ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
ಮೈಸೂರು

ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ

April 26, 2018

ಮೈಸೂರು: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಸಂಬಂಧ ಮೈಸೂರಿನ ಅರಮನೆ ಭದ್ರತಾ ವಿಭಾಗದ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.

ಕಾನ್‍ಸ್ಟೇಬಲ್ ಕೆಂದಪ್ಪ ಹಾಗೂ ಹೆಡ್‍ಕಾನ್ಸ್‍ಟೇಬಲ್ ನಾಗರಾಜು ಹಲ್ಲೆ ಆರೋಪ ಎದುರಿಸುತ್ತಿರುವ ಸಿಬ್ಬಂದಿ. 2014ರಂದು ಆರ್‍ಟಿಐ ಕಾರ್ಯಕರ್ತ ರಾಜೇಶ್ ಎಂಬುವರು ಅರಮನೆ ಭದ್ರತಾ ವಿಭಾಗದ ಕಚೇರಿಗೆ ಹೋಗಿದ್ದ ವೇಳೆ ಈ ಇಬ್ಬರು ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಸಂಬಂಧ ದೇವರಾಜ ಠಾಣೆ ಪೊಲೀಸರು ಪ್ರಕ ರಣ ದಾಖಲಿಸಿಕೊಂಡಿದ್ದರಾದರೂ, ನಂತರ ‘ಬಿ’ ರಿಪೋರ್ಟ್ ಮಾಡಿದ್ದರು.

ಪೊಲೀಸರ ಈ ಕ್ರಮ ಪ್ರಶ್ನಿಸಿ ರಾಜೇಶ್, ಮೈಸೂರಿನ 1ನೇ ಅಪರ ಸತ್ರ ನ್ಯಾಯಾ ಲಯದ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್. ಸುಧೀಂದ್ರನಾಥ ಅವರು ಆರೋಪಿಗಳಾದ ಕೆಂದಪ್ಪ ಮತ್ತು ನಾಗರಾಜು ವಿರುದ್ಧ ಐಪಿಸಿ ಸೆಕ್ಷನ್ 323,341, 504 ರೆಡ್‍ವಿತ್ 34 ರೀತ್ಯಾ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಏಪ್ರಿಲ್ 19ರಂದು ಆದೇಶಿಸಿದ್ದಾರೆ.

Translate »