ಶಿವಾನುಭವ ದಾಸೋಹ ಉಪನ್ಯಾಸ
ಮೈಸೂರು

ಶಿವಾನುಭವ ದಾಸೋಹ ಉಪನ್ಯಾಸ

May 25, 2018

ಮೈಸೂರು:  ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಆಶ್ರಯದಲ್ಲಿ ಪ್ರತಿ ತಿಂಗಳ ಕೊನೆಯ ಶನಿವಾರದಂದು ನಡೆಯುವ ಶಿವಾನುಭವ ದಾಸೋಹ ಮಾಲಿಕೆಯ 247ನೆಯ ಕಾರ್ಯಕ್ರಮದಲ್ಲಿ ಮೈಸೂರಿನ ಜೆಎಸ್‍ಎಸ್ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಟಿ. ಶೈಲಜ ಅವರು ಮೇ 26ರಂದು ಸಂಜೆ 6 ಗಂಟೆಗೆ ಶರಣರ ಧರ್ಮಸಂದೇಶ ಕುರಿತು ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮವು ನಂ. 1150, ಜೆಎಸ್‍ಎಸ್ ಬಡಾವಣೆ, 2ನೇ ಹಂತ ಇಲ್ಲಿ ನಡೆಯಲಿದೆ. ನಿವೃತ್ತ ಅಬಕಾರಿ ಉಪ ಆಯುಕ್ತ ಪುಟ್ಟಣ್ಣ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದ ಆರಂಭದಲ್ಲಿ ಡಾ. ಓಂಪ್ರಕಾಶ್ ಮತ್ತು ತಂಡದವರು ಭಜನೆ ನಡೆಸಿಕೊಡಲಿದ್ದಾರೆ.

Translate »