ದ್ವೇಷದಿಂದ ಕಾಳುಮೆಣಸು ಬಳ್ಳಿ ಧ್ವಂಸ
ಕೊಡಗು

ದ್ವೇಷದಿಂದ ಕಾಳುಮೆಣಸು ಬಳ್ಳಿ ಧ್ವಂಸ

May 26, 2018

ಸೋಮವಾರಪೇಟೆ:  ಕಾಫಿ ತೋಟದಲ್ಲಿದ್ದ ಕಾಳುಮೆಣಸು ಬಳ್ಳಿಗಳನ್ನು ಕತ್ತಿಯಿಂದ ಕಡಿದು ನಷ್ಟಗೊಳಿಸಿರುವ ಘಟನೆ ಸಮೀಪದ ಚೌಡ್ಲು ಗ್ರಾಮದಲ್ಲಿ ನಡೆದಿದೆ.

ಚೌಡ್ಲು ಗ್ರಾಮದ ಸಿ.ಕೆ. ದೇವಯ್ಯ ಅವರಿಗೆ ಸೇರಿದ 2 ಎಕರೆ ಕಾಫಿ ತೋಟದಲ್ಲಿದ್ದ ಸುಮಾರು 10 ರಿಂದ 12 ವರ್ಷದ ಕಾಳುಮೆಣಸಿನ 200ಕ್ಕೂ ಅಧಿಕ ಬಳ್ಳಿಗಳನ್ನು ಕತ್ತಿಯಿಂದ ಕಡಿದು ತುಂಡರಿಸಲಾಗಿದ್ದು, ಸಹೋದರನ ಪತ್ನಿ ಹಾಗೂ ಪುತ್ರನಿಂದ ಕೃತ್ಯ ನಡೆದಿದೆ ಎಂದು ದೇವಯ್ಯ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸೋಮವಾರಪೇಟೆ ಠಾಣಾಧಿಕಾರಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕರಿಗೆ ದೂರು ಸಲ್ಲಿಸಿರುವ ದೇವಯ್ಯ ಅವರು, 2 ಏಕರೆ ತೋಟದಲ್ಲಿ ಬೆಳೆಯಲಾಗಿದ್ದ 200ಕ್ಕೂ ಅಧಿಕ ಕಾಳುಮೆಣಸಿನ ಬಳ್ಳಿಗಳನ್ನು ಸಿ.ಪಿ.ದರ್ಶನ್ ಮತ್ತು ಆತನ ತಾಯಿ ಡೀಲಾಕ್ಷಿ ಅವರುಗಳು ಕಡಿದು ನಾಶಪಡಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ದಾಖಲಾಗಿದೆ. ದೇವಯ್ಯ ಅವರ ದೂರು ಸ್ವೀಕರಿಸಿರುವ ಪೊಲೀಸರು, ದೂರಿನ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಾಗಿದ್ದು, ನ್ಯಾಯಾಲಯದಿಂದ ಆದೇಶ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Translate »