ಅನಾಮಧೇಯ ಪತ್ರ ಬಯಲು ಮಾಡಿದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಬ್ಯಾಂಕ್ ಉದ್ಯೋಗಿ ಸೇರಿ ಇಬ್ಬರ ಬಂಧನ
ಕೊಡಗು

ಅನಾಮಧೇಯ ಪತ್ರ ಬಯಲು ಮಾಡಿದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಬ್ಯಾಂಕ್ ಉದ್ಯೋಗಿ ಸೇರಿ ಇಬ್ಬರ ಬಂಧನ

April 26, 2018

ಮಡಿಕೇರಿ: ಜಿಲ್ಲಾಧಿಕಾರಿಗಳಿಗೆ ತಲುಪಿದ ಅನಾಮಿಕ ಪತ್ರವೊಂದರಿಂದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವೊಂದು ಬಯಲಾ ಗಿದ್ದು, ಪೊನ್ನಂಪೇಟೆಯ ಟೌನ್ ಬ್ಯಾಂಕ್ ಉದ್ಯೋಗಿ ಮಂಜು,(44) ಮತ್ತು 9ನೇ ತರಗತಿ ವಿದ್ಯಾರ್ಥಿಯೋರ್ವನನ್ನು ಫೋಕ್ಸೊ ಕಾಯ್ದೆಅಡಿಯಲ್ಲಿ ಪೊಲೀ ಸರು ಬಂಧಿಸಿದ್ದಾರೆ.

ಘಟನೆ ವಿವರ: ಅಪ್ರಾಪ್ತ ಬಾಲಕಿಯ ತಂದೆ ಪೊನ್ನಂಪೇಟೆ ಟೌನ್ ಬ್ಯಾಂಕ್ ಉದ್ಯೋಗಿಯಾಗಿದ್ದು ಕಳೆದ ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಬಳಿಕ ಈ ಕೆಲಸ ಸಂತ್ರಸ್ಥೆ ಬಾಲಕಿಯ ತಾಯಿಗೆ ಸಿಕ್ಕಿತ್ತು. ಟೌನ್ ಬ್ಯಾಂಕ್ ಉದ್ಯೋಗಿ ಆರೋಪಿ ಮಂಜು ಮತ್ತು ಬಾಲಕಿಯ ತಂದೆ ಸ್ನೇಹಿತ ರಾಗಿದ್ದ ಹಿನ್ನಲೆಯಲ್ಲಿ ಆತ ಬಾಲಕಿಯ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಬಾಲಕಿ ಮನೆಯಲ್ಲಿ ಒಬ್ಬಳೆ ಇದ್ದ ಸಂದರ್ಭ ಮಂಜು ಅಕೆಯ ಮನೆಗೆ ಬಂದು ಹೋಗಿದ್ದ. ಇದನ್ನ ಕಂಡ ಗ್ರಾಮಸ್ಥರು ಮಂಜುವಿನ ಬಗ್ಗೆ ಸಂಶಯಗೊಂಡಿದ್ದರು ಎನ್ನಲಾಗಿದೆ.

ಈ ಘಟನೆಯ ಬಳಿಕ ಬಾಲಕಿಯ ವರ್ತನೆ ಯಲ್ಲೂ ಬದಲಾವಣೆ ಕಂಡು ಬಂದಿದ್ದ ರಿಂದ ಗ್ರಾಮದಲ್ಲಿ ಮಂಜುವಿನ ಬಗ್ಗೆ ಅಂತೆ ಕಂತೆಗಳ ಮಾತುಗಳು ಕೇಳಿ ಬಂದಿದ್ದವು. ಆದರೆ ಎಲ್ಲಿಯೂ ಪ್ರಕರಣದ ಸತ್ಯಾಂಶ ಹೊರಬಂದಿರಲ್ಲಿಲ್ಲ. ಬಾಲಕಿಯ ಚಿಕ್ಕಪ್ಪ ಮತ್ತು ಆಕೆಯ ತಾಯಿ ಬಾಲಕಿಯನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆ ದೊಯ್ದು ಪರೀಕ್ಷೆಗೆ ಒಳಪಡಿಸಿದಾಗಲೂ ಬಾಲಕಿಯು ಅತ್ಯಾಚಾರಕ್ಕೆ ಒಳಗಾಗಿರುವುದು ವೈದ್ಯಕೀಯವಾಗಿ ದೃಢಪಟ್ಟಿದೆ. ಬಳಿಕ ಬಾಲಕಿ ಯನ್ನು ಆಪ್ತಸಮಾಲೋಚನೆಗೆ ಒಳಪಡಿಸಿ ದಾಗಲು ಬಾಲಕಿ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಬಳಿಕ ದೇವಾಲಯಕ್ಕೆ ಕರೆದೊಯ್ದು ಬಾಲಕಿ ಯನ್ನು ಪ್ರಶ್ನಿಸಿದಾಗ ಆರೋಪಿಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಳು ಎನ್ನ ಲಾಗಿದೆ. ಈ ನಡುವೆ ಕಳೆದ ಎರಡು ದಿನ ಗಳ ಹಿಂದೆ ಅನಾಮಿಕ ವ್ಯಕ್ತಿ ಬರೆದ ಪತ್ರವೊಂದು ಕೊಡಗು ಜಿಲ್ಲಾಧಿಕಾರಿಗಳ ಕೈ ತಲುಪಿತ್ತು ಈ ಪತ್ರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಸಂಪೂರ್ಣ ಮಾಹಿತಿ ಇತ್ತು ಎನ್ನಲಾಗುತ್ತಿದೆ. ಈ ಅನಾಮಿಕ ಪತ್ರಕ್ಕೆ ಸ್ಪಂದಿಸಿದ ಜಿಲ್ಲಾ ಧಿಕಾರಿ ಪಿ.ಐ.ಶ್ರೀವಿದ್ಯಾ ಚೈಲ್ಡ್‍ಲೈನ್ ಫೌಂಡೇಷನ್ ಆಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಬಾಲಕಿಯನ್ನು ಸೋಮವಾರ ದಿನ ಬಾಲಕಿಯರ ಬಾಲಮಂದಿರಕ್ಕೆ ಕರೆ ತಂದ ಅಧಿಕಾರಿಗಳು ಬಳಿಕ ಪೊನ್ನಂ ಪೇಟೆ ಪೋಲಿಸರಿಗೆ ಲಿಖಿತ ದೂರು ನೀಡಿದ್ದರು. ದೂರನ್ನು ಆಧರಿಸಿ ಪೊನ್ನಂ ಪೇಟೆ ಪೋಲಿಸರು ಆರೋಪಿಗಳಾದ ಮಂಜು ಮತ್ತು 9ನೇ ತರಗತಿ ವಿಧ್ಯಾರ್ಥಿ ಓರ್ವನನ್ನು ವಶಕ್ಕೆ ಪಡೆದು ಬಳಿಕ ಫೋಕ್ಸೊ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ.

Translate »