ನಾಳೆ, ನಾಡಿದ್ದು ಮೈಸೂರಿನ ಕೆಲವೆಡೆ ನೀರು ಸರಬರಾಜು ವ್ಯತ್ಯಯ
ಮೈಸೂರು

ನಾಳೆ, ನಾಡಿದ್ದು ಮೈಸೂರಿನ ಕೆಲವೆಡೆ ನೀರು ಸರಬರಾಜು ವ್ಯತ್ಯಯ

April 26, 2018

ಮೈಸೂರು: ತುರ್ತು ಕಾಮಗಾರಿ ನಿಮಿತ್ತ ಏ. 27 ಹಾಗೂ 28 ರಂದು ವಾರ್ಡ್ ನಂ. 19 ರಿಂದ 45 ರವರೆಗೆ, ಇದಕ್ಕೆ ಸಂಬಂಧಪಟ್ಟ ಡಿಎಂಎ ಪ್ರದೇಶಗಳು, ಹೊರವಲಯಗಳಾದ ಆರ್‍ಎಂಪಿ, ಬಿಇಎಂಎಲ್, ವಿಜಯನಗರ 3ನೇ ಹಂತ, ಹೆಬ್ಬಾಳು 1ನೇ ಹಂತ, 2ನೇ ಹಂತ ಮತ್ತು 3ನೇ ಹಂತ, ಕೆಹೆಚ್‍ಬಿ ಕಾಲೋನಿ, ಹೂಟಗಳ್ಳಿ, ಕುಂಬಾರಕೊಪ್ಪಲು, ಲೋಕನಾಯಕನಗರ, ಬಿ.ಎಂ.ಶ್ರೀನಗರ, ಬೃಂದಾವನ ಬಡಾವಣೆ, ವಿವಿ ಮೊಹಲ್ಲಾ, ಒಂಟಿಕೊಪ್ಪಲು, ವಿನಾಯಕನಗರ, ಮಂಜುನಾಥಪುರ, ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ವಿಜಯನಗರ 1 ಮತ್ತು 2ನೇ ಹಂತ, ಗೋಕುಲಂ, ಯಾದವಗಿರಿ, ಇರ್ವಿನ್ ರಸ್ತೆ, ಸೊಪ್ಪಿನಕೇರಿ, ರಮಾವಿಲಾಸ ರಸ್ತೆ, ಸಯ್ಯಾಜಿ ರಾವ್ ರಸ್ತೆ, ಒಕ್ಕಲಗೇರಿ, ಶಿವರಾಂಪೇಟೆ, ಗಂಗೋತ್ರಿ ಬಡಾವಣೆ, ಶಾರದಾದೇವಿನಗರ, ಟಿ.ಕೆ. ಲೇಔಟ್ ಹಾಗೂ ಇತ್ಯಾದಿ ಪ್ರದೇಶಗಳಲ್ಲಿ ನೀರು ಸರಬರಾಜಲ್ಲಿ ವ್ಯತ್ಯಯ ಉಂಟಾ ಗಲಿದೆ ಎಂದು ವಾಣ ವಿಲಾಸ ನೀರು ಸರಬರಾಜು ವಿಭಾಗದ ಪ್ರಕಟಣೆ ತಿಳಿಸಿದೆ.

Translate »