ಮೂವರಿಗೆ ಇರಿದಿದ್ದ ಆರೋಪಿ ಬಂಧನ
ಕೊಡಗು

ಮೂವರಿಗೆ ಇರಿದಿದ್ದ ಆರೋಪಿ ಬಂಧನ

April 26, 2018

ಸುಂಟಿಕೊಪ್ಪ: ಕ್ಷುಲ್ಲಕ ಕಾರಣಕ್ಕೆ ಕಲಹ ನಡೆದು ಮೂವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಕುಶಾಲನಗರ ಸಮೀಪದ ಕಡುವಿನ ಹೊಸಹಳ್ಳಿ ನಿವಾಸಿಯಾದ ಪುಟ್ನಂಜ ಎಂಬಾತ ಭಾನುವಾರ ರಾತ್ರಿ ಮೂವರು ವ್ಯಕ್ತಿಗಳೊಂದಿಗೆ ಕ್ಷುಲ್ಲಕ ಕಾರಣಕ್ಕೆ ಕಲಹವೇರ್ಪಟ್ಟು ಚಾಕುವಿನಿಂದ ಇರಿದು ಗಾಯಗೊಳಿಸಿ ತಲೆಮರೆಸಿಕೊಂಡಿದ್ದ ಆರೋಪಿ ಪುಟ್ನಂಜನನ್ನು ಜಿಲ್ಲಾ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಸೋಮವಾರಪೇಟೆ ಡಿವೈಎಸ್‍ಪಿ ಕುಶಾಲನಗರ ವೃತ್ತನಿರೀಕ್ಷಕರ ಮಾರ್ಗದರ್ಶನದ ಮೇರೆ ಹಾಸನದ ಬಳಿಯಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್, ಎ.ಎಸ್.ಐ ಶಿವಪ್ಪ, ಸಿಬ್ಬಂದಿಗಳಾದ ಧನುಕುಮಾರ್, ರಹೆಮಾನ್, ಪುನೀತ್ ಕುಮಾರ್ ಇವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

Translate »