಿತಿ ವಿಚಾರ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಸದ್ದು ಮಾಡುತ್ತಿದ್ದು, ವಿಶೇಷ ವಿನಾಯಿತಿ ಉಳಿಸಿಕೊಳ್ಳಲು ಕಾನೂನು ಸಮರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ನೀಡುತ್ತಿರುವ ಕೋವಿ ಪರವಾನಗಿಯ ವಿಶೇಷ ವಿನಾಯಿತಿ ರದ್ದುಪಡಿಸಬೇಕೆಂದು ನಿವೃತ್ತ ಕ್ಯಾಪ್ಟನ್ ಯಾಲದಾಳು ಕೆ.ಚೇತನ್ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿರುವುದು ಕೊಡಗಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ‘ಮೈಸೂರು ಮಿತ್ರ’ ನಿಗೆ ಪ್ರತಿಕ್ರಿಯಿಸಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಕೊಡವರಿಗೆ ಬ್ರಿಟಿಷರಿಂದ…

1 181 182 183 184 185 187
Translate »