ಮಹಿಳೆಯರಿಂದ ಬ್ರಹ್ಮಗಿರಿ ಬೆಟ್ಟದ ಪಾವಿತ್ಯ್ರತೆಗೆ ಧಕ್ಕೆ
ಕೊಡಗು

ಮಹಿಳೆಯರಿಂದ ಬ್ರಹ್ಮಗಿರಿ ಬೆಟ್ಟದ ಪಾವಿತ್ಯ್ರತೆಗೆ ಧಕ್ಕೆ

May 25, 2018

ಮಡಿಕೇರಿ: ಮಹಿಳೆಯರು ಪುರಾಣ ಪ್ರಸಿದ್ಧ ಬ್ರಹ್ಮಗಿರಿ ಬೆಟ್ಟ ಹತ್ತು ವಂತಿಲ್ಲ ಎಂದು ದೈವಜ್ಞರಾದ ನೀಲೇಶ್ವರ ಪದ್ಮನಾಭ ತಂತ್ರಿ ಹೇಳಿದ್ದಾರೆ. ಮೂರು ದಿನಗಳಿಂದ ಮಡಿಕೇರಿಯ ತಲಕಾವೇರಿ ಯಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ವೇಳೆ ಅವರು, ಬ್ರಹ್ಮಗಿರಿ ಪವಿತ್ರ ಕ್ಷೇತ್ರ. ಮಹಿಳೆಯರು, ಶರ್ಟ್ಸ್ ಮತ್ತು ಟಿಶರ್ಟ್ ಧರಿಸಿ ಬೆಟ್ಟವೇರುವ ಮೂಲಕ ಸ್ಥಳದ ಪವಿತ್ರತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

‘ತುಲಾ ಸಂಕ್ರಮ’ (ಅಕ್ಟೋಬರ್ 17) ಆರಂಭದಿಂದ’ ವೃಷಭ ಸಂಕ್ರಮಣದ ಅವಧಿಯವರೆಗೆ ಪುರುಷರು, 10 ವರ್ಷ ಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳು ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆ ಯರಿಗೆ ಮಾತ್ರ ಬೆಟ್ಟ ಏರಲು ಅವಕಾಶ ವಿದೆ” ಎಂದು ತಿಳಿಸಿರುವ ಅವರು, ಪವಿತ್ರ ಸ್ಥಳವನ್ನು ಪ್ರವಾಸೋದ್ಯಮ ಸ್ಥಳವಾಗಿ ಮಾರ್ಪಡಿಸಲಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಹೀಗೆ ಬೆಟ್ಟವೇರುವ ಮಹಿಳೆ ಯರು ಹಾಗೂ ಪುರುಷರು ಅಲ್ಲಿ ಅಸಭ್ಯ ವರ್ತನೆ ತೋರುವುದರಿಂದ ಬೆಟ್ಟದ ಹಾಗೂ ಈ ಸ್ಥಳದ ಆಧ್ಯಾತ್ಮಿಕ ಪ್ರಭಾವ ಕಡಿಮೆಯಾಗಲಿದೆ.ಇದರಿಂದಾಗಿ ಕಾವೇರಿ ನದಿ ಮೂಲ ಸ್ಥಾನ ಕಣ್ಮರೆಯಾಗುವ ಭೀತಿ ಇದೆ. ‘ದೇವರ ಕುರಿತಂತೆ ಯಾವ ಭಕ್ತಿ ಇಲ್ಲದವರು ಯಾತ್ರಾ ಕೇಂದ್ರಕ್ಕೆ ಆಗಮಿಸುತ್ತಾರೆ. ಮಹಿಳೆಯರು ತಾವು ಬೆಟ್ಟದ ಮೇಲಿನ ನದಿ ಮೂಲವನ್ನು ಅಪವಿತ್ರ ಗೊಳಿಸುತ್ತಾರೆ. ಇದರಿಂದಾಗಿ ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ’ ಎಂದಿದ್ದಾರೆ.
ಮಹಿಳೆಯರಿಗೆ ಬ್ರಹ್ಮಗಿರಿ ಬೆಟ್ಟ ಏರುವು ದನ್ನು ನಿಷೇಧಿಸುವ ಕ್ರಮ ಅಚ್ಚರಿಗೆ ಕಾರಣ ವಾಗಿದೆ. ‘ಕಾವೇರಿ ಮಾತೆಯನ್ನು ಪೂಜಿ ಸಲು ಪುರುಷರಷ್ಟೇ ಅಧಿಕಾರ ಮಹಿಳೆ ಯರಿಗೆ ಇದೆ. ಪುರುಷ ಪ್ರವಾಸಿಗರೇ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಕೇವಲ ಮಹಿಳೆಯರಿಂದ ಮಾತ್ರವೇ ಹೇಗೆ ಸ್ಥಳದ ಪವಿತ್ರತೆ ನಾಶವಾಗಲಿದೆ?’ ಎಂದು ಮಡಿಕೇರಿ ನಿವಾಸಿಯೊಬ್ಬರು ಪ್ರಶ್ನಿಸಿದ್ದಾರೆ.

ದೈವಜ್ಞರಾದ ತಂತ್ರಿಯವರ ಮಾತು ಗಳು ನ್ಯಾಯಸಮ್ಮತವಾಗಿಲ್ಲ ಎಂದ ಸ್ತ್ರೀವಾದಿ ಅನನ್ಯಾ “ಮಹಿಳೆಯರು ನಾವು ಸುಲಭವಾಗಿ ಬಲಿಪಶುಗಳಾಗುತ್ತಿದ್ದೇವೆ. ನಾವು ಯಾತ್ರಾಸ್ಥಳಗಳಿಗೆ ಯಾವ ಉಡುಪಿ ನಲ್ಲಿ ಹೋಗಬೇಕೆನ್ನುವುದು ನಮ್ಮ ಸ್ವಂತ ಆಯ್ಕೆಗೆ ಬಿಟ್ಟದ್ದು, ಹಾಗಾಗಿ ಮಹಿಳೆ ಯರನ್ನು ಅಲ್ಲಿಗೆ ಬರಬಾರದೆಂದು ಹೇಳುವುದಕ್ಕಾಗಿ ಅವರ ಉಡುಪಿನತ್ತ ಬೆರಳು ತೋರಿಸಿರುವುದು ಸರಿಯಲ್ಲ.

‘ಮಹಿಳೆಯರಿಂದ ನೀರಿನ ಕೊರತೆ ಯಾಗಿದೆಯೆ? ನಾವು ನಮ್ಮ ಸಂಪ ನ್ಮೂಲಗಳನ್ನು ಸರಿಯಾದ ಕ್ರಮದಿಂದ ಬಳಸಿದಲ್ಲಿ ಹಾಗೆಯೇ ಹೆಚ್ಚು ಜವಾ ಬ್ದಾರಿಯುತ ಪ್ರಜ್ಞೆಯನ್ನು ಹೊಂದಿದ್ದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ. ಕೆಲವು ಜ್ಯೋತಿಷಿಗಳಿಗೆ ಮಹಿಳೆಯರನ್ನು ಟೀಕಿಸುವುದಕ್ಕಾಗಿ ಯಾವುದಾದರೂ ಕಾರಣ ಬೇಕು. ಅದು ಕ್ಷುಲ್ಲಕ ಕಾರಣ ವಾದರೂ ಸರಿಯೆ. ‘ಪಿತೃ ಪ್ರಧಾನವಾದ ಸಮಾಜ ವ್ಯವಸ್ಥೆಯ ಕಲ್ಪನೆಗಳು ನಮ್ಮ ಸಮಾಜದಲ್ಲಿ ಇಂದಿಗೂ ಹೇಗೆ ಆಳವಾಗಿ ಬೇರೂರಿದೆ ಎಂದು ಹೇಳಲು ಇದೊಂದು ಹೊಸ ಉದಾಹರಣೆ.’ ಎಂದು ಹೇಳಿದರು.

Translate »