ಕುಲ್ಲೇಟಿರ ಕಪ್ ಹಾಕಿ ಹಬ್ಬಕನ್ನಂಡ, ತಾಪಂಡ, ಚೆಯ್ಯಂಡ ಸೇರಿ 15 ತಂಡ ಮುನ್ನಡೆ
ಕೊಡಗು

ಕುಲ್ಲೇಟಿರ ಕಪ್ ಹಾಕಿ ಹಬ್ಬಕನ್ನಂಡ, ತಾಪಂಡ, ಚೆಯ್ಯಂಡ ಸೇರಿ 15 ತಂಡ ಮುನ್ನಡೆ

April 27, 2018

ನಾಪೋಕ್ಲು, ಏ.26- 22ನೇ ವರ್ಷದ ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಪುಲಿಯಂಡ, ಮಂಡೇಟಿರ, ಅರೆಯಡ, ಚೆಯ್ಯಂಡ, ತಾಪಂಡ, ಮಂಡೇಯಡ, ಮುದ್ದಿಯಂಡ, ಕನ್ನಂಡ, ಕೆಲೇಟಿರ, ಮಂಡೀರ, ಚೇನಂಡ, ಮಣವಟ್ಟೀರ, ಮುಂಡ್ಯೋಳಂಡ, ಪಟ್ಟಡ, ಅಪ್ಪಚ್ಚೀರ, ತಂಡಗಳು ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು.

ಇಂದು ನಡೆದ ಮೊದಲ ಪಂದ್ಯದಲ್ಲಿ ಪುಲಿಯಂಡ ತಂಡವು ತೆನ್ನೀರ ತಂಡ ವನ್ನು 5-0 ಗೋಲುಗಳಿಂದ ಭರ್ಜರಿಯಾಗಿ ಮಣ ಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಪುಲಿಯಂಡ ಪರ ತಿಮ್ಮಯ್ಯ 3, ಪೊನ್ನಪ್ಪ 1, ಮುದ್ದಪ್ಪ 1 ಗೋಲು ಗಳಿಸಿದರು.

ನಂತರದ ಪಂದ್ಯದಲ್ಲಿ ಅರೆಯಡ ತಂಡವು ಕೇಳಪಂಡ ತಂಡವನ್ನು 4-1 ಗೋಲು ಗಳಿಂದ ಮಣ ಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಅರೆಯಡ ತಂಡದ ಸನ್ನು ಚಿಣ್ಣಪ್ಪ ಮೂರು ಗೋಲು ಬಾರಿಸಿ ಮಿಂಚಿದರೆ ಗಣೇಶ್ ಬೆಳ್ಳಪ್ಪ ಒಂದು ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು ಚೆಯ್ಯಂಡ ತಂಡವು ಎದುರಾಳಿ ತೀತ್ರಾ ಮಾಡ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಮುಂದಿನ ಹಂತ ತಲುಪಿತು. ಕೂತೂಹಲದಿಂದ ಕೂಡಿದ ಪಂದ್ಯದಲ್ಲಿ ಚೆಯ್ಯಂಡ ಪರ ಮನು, ಶಂಕರಿ ಗೋಲು ಬಾರಿಸಿ ಮಿಂಚಿದರು. ನಂತರದ ಪಂದ್ಯ ದಲ್ಲಿ ಅಪ್ಪಚ್ಚೀರ ಮತ್ತು ಚಿಂಡಮಾಡ ತಂಡಗಳ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ 1-1 ಸಮ ಬಲ ಸಾಧಿಸಿದ್ದು ನಂತರ ಟೈ ಬ್ರೇಕರ್ ಅಳವಡಿಸಲಾಗಿ ಇದರಲ್ಲಿ 5-4 ಗೋಲುಗಳಿಂದ ಅಪ್ಪಚ್ಚೀರ ವಿಜಯ ಸಾಧಿಸಿತು.

ಐದನೇ ಪಂದ್ಯದಲ್ಲಿ ತಾಪಂಡ ತಂಡವು ತಿರೋಡಿರ ತಂಡವನ್ನು2-0 ಗೋಲು ಗಳಿಂದ ಮಣ ಸಿ ಮುಂದಿನ ಹಂತಕ್ಕೆ ಪ್ರವೆಶವನ್ನು ಪಡೆದುಕೊಂಡಿತು. ತಾಪಂಡ ತಂಡದ ಪರ ಆವಿನ್, ಸಂಜು ಗೋಲು ಹೊಡೆದು ಮಿಂಚಿದರು.
2 ನೇ ಮೈದಾನದಲ್ಲಿ ನಡೆದ ಮೊದಲ ಪಂದ್ಯಾಟದಲ್ಲಿ ಮಂಡೇಯಡ ತಂಡವು ಚೊಟ್ಟೆಯಂಡಮಾಡ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು. ಮಂಡೇಯಡ ಪರ ಗಿರೀಶ್ ಕಾವೇರಪ್ಪ, ವಿನೋದ್ ಚಂಗಪ್ಪ ಗೋಲು ಬಾರಿಸಿ ಮಿಂಚಿದರು.
ನಂತರದ ಪಂದ್ಯದಲ್ಲಿ ಮುದ್ದಿಯಂಡ ತಂಡವು ಅಪ್ಪನೆರವಂಡ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೇ ಪ್ರವೇಶವನ್ನು ಪಡೆದುಕೊಂಡಿತು. ಮುದ್ದಿಯಂಡ ತಂಡದ ಪರ ಬೋಪಣ್ಣ ಗೋಲು ಗಳಿಸಿದರು.

ಕನ್ನಂಡ ತಂಡವು ಕಾಡ್ಯಮಾಡ ತಂಡ ವನ್ನು 1-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದು ಕೊಂಡಿತು ತಂಡದ ಪರ ಅಲನ್ ಗೋಲು ಗಳಿಸಿದರು. ಪಟ್ಟಡ ತಂಡವು ಅಲ್ಲಪ್ಪಿರ ತಂಡವನ್ನು 3-0 ಗೋಲಿನಿಂದ ಮಣ ಸಿತು. ಪಟ್ಟಡ ಪರ ಬಿಪಿನ್ 1, ಸತೀಶ್ 2 ಗೋಲು ಬಾರಿಸಿದರು. ಮೂರನೇ ಮೈದಾನದ ಪಂದ್ಯದಲ್ಲಿ ಕೆಲೇಟಿರ ತಂಡವು ಬಾಚಮಂಡ ತಂಡವನ್ನು 4-0 ಗೋಲು ಗಳಿಂದ ಭರ್ಜರಿಯಾಗಿ ಮಣ ಸಿತು, ಏಕಪಕ್ಷೀಯವಾಗಿ ಕೂಡಿದ್ದು ಆಟದಲ್ಲಿ ಕೆಲೇಟಿರ ತಂಡದ ಚಾಮನ್ ಚಿಣ್ಣಪ್ಪ 1, ಕವನ್ ಕಾಳಪ್ಪ 2, ನಾಚಪ್ಪ 1 ಗೋಲು ಬಾರಿಸಿ ಮಿಂಚಿದರು. ನಂತರದ ಪಂದ್ಯದಲ್ಲಿ ಮಣವಟ್ಟೀರ ತಂಡವು ಬಯಾವಂಡ ತಂಡವನ್ನು 2-1 ಗೋಲುಗಳಿಂದ ಪರಾಭವ ಗೊಳಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದು ಕೊಂಡಿತು. ಮಣವಟ್ಟೀರ ಪರ ಆಶೀಕ್, ಮಧು ಅಯ್ಯಪ್ಪ ಗೋಲು ಹೊಡೆದು ಮಿಂಚಿದರು.

ತಂಬುಕುತ್ತೀರ ಮತ್ತು ಮುಂಡ್ಯೋಳಂಡ ನಡುವೆ ನಡೆದ ಪಂದ್ಯಾಟದಲ್ಲಿ ಮುಂಡ್ಯೋ ಳಂಡ ತಂಡವು 2-0 ಗೋಲಿನಿಂದ ಜಯ ಗಳಿಸಿತು. ಮುಂಡ್ಯೋಳಂಡ ಬೋಪಯ್ಯ ಗೋಲು ಹೊಡೆದರು.

ಈ ದಿನದ ಪಂದ್ಯಾಟದ ತೀರ್ಪುಗಾರ ರಾಗಿ ರೋಶನ್, ಕುಶ, ದಿಲನ್, ಟಿಶಾ, ಪವನ್, ನಾಣಯ್ಯ, ದೀನ, ಆಕಾಶ್, ಕಾರ್ತಿಕ್, ಬಿದ್ದಪ್ಪ, ನಾಚಪ್ಪ, ಪಳಂಗಪ್ಪ, ಸತೀಶ್, ಬೋಸ್, ಸೋಮಣ್ಣ, ಸುಬ್ಬಯ್ಯ ಇವರು ಕಾರ್ಯನಿರ್ವಹಿಸಿದರು.

Translate »