ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಕಾಂಗ್ರೆಸ್ ವಕ್ತಾರ ರಾಜೇಶ್
ಕೊಡಗು

ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಕಾಂಗ್ರೆಸ್ ವಕ್ತಾರ ರಾಜೇಶ್

May 26, 2018

ವಿರಾಜಪೇಟೆ: ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯಪಾಲರ ಆಹ್ವಾ ನದ ಮೇರೆಗೆ ಪ್ರಮಾಣ ವಚನ ಸ್ವೀಕರಿ ಸಲಾಯಿತು. ಇದನ್ನು ಕರಾಳದಿನ ಎಂದು ಅಚರಿಸಿರುವ ಬಿಜೆಪಿಯವರಿಗೆ ಸಂವಿ ಧಾನದ ಹಾಗೂ ಪ್ರಜಾಪ್ರಭು ತ್ವದ ಮೇಲೆ ನಂಬಿಕೆ ಇಲ್ಲವಾಗಿರುವುದು ಕಂಡುಬರು ತ್ತದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಕ್ತಾರ ಡಿ.ಪಿ.ರಾಜೇಶ್ ಹೇಳಿದರು.

ವಿರಾಜಪೇಟೆಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಮೇರೆ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಅವಕಾಶ ನೀಡಲಾಯಿತು. ಆದರು ಅವ ಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಲು ವಿಫಲರಾದರು. ಈ ಹಿನ್ನಲೆ ಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ ಕಾರ ಐದು ವರ್ಷ ಉತ್ತಮ ಆಡಳಿತ ನೀಡಲಿದೆ. ದೇಶದಲ್ಲಿ ಪೆಟ್ರೋಲ್, ಡೀಸಲ್ ಹಾಗೂ ಜನಸಾಮಾನ್ಯರ ದಿನಬಳಕೆಯ ವಸ್ತುಗಳ ಬೆಲೆ, ದಿನದಿಂದ ದಿನಕ್ಕೆ ಹೆಚ್ಚಿ ಸುತ್ತಿರುವುದರಿಂದ ಬಿಜೆಪಿಯವರು ದಿನ ನಿತ್ಯ ಕರಾಳ ದಿನವನ್ನಾಗಿ ಆಚರಿಸುವುದು ಸೂಕ್ತ ಎಂದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಅಪವಿತ್ರ ಮೈತ್ರಿ ಎಂದು ಬಿಜೆಪಿ ಪಕ್ಷ ದವರು ಅರೋಪಿಸುತ್ತಿದ್ದಾರೆ ಆದರೆ ಮಣ ಪುರಂ, ಮಿಜೋರಂ ಮತ್ತು ಗೋವ ರಾಜ್ಯ ಗಳಲ್ಲಿ ಅವರ ಮೈತ್ರಿ ಪವಿತ್ರವಾಗಿದೆಯೇ? ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಸಿ.ಕೆ. ಪ್ರಥ್ವಿನಾಥ್, ಮಹ್ಮದ್ ರಾಫಿ ಇತರರು ಉಪಸ್ಥಿತರಿದ್ದರು.

Translate »