ಸೋಮವಾರಪೇಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ
ಕೊಡಗು

ಸೋಮವಾರಪೇಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ

May 25, 2018

ಸೋಮವಾರಪೇಟೆ:  ಡಾ.ಬಿ.ಆರ್. ಅಂಬೇಡ್ಕರ್ ತನ್ನ ವಿದ್ಯಾರ್ಥಿ ದಿಸೆ ಯಿಂದಲೇ ಸಾಕಷ್ಟು ಕಷ್ಟ ಕಾರ್ಪಣ್ಯ ಗಳನ್ನು ಎದುರಿಸಿದ್ದರೂ ಅವರು ಗಳಿಸಿದ ಉನ್ನತ ಶಿಕ್ಷಣವನ್ನು ಇಡೀ ವಿಶ್ವವೇ ಗೌರವ ನೀಡುವಂತೆ ಮಾಡಿದೆ ಎಂದು ಜಾನಪದ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ.ಮುರಳೀಧರ್ ಅಭಿಪ್ರಾಯಿಸಿದರು.

ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸ ಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ, ಆದಿದ್ರಾವಿಡ ಸಮಾ ಜದ ಮೊದಲನೇ ವರ್ಷದ ವಾರ್ಷಿಕೋ ತ್ಸವ ಹಾಗೂ ಜನಾಂದೋಲನ ಸಮಾವೇಶ ದಲ್ಲಿ ಮುಖ್ಯಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿಗೂ ಕೂಡ ಅಂಬೇಡ್ಕರ್ ಜನ್ಮದಿನ ವನ್ನು ವಿಶ್ವಜ್ಞಾನದಿನವನ್ನಾಗಿ ಆಚರಿಸಲಾಗು ತ್ತಿದೆ. ಆದರೆ ಸಮಾನತೆಯ ಪ್ರತೀಕವಾದ ಸಂವಿಧಾನಶಿಲ್ಪಿ ಅಂಬೇಡ್ಕರ್‍ರವರ ವಿಚಾರ ಧಾರೆಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ. ಆದಿ ದ್ರಾವಿಡ ಸಮಾಜ ಬಾಂಧವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾತ್ರ ಒತ್ತುಕೊಟ್ಟರೆ ಸಾಲದು, ಐಎಎಸ್, ಐಪಿಎಸ್‍ನಂತಹ ಉನ್ನತ ಶಿಕ್ಷಣವನ್ನು ನೀಡಲು ಮುಂದೆ ಬರಬೇಕೆಂದು ಹೇಳಿದರು.

ಸಮಾವೇಶವನ್ನು ಉದ್ಘಾಟಿಸಿ ಮಾತ ನಾಡಿದ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್‍ಕಾರ್ಯಪ್ಪ, ಜಿಲ್ಲೆಯಲ್ಲಿ ಆದಿದ್ರಾವಿಡ ಪರಿಶಿಷ್ಠ ಜನಾಂ ಗದ ಸುಮಾರು 20 ಸಾವಿರದಷ್ಟು ಇದ್ದರೂ, ಅವರಿಗೆ ಕಂದಾಯ ಇಲಾಖೆಯಿಂದ ಜಾತಿ ಪ್ರಮಾಣಪತ್ರವನ್ನು ಸಮರ್ಪಕವಾಗಿ ದೊರೆ ಯದಿರುವುದು ವಿಷಾದನೀಯ, ಈ ನಿಟ್ಟಿ ನಲ್ಲಿ ಜಿಲ್ಲಾಧಿಕಾರಿಗಳು ನ್ಯಾಯೋಚಿತ ವಾದ ತೀರ್ಮಾನವನ್ನು ಕೈಗೊಳ್ಳ ಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿ ಸಿದ್ದ ಆದಿದ್ರಾವಿಡ ಸಮಾಜದ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ಮಾತನಾಡಿ, ನಮ್ಮ ಸಮಾಜ ಬಾಂಧವರಿಗೆ ಸರಕಾರ ಸಮ ರ್ಪಕವಾದ ಜಾತಿ ಪ್ರಮಾಣಪತ್ರವನ್ನು ನೀಡದೇ ಇರುವುದರಿಂದ ಸರಕಾರದ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯ ವಾಗುತ್ತಿಲ್ಲ. ಪಕ್ಕದ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಸೂಕ್ತ ದಾಖಲಾತಿಯನ್ನು ನೀಡಿ ದ್ದಾರೆ. ಆದರೆ ಕೊಡಗು ಜಿಲ್ಲೆಯಲ್ಲಿ ತಾರತಮ್ಯ ಧೋರಣೆಯನ್ನು ಅನುಸರಿಸು ತ್ತಿದ್ದಾರೆ. ಸಾವಿರಾರು ಮಂದಿ ಜನಾಂಗ ಬಾಂಧವರು ನಿವೇಶನವಿಲ್ಲದೆ ಶೋಚ ನೀಯ ಬದುಕನ್ನು ನಡೆಸುತ್ತಿದ್ದಾರೆ. ಜನಪ್ರತಿ ನಿಧಿಗಳು ಕೇವಲ ಚುನಾವಣೆಯ ಸಂದರ್ಭ ಪೊಳ್ಳು ಆಶ್ವಾಸನೆಗಳನ್ನು ನೀಡುತ್ತಾರೆ. ನಂತರ ಐದು ವರ್ಷ ಮೌನಕ್ಕೆ ಶರ ಣಾಗುತ್ತಾರೆ ಎಂದು ಟೀಕಿಸಿದರು.

ವೇದಿಕೆಯಲ್ಲಿ ಆದಿದ್ರಾವಿಡ ಸಮಾಜದ ಸಲಹೆಗಾರ ಶೇಖರ್ ಬಲ್ಲಾಳ್, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಮೋಹನ್ ನೆಲ್ಲಿಗುಂಡಿ, ಮಂಗಳೂರು ಚೈತನ್ಯ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಸೂಟರ್‍ಪೇಟೆ, ಸಮಾಜದ ಜಿಲ್ಲಾ ಸಂಘದ ಪದಾಧಿಕಾರಿಗಳು, ತಾಲೂಕು ಘಟಕ ಅಧ್ಯಕ್ಷರು ಹಾಗೂ ಪದಾಧಿಕಾರಿ ಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಮಾಜ ಬಾಂಧವರಿಗಾಗಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Translate »