ಮುಚ್ಚಳಿಕೆ ಬರೆಸಿಕೊಂಡು ಗ್ರೂಪ್ ಡಿಲೀಟ್‍ಗೆ ಸೂಚನೆ ಕುಶಾಲನಗರ, ಏ.7- ವಾಟ್ಸಾಪ್ ಗ್ರೂಪ್‍ನಲ್ಲಿ ಧಾರ್ಮಿಕ ಸಾಮರಸ್ಯ ಕದಡುವ ರೀತಿಯ ವೀಡಿಯೊ ಹರಿ ಬಿಟ್ಟ ಕಾರಣ ಗ್ರೂಪ್ ಅಡ್ಮಿನ್‍ಗೆ ಪೆÇಲೀಸರು ವಾರ್ನಿಂಗ್ ನೀಡಿದ್ದಾರೆ. ಕುಶಾಲನಗರ ಹಿತರಕ್ಷಣಾ ವೇದಿಕೆ ಎಂಬ ಗ್ರೂಪ್‍ನಲ್ಲಿ ಧಾರ್ಮಿಕ ಸಾಮ ರಸ್ಯ ಕದಡುವ ವಿಡೀಯೊ ಶೇರ್ ಮಾಡಲಾಗಿದೆ. ಈ ಸಂಬಂಧ ಚರ್ಚೆ ಗಳು ನಡೆಯುತ್ತಿವೆ ಎಂಬ ಕಾರಣಕ್ಕೆ ಅಡ್ಮಿನ್ ನಂಜುಂಡಸ್ವಾಮಿಗೆ ಪೆÇಲೀಸರು ನೋಟಿಸ್ ನೀಡಿದ್ದಾರೆ. ಕೂಡಲೆ ಗ್ರೂಪ್ ಡಿಲೀಟ್ ಮಾಡುವಂತೆ ಸೂಚಿಸಿ ಮುಚ್ಚ ಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ….
ಮರಗೋಡಿನಲ್ಲಿ ಕಾಡುಗೂಬೆ ರಕ್ಷಣೆ
April 8, 2020ಮಡಿಕೇರಿ, ಏ.7- ಅಪರೂಪದಲ್ಲಿ ಅಪರೂಪ ಎನಿಸಿರುವ ಚುಕ್ಕೆ ಕಾಡು ಗೂಬೆ ಮರಿಯೊಂದನ್ನು ಮರಗೋಡುವಿನಲ್ಲಿ ರಕ್ಷಿಸಲಾಗಿದೆ. ತಾಯಿಯಿಂದ ಬೇರ್ಪಟ್ಟಿದ್ದ ಈ ಗೂಬೆ ಮರಿ ತೋಟದ ರಸ್ತೆ ಬದಿಯಲ್ಲಿ ಕುಳಿತಿತ್ತು. ಇದನ್ನು ಗಮನಿಸಿದ ಚಿತ್ರಕಲಾವಿದ ಐಮಂಡ ರೂಪೇಶ್ ನಾಣಯ್ಯ ತಕ್ಷಣವೇ ಮಡಿಕೇರಿ ಡಿಎಫ್‍ಒ ಪ್ರಭಾಕರನ್ ಅವರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ರೇಂಜರ್ ದೇವಯ್ಯ ಮತ್ತು ಸಿಬ್ಬಂದಿ ಗೂಬೆ ಮರಿಯನ್ನು ವಶಕ್ಕೆ ಪಡೆದರು. ಬಿಳಿ ಬಣ್ಣದ ಈ ಗೂಬೆ ನೋಡಲು ಅತ್ಯಾಕರ್ಷಕವಾಗಿದ್ದು, ಕಾಳಸಂತೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ…
ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಮಳೆಯ ಸಿಂಚನ
April 8, 2020ಗೋಣಿಕೊಪ್ಪ, ಏ.7- ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಸೋಮ ವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ಪ್ರಥಮ ಮಳೆಯ ಸಿಂಚನವಾಗಿದೆ ಮಂಗಳವಾರ ಮುಂಜಾನೆವರೆಗೆ ಜಿಲ್ಲೆಯ ಶೇ. 75 ಭಾಗಗಳಲ್ಲಿ ಮಳೆಯಾ ಗಿದೆ. 5 ಸೆಂಟ್‍ಗಳಿಂದ 1.7 ಇಂಚು ಬಾಳೆಲೆ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಏಪ್ರಿಲ್ 9 ರವರೆಗೂ ಮಳೆ ಮುಂದುವ ರಿಯಲಿದ್ದು, ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಗೋಣಿಕೊಪ್ಪ ಕೃಷಿ ಹವಾಮಾನ ಘಟಕ ಪ್ರಕಟಣೆ ತಿಳಿಸಿದೆ. ಮಳೆ ವಿವರ (ಸೆಂಟ್‍ಗಳಲ್ಲಿ): ಗೋಣಿಕೊಪ್ಪ 25, ಬಿ. ಶೆಟ್ಟಿಗೇರಿ…
ಮಡಿಕೇರಿ, ಗೋಣಿಕೊಪ್ಪದಲ್ಲಿ ಹುಲಿ ದಾಳಿ; ಜಾನುವಾರು ಬಲಿ
April 8, 2020ಮಡಿಕೇರಿ, ಏ.7- ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ನಡೆಸಿದ್ದು, ಹರಿಹರ ಗ್ರಾಮದಲ್ಲಿ ರೈತರೋರ್ವರ ಜಾನು ವಾರು ಬಲಿಯಾಗಿದೆ. ಗ್ರಾಮದ ತೀತಿರ ರಮೇಶ್ ಮುದ್ದಯ್ಯ ಅವರಿಗೆ ಸೇರಿದ ಜಾನುವಾರು ಮೇಲೆ ಸೋಮವಾರ ರಾತ್ರಿ 11.30ಕ್ಕೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಹುಲಿ ದಾಳಿ ನಡೆಸಿದ್ದ ಸದ್ದಿಗೆ ಮನೆಯವರ ಎಚ್ಚರ ಗೊಂಡು ಹೊರಬಂದು ನೋಡಿದಾಗ ಎತ್ತನ್ನು ಸಾಯಿಸಿ, ಹುಲಿ ಪರಾರಿಯಾಗಿದೆ. ಮಂಗಳವಾರ ಮುಂಜಾನೆ ವೇಳೆ ಮತ್ತೆ ಬಂದ ಹುಲಿ ಎತ್ತನ್ನು ಎಳೆದೊಯ್ದು ಸ್ವಲ್ಪ ಭಾಗವನ್ನು ತಿಂದಿದೆ. ಮಾರ್ಚ್…
ವಿರಾಜಪೇಟೆಯ ಸಾರಿಗೆ ಬಸ್ ನಿಲ್ದಾಣದಲ್ಲಿ ದಿನಬಳಕೆ ವಸ್ತು ಮಾರಾಟಕ್ಕೆ ಅವಕಾಶ
April 8, 2020ವಿರಾಜಪೇಟೆ, ಏ.7- ವಿರಾಜಪೇಟೆ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಲಾಕ್‍ಡೌನ್ ಇರುವ ಹಿನ್ನಲೆಯಲ್ಲಿ ವಾರದಲ್ಲಿ ಮೂರು ದಿನ ಸೋಮವಾರ-ಬುಧವಾರ ಮತ್ತು ಶುಕ್ರವಾರ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದಲ್ಲಿ ವ್ಯಾಪಾರ ಮಾಡು ವಂತೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಮುಂಜಾಗೃತ ಕ್ರಮದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಶಾಸಕ ಬೋಪಯ್ಯ ಮಾತನಾಡಿ, ತೋಟದ ಮಾಲೀಕರು ಮತ್ತು ಗುತ್ತಿಗೆದಾರರು ಅಸ್ಸಾಂ ಮೂಲದ ಹಾಗೂ ಅಂತರರಾಜ್ಯದ ಕಾರ್ಮಿಕರನ್ನು ತೋಟ ಮತ್ತು ಇತರ ಕೆಲಸಗಳಿಗಾಗಿ ಅವರನ್ನು ಇಷ್ಟು ದಿನಗಳ…
ಕೊಡಗಿನ ಹಲವೆಡೆ ಬಿರುಗಾಳಿ ಮಳೆ
April 6, 2020ಮಡಿಕೇರಿ, ಏ.5- ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಧಾರಾಕಾರ ಮಳೆ ಸುರಿಯಿತು. ಗುಡುಗು, ಸಿಡಿಲ ಸಹಿತ ಭಾರಿ ಬಿರುಗಾಳಿಯೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಮಡಿಕೇರಿ, ಸೋಮವಾರಪೇಟೆ ವ್ಯಾಪ್ತಿ ಯಲ್ಲಿ ಉತ್ತಮ ಮಳೆಯಾಗಿದ್ದು, ಸುಡು ಬಿಸಿಲ ಬೇಗೆಗೆ ತಂಪೆರೆದಂತಾಯಿತು. ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿ ರುವ ಹಿನ್ನಲೆಯಲ್ಲಿ ದಿಢೀರನೆ ಸುರಿದ ಧಾರಾಕಾರ ಮಳೆಯಿಂದ ಜನರಿಗೆ ಸಮಸ್ಯೆಯಾಗಲಿಲ್ಲ. ಕರ್ತವ್ಯನಿರತ ಸಂಚಾರಿ ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳು ಮಳೆಯಿಂದ…
ಕೊರೊನಾ ವಿರುದ್ಧ ಕಾರ್ಯನಿರ್ವಹಿಸುವ ಪೊಲೀಸರು, ವೈದ್ಯರಿಗೆ ಅನ್ನ ದಾಸೋಹ
April 6, 2020ವಿರಾಜಪೇಟೆ, ಏ.5- ಕೊರೊನಾ ವೈರಸ್‍ನಿಂದಾಗಿ ಲಾಕ್ ಡೌನ್ ಆಗಿರುವುದರಿಂದ ವೀರಾಜಪೇಟೆ ಮೀನುಪೇಟೆಯ ಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯ ಸಮಿತಿ ಹಾಗೂ ಓಣಂ ಹಬ್ಬದ ಆಚರಣಾ ಸಮಿತಿ ವತಿಯಿಂದ ಹಗಲು ರಾತ್ರಿಯನ್ನದೆ ಕರ್ತವ್ಯದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಪಟ್ಟಣ ಪಂಚಾಯಿತಿ ನೌಕರರು ಮತ್ತು ಪೌರ ಕಾರ್ಮಿಕರುಗಳಿಗೆ, ತಾಲೂಕು ಕಚೇರಿ ಸಿಬ್ಬಂದಿಗಳಿಗೆ ಹಾಗೂ ಇತರ ಕಾರ್ಮಿಕರುಗಳಿಗೆ ಅನ್ನ ದಾಸೋಹ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಇ.ಸಿ.ಜೀವನ್ ಅಧ್ಯಕ್ಷತೆಯಲ್ಲಿ ನಡೆದ ಅನ್ನ ದಾಸೋಹ…
ಕೊಡಗಿನಿಂದ ನಿಜಾಮುದ್ದೀನ್ ಸಭೆಗೆ ತೆರಳಿದ್ದವರು 24 ಮಂದಿ
April 6, 2020ಮಡಿಕೇರಿ, ಏ.5- ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಪಾಲ್ಗೊಳ್ಳಲು ಜಿಲ್ಲೆಯಿಂದ ದೆಹಲಿಗೆ ಹೋದವರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಮತ್ತೆ 2 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಜಿಲ್ಲೆಯಿಂದ ದೆಹಲಿಗೆ ತೆರಳಿದವರು ನೀಡಿರುವ ಮಾಹಿತಿಯಂತೆ 5 ಜನರು ದೆಹಲಿಯಲ್ಲಿ ಕ್ವಾರಂಟೈನ್‍ನಲ್ಲಿ ಇರುತ್ತಾರೆ. ಇನ್ನೂ 5 ಜನರು ಹೊರ ಜಿಲ್ಲೆಗಳಲ್ಲಿ ವಾಸವಿದ್ದು, ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ. ಉಳಿದ ಎಲ್ಲಾ 14 ಜನರನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಶನ್ ವಾರ್ಡ್‍ನಲ್ಲಿ ಇರಿಸಲಾಗಿದ್ದು,…
ಗೋಣಿಕೊಪ್ಪದಲ್ಲಿ ರಸ್ತೆ ಬದಿ ವ್ಯಾಪಾರ ನಿಷೇಧ
April 6, 2020ಗೋಣಿಕೊಪ್ಪಲು, ಏ.5- ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲ ಉದ್ದೇಶದಿಂದ ಗೋಣಿಕೊಪ್ಪ ನಗರದ ರಸ್ತೆ ಬದಿಯ ವ್ಯಾಪಾರವನ್ನು ನಿಷೇಧಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ. ದೇಶದಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ವಾರದ ಮೂರು ದಿನಗಳಲ್ಲಿ ಆಹಾರ ಸಾಮಾಗ್ರಿ ಹಾಗೂ ತರಕಾರಿಗಳನ್ನು ಖರೀದಿಸಲು ನಾಗರಿಕರು ಹೆಚ್ಚಾಗಿ ನಗರಕ್ಕೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತಿದೆ. ಇದರಿಂದಾಗಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು. ಹೊರ ಜಿಲ್ಲೆ…
ಜಿಲ್ಲಾಡಳಿತದ ಕಂಟ್ರೋಲ್‍ನಲ್ಲಿ ಕೊರೊನಾ
April 3, 2020ಅಂತರರಾಜ್ಯ, ಅಂತರ ಜಿಲ್ಲೆ ಗಡಿ ಸಂಪೂರ್ಣ ಬಂದ್ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮೆಚ್ಚುಗೆ ಮಡಿಕೇರಿ, ಏ.2- ಕೊಡಗು ಜಿಲ್ಲೆ ಲಾಕ್‍ಡೌನ್ ಆಗಿ 10 ದಿನ ಕಳೆದಿದ್ದು, ಕೊರೊನಾ ಮಹಾಮಾರಿಯ ವಿರುದ್ಧ ಸಾರಿರುವ ಸಾಮೂಹಿಕ ಸಮರಕ್ಕೆ ಪುಟ್ಟ ಜಿಲ್ಲೆ ಕೊಡಗು ಸಂಪೂರ್ಣ ಬೆಂಬಲ ನೀಡುವ ಮೂಲಕ ಸ್ತಬ್ಧವಾಗಿದೆ. ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ಹಾಲು, ಪತ್ರಿಕೆಗಳನ್ನು ಕೊಳ್ಳಲು ಜನರಿಗೆ ಅವಕಾಶ ನೀಡಲಾಗಿದ್ದು, ಇದನ್ನು ಹೊರತು ಪಡಿಸಿದರೆ ಜನರು ರಸ್ತೆಗೆ ಇಳಿಯದೇ ಸರಕಾರ ಮತ್ತು ಜಿಲ್ಲಾಡಳಿತದ ಆದೇಶಗ ಳನ್ನು…