ವಿರಾಜಪೇಟೆಯ ಸಾರಿಗೆ ಬಸ್ ನಿಲ್ದಾಣದಲ್ಲಿ ದಿನಬಳಕೆ ವಸ್ತು ಮಾರಾಟಕ್ಕೆ ಅವಕಾಶ
ಕೊಡಗು

ವಿರಾಜಪೇಟೆಯ ಸಾರಿಗೆ ಬಸ್ ನಿಲ್ದಾಣದಲ್ಲಿ ದಿನಬಳಕೆ ವಸ್ತು ಮಾರಾಟಕ್ಕೆ ಅವಕಾಶ

April 8, 2020

ವಿರಾಜಪೇಟೆ, ಏ.7- ವಿರಾಜಪೇಟೆ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಲಾಕ್‍ಡೌನ್ ಇರುವ ಹಿನ್ನಲೆಯಲ್ಲಿ ವಾರದಲ್ಲಿ ಮೂರು ದಿನ ಸೋಮವಾರ-ಬುಧವಾರ ಮತ್ತು ಶುಕ್ರವಾರ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದಲ್ಲಿ ವ್ಯಾಪಾರ ಮಾಡು ವಂತೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಮುಂಜಾಗೃತ ಕ್ರಮದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಶಾಸಕ ಬೋಪಯ್ಯ ಮಾತನಾಡಿ, ತೋಟದ ಮಾಲೀಕರು ಮತ್ತು ಗುತ್ತಿಗೆದಾರರು ಅಸ್ಸಾಂ ಮೂಲದ ಹಾಗೂ ಅಂತರರಾಜ್ಯದ ಕಾರ್ಮಿಕರನ್ನು ತೋಟ ಮತ್ತು ಇತರ ಕೆಲಸಗಳಿಗಾಗಿ ಅವರನ್ನು ಇಷ್ಟು ದಿನಗಳ ಕಾಲ ಬಳಸಿಕೊಂಡು ಈಗ ಕೋವಿಡ್-19 ಹಿನ್ನಲೆಯಲ್ಲಿ ಕಾರ್ಮಿಕರ ಯೋಗಕ್ಷೇಮವನ್ನು ನೋಡದೆ ಅವರನ್ನು ಬೀದಿಯಲ್ಲಿ ಬಿಟ್ಟಿರುವುದು ಸರಿಯಲ್ಲ ಎಂದು ದೂರಿದರಲ್ಲದೆ. ದೇಶಾದ್ಯಂತ ಎಲ್ಲವನ್ನು ಸರಕಾರವೇ ನೋಡುತ್ತಿರುವಾಗ ಜನರು ಕೂಡ ಸಹಕಾರ ನೀಡುವಂ ತಾಗಬೇಕು ಎಂದರು. ಇನ್ನು ಮಾಂಸ ಪ್ರಿಯರಿಗೆ ಜೀವದ ಕೋಳಿಯನ್ನು ಮಾತ್ರ ಮಾರಾಟ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಮಾತನಾಡಿ, ಎಲ್ಲಾ ಜನರಿಗೆ ಮಾಸ್ಕ್‍ಗಳ ಅವಶ್ಯವಿದ್ದು ಕೂಡಲೇ ತರಿಸಿ ಕೊಡುವಂತೆ ತಿಳಿಸಿದಾಗ ಅದನ್ನು ಕೊಂಡುಕೊಳ್ಳುವಂತೆ ಶಾಸಕರು ಹೇಳಿದರು. ಸಭೆಯಲ್ಲಿ ತಾಲೂಕು ತಹಶಿಲ್ದಾರ್ ಎಲ್.ಎಂ.ನಂದೀಶ್, ಪ.ಪಂ.ಮುಖ್ಯಧಿಕಾರಿ ಎ.ಎಂ. ಶ್ರೀಧರ್, ಡಿವೈಎಸ್‍ಪಿ ಜಯ ಕುಮಾರ್, ಕಾರ್ಯನಿರ್ವಹ ಣಾಧಿಕಾರಿ ಷಣ್ಮುಗ, ತಾಲೂಕು ವೈದ್ಯಧಿಕಾರಿ ಯತಿರಾಜ್, ನೋಡಲ್ ಅಧಿಕಾರಿಗಳಾದ ಡಾ,ತಮ್ಮಯ್ಯ, ನಂಜುಂಡೇ ಗೌಡ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Translate »