ಮೇ 27ರಂದು ಫುಟ್ಬಾಲ್ ಕ್ರೀಡಾಪಟುಗಳ ಆಯ್ಕೆ
ಕೊಡಗು

ಮೇ 27ರಂದು ಫುಟ್ಬಾಲ್ ಕ್ರೀಡಾಪಟುಗಳ ಆಯ್ಕೆ

May 26, 2018

ವಿರಾಜಪೇಟೆ: ರಾಜ್ಯ ಫುಟ್ಟಾಲ್ ಸಂಸ್ಥೆಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜೂನ್ 10ರಿಂದ ಪ್ರಾರಂಭಗೊಳ್ಳಲಿರುವ ದ್ವಿತೀಯ ವರ್ಷದ ರಾಷ್ಟ್ರಮಟ್ಟದ ಊರ್ಜಾ ಕಪ್ ಫುಟ್ಬಾಲ್ ಪಂದ್ಯಾಟಕ್ಕೆ 19 ವರ್ಷ ವಯೋಮಾನದ ಬಾಲಕ ಹಾಗೂ ಬಾಲಕಿಯರ ಕೊಡಗು ಜಿಲ್ಲಾ ತಂಡವನ್ನು ಮೇ 27 ರಂದು ಪೂರ್ವಾಹ್ನ 9 ಗಂಟೆಗೆ ಕುಶಾಲನಗರದ ಗುಡ್ಡೆಹೊಸೂರಿನ ಐ.ಎನ್.ಎಸ್ ಫುಟ್ಬಾಲ್ ಕ್ರೀಡಾಂಗಣ ದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಆಯ್ಕೆಗೆ ಬರುವ ಕ್ರೀಡಾಪಟುಗಳು ಕಡ್ಡಾಯವಾಗಿ ಆಧಾರ್ ಕಾರ್ಡ್‍ನ ಪ್ರತಿಯನ್ನು ಹಾಜರು ಪಡಿಸಬೇಕು ಎಂದು ಜಿಲ್ಲಾ ಪುಟ್ಭಾಲ್ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಫುಟ್ಬಾಲ್ ತೀರ್ಪುಗಾರರ ಅಧ್ಯಕ್ಷ ಹಾಗೂ ಕೋಚ್ ಪಂದಿಕಂಡ ನಾಗೇಶ್ ಮಾತನಾಡಿ, ಕಳೆದ 15 ವರ್ಷಗಳಿಂದ ನಮ್ಮ ಜಿಲ್ಲೆಯ ಹಲವಾರು ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಫುಟ್ಬಾಪ್ ಪಂದ್ಯಗಳು ನಡೆಯುತ್ತಿದ್ದು ಉತ್ತಮ ಪ್ರತಿಭೆಗಳು ಹೊರಹೊಮ್ಮ ತ್ತಿದ್ದಾರೆ. ದುರಾದೃಷ್ಟ ಸಂಗತಿ ಎಂದರೆ ಜಿಲ್ಲೆಯಲ್ಲಿ ಅನಧಿಕೃತವಾದ ಸಂಸ್ಥೆಯೊಂದು ಹುಟ್ಟಿ ಕೊಂಡು ರಾಜ್ಯ ಹಾಗೂ ಜಿಲ್ಲಾ ಸಂಸ್ಥೆಯ ಯಾವುದೇ ಅನುಮತಿಯನ್ನು ಪಡೆಯದೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಗೆ ಮುಂದಾಗಿರುವುದು ಕಂಡು ಬಂದಿದ್ದು, ಆ ಸಂಸ್ಥೆಯ ಕ್ರೀಡಾಪಟುಗಳಿಗೆ ಯಾವುದೇ ಮಾನ್ಯತೆ ಇಲ್ಲ. ಅಂತಹವರನ್ನು ಜಿಲ್ಲಾ ತಂಡ ಎಂದು ಪರಿಗಣ ಸಲಾಗುವುದಿಲ್ಲ. ಎಂದ ಅವರು ಸುಂಟಿಕೊಪ್ಪ ಹಾಗೂ ಗೋಣ ಕೊಪ್ಪದಲ್ಲಿ ನಕಲಿ ಆಧಾರ್ ಕಾರ್ಡ್‍ಗಳನ್ನು ತಯಾರಿಸಿ 19 ವರ್ಷದ ವಯೋಮಿತಿಯ ಆಟಗಾರರನ್ನು 14 ವರ್ಷ ವಯೋಮಿತಿಯಲ್ಲಿ ಆಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದರಿಂದ ಕ್ರೀಡಾಪಟುಗಳ ಆಧಾರ್ ಕಾರ್ಡ್‍ಗಳನ್ನು ಆನ್‍ಲೈನ್ ಮೂಲಕ ಪರೀಶೀಲಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದರು. ಗೋಷ್ಠಿಯಲ್ಲಿ ಸಂಸ್ಥೆಯ ಖಜಾಂಜಿ ದೀಪಕ್ ಮಾಚಯ್ಯ ಇತರರು ಉಪಸ್ಥಿತರಿದ್ದರು.

Translate »