ಸಂಕಷ್ಟದಲ್ಲಿರುವವರಿಗೆ ಸಮರ್ಪಕ ಮೂಲ ಸೌಕರ್ಯಕ್ಕೆ `ನೆರವು ಕೇಂದ್ರ’ ಅನಿವಾರ್ಯ
ಮೈಸೂರು

ಸಂಕಷ್ಟದಲ್ಲಿರುವವರಿಗೆ ಸಮರ್ಪಕ ಮೂಲ ಸೌಕರ್ಯಕ್ಕೆ `ನೆರವು ಕೇಂದ್ರ’ ಅನಿವಾರ್ಯ

April 7, 2020

ಮೈಸೂರು,ಏ.6(ಎಸ್‍ಬಿಡಿ)-ಲಾಕ್‍ಡೌನ್ ಪರಿಣಾಮ ಸಂಕಷ್ಟದಲ್ಲಿರುವ ಬಡವರಿಗೆ ಸಮರ್ಪಕ ರೀತಿ ಮೂಲ ಸೌಕರ್ಯ ಕಲ್ಪಿ ಸುವ ನಿಟ್ಟಿನಲ್ಲಿ ನೆರವು ಸಂಗ್ರಹ ಕೇಂದ್ರ ತೆರಯಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕಳೆದ ವರ್ಷ ಕೊಡಗು ಹಾಗೂ ನೆರೆ ರಾಜ್ಯ ಕೇರಳದಲ್ಲಿ ನೆರೆ ಸಂಭವಿಸಿದಾಗ ಅಲ್ಲಿನ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಸುವ ಉದ್ದೇಶದಿಂದ ಮೈಸೂರು ಜಿಲ್ಲಾಡಳಿತ ನೆರವು ಸಂಗ್ರಹ ಕೇಂದ್ರ ತೆರೆದಿತ್ತು. ದಾನಿಗಳು ವೈಯಕ್ತಿಕವಾಗಿ ಸಂತ್ರಸ್ತರಿಗೆ ವಸ್ತುಗಳ ನೀಡು ವಾಗ ಗೋಜಲು ಉಂಟಾಗುತ್ತಿದ್ದ ಕಾರಣಕ್ಕೆ ಈ ಕ್ರಮ ವಹಿಸಲಾಗಿತ್ತು. ಪುರಭವನದಲ್ಲಿ ತೆರೆಯಲಾಗಿದ್ದ ಕೇಂದ್ರಕ್ಕೆ ಜನ ಅಗತ್ಯ ವಸ್ತು ಗಳ ನೀಡಿದ್ದರು. ನೆರವು ನೀಡಿದ ವ್ಯಕ್ತಿ, ಸಂಸ್ಥೆಯ ಹೆಸರು ಹಾಗೂ ವಸ್ತುಗಳ ಮಾಹಿತಿ ಯನ್ನು ದಾಖಲು ಮಾಡಿಕೊಂಡು ಸಂಗ್ರಹ ವಾದ ವಸ್ತುಗಳನ್ನು ವ್ಯವಸ್ಥಿತವಾಗಿ ಸಂತ್ರ ಸ್ತರಿಗೆ ತಲುಪಿಸಲಾಗುತ್ತಿತ್ತು. ಸದ್ಯ ಕೊರೊನಾ ಸೃಷ್ಟಿಸಿರುವ ಕರಾಳ ಸನ್ನಿವೇಶ ದಲ್ಲೂ ಈ ವ್ಯವಸ್ಥೆ ಆಗಬೇಕಿದೆ.

ಈಗಾಗಲೇ 15 ದಿನಗಳಿಂದ ಲಾಕ್ ಡೌನ್ ಅನುಭವಿಸಿರುವ ಜನರಲ್ಲಿ ಭವಿಷ್ಯದ ಚಿಂತೆ ಕಾಡ ತೊಡಗಿದೆ. ಅದರಲ್ಲೂ ಕೂಲಿ, ಮನೆಗೆಲಸ, ಸಣ್ಣ ಪುಟ್ಟ ವ್ಯಾಪಾರ ಹೀಗೆ ದಿನದ ದುಡಿಮೆಯನ್ನೇ ನೆಚ್ಚಿರುವ ಬಡವ ರಲ್ಲಿ ಆತಂಕ ಹೆಚ್ಚಿದೆ. ಪಡಿತರ, ಹಾಲು ವಿತರಣೆ, ಸಾಲ ಮರುಪಾವತಿಗೆ ಸಮಯ ವಿನಾಯ್ತಿ ಸೇರಿದಂತೆ ಒಂದಷ್ಟು ಕ್ರಮಗಳ ಮೂಲಕ ಸರ್ಕಾರ ಜನರ ಮನೋಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡಿದೆ.

ಮೈಸೂರಿನಲ್ಲಿ ಊಟ, ವಸತಿ ವ್ಯವಸ್ಥೆ ಯಿರುವ ಮೂರು ನಿರಾಶ್ರಿತರ ಕೇಂದ್ರದ ಜೊತೆಗೆ 9 ವಲಯ ವ್ಯಾಪ್ತಿಯಲ್ಲೂ ಆಹಾರ ಕಲ್ಪಿಸುವ ಸಾಂತ್ವನ ಕೇಂದ್ರ ಆರಂಭಿಸಿ ರುವ ನಗರಪಾಲಿಕೆ, ದಾನಿಗಳ ಸಹಕಾರ ದೊಂದಿಗೆ ಅವುಗಳ ನಿರ್ವಹಣೆ ಮಾಡು ತ್ತಿದೆ. ಇದಲ್ಲದೆ ಹಲವು ಸಂಘ-ಸಂಸ್ಥೆಗಳು, ಸಂಘಟನೆಗಳು, ಎನ್‍ಜಿಓಗಳು, ರಾಜ ಕೀಯ ಮುಖಂಡರು, ಉದ್ಯಮಿಗಳು ಸೇರಿ ದಂತೆ ಅಪಾರ ಸಹೃದಯರು ನೊಂದವರ ನೆರವಿಗೆ ನಿಂತಿದ್ದಾರೆ. ಸ್ಲಂಗಳು ಸೇರಿದಂತೆ ಅಲ್ಲಲ್ಲಿ ಕಾಣಿಸುವ ನಿರಾಶ್ರಿತರಿಗೆ ನಿತ್ಯ ಸಿದ್ಧ ಆಹಾರ ನೀಡಿ, ಹಸಿವು ನೀಗಿಸುವ ಸತ್ಕಾರ್ಯ ಮಾಡುತ್ತಿದ್ದಾರೆ. ಹಲವೆಡೆ ದಿನಸಿ ಪದಾರ್ಥ ಗಳ ಕಿಟ್ ವಿತರಿಸಲಾಗುತ್ತಿದೆ. ಆದರೆ ಎಲ್ಲಾ ಬಡವರಿಗೂ ಈ ಸೇವೆ ಲಭ್ಯವಾಗುತ್ತಿಲ್ಲ. ಹತ್ತಿರದ ಪ್ರದೇಶದಲ್ಲಿರುವ ಜನರಿಗೆ ಮಾತ್ರ ಆಹಾರ ಹಾಗೂ ದಿನಸಿ ವಸ್ತುಗಳ ನೀಡ ಲಾಗುತ್ತಿದೆ. ಒಂದೇ ಪ್ರದೇಶದ ನಿವಾಸಿ ಗಳಿಗೆ ಪದೇ ಪದೆ ವಿತರಿಸುತ್ತಾರೆಂಬ ಮಾತುಗಳೂ ಕೇಳಿಬರುತ್ತಿವೆ. ಹಾಗಾಗಿ ಬಹಳಷ್ಟು ಬಡವರು ಸೌಕರ್ಯದಿಂದ ವಂಚಿತ ರಾಗುತ್ತಿದ್ದಾರೆ. ಅಲ್ಲದೆ ಹಂಚಿಕೆ ಮಾಡು ವಾಗ ಜನ ಮುಗಿ ಬೀಳುವುದರಿಂದ ಸಾಮಾ ಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವೇ ಇಲ್ಲ ಎಂಬಂತಾಗಿದೆ. ಹಾಗಾಗಿ ಈ ಸೇವಾಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುವುದು ಅನಿವಾರ್ಯವಾಗಿದೆ.

ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಏ.14ಕ್ಕೆ ಲಾಕ್ ಡೌನ್ ತೆರವುಗೊಳಿಸುವ ಸಾಧ್ಯತೆ ಕಡಿಮೆ. ಇದೇ ಪರಿಸ್ಥಿತಿ ಮುಂದುವರೆದರೆ ಮತ್ತಷ್ಟು ದಿನಗಳ ಕಾಲ ಎಲ್ಲರೂ ಮನೆಯಲ್ಲೇ ಇರ ಬೇಕು. ದುಡಿಮೆಯೂ ಇರುವುದಿಲ್ಲ. ಎಲ್ಲರೂ ಒಂದೇ ಸಮಯದಲ್ಲಿ ಆಹಾರ, ದಿನಸಿ ಹಂಚಿದರೆ ಮುಂದಿನ ದಿನಗಳಲ್ಲಿ ಕಷ್ಟವಾಗ ಬಹುದು. ಆಹಾರದ ಜೊತೆಗೆ ಮಹಿಳೆ ಯರು, ಮಕ್ಕಳು, ವೃದ್ಧರಿಗೆ ಅತ್ಯಗತ್ಯವಾದ ಕೆಲ ವಸ್ತುಗಳನ್ನೂ ನೀಡಬೇಕಾಗಬಹುದು. ಪ್ರಾಣಿಗಳಿಗೂ ಆಹಾರ ನೀಡಬೇಕಾದ ಸ್ಥಿತಿಯೂ ಎದುರಾಗಬಹುದು. ಈ ಬಗ್ಗೆ ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಬೇಕು.

ನೆರವಿಗಾಗಿ ಹಣ ನೀಡುವವರು ಸಿಎಂ ಹಾಗೂ ಪಿಎಂ ರಿಲೀಫ್ ಫಂಡ್‍ಗೆ ಮಾತ್ರ ಸಂದಾಯ ಮಾಡಬೇಕು. ಹಣ ಸಂಗ್ರಹಿ ಸಲು ಜಿಲ್ಲಾಡಳಿತಕ್ಕೆ ಅವಕಾಶವಿಲ್ಲ. ಅಕ್ಕಿ, ಗೋಧಿ, ಬೇಳೆ, ಅಡುಗೆ ಎಣ್ಣೆ ಇನ್ನಿತರ ಡ್ರೈ ರೇಷನ್ ನೀಡುವ ದಾನಿಗಳು ಅವು ಗಳನ್ನು ನಗರಪಾಲಿಕೆಗೆ, ಮಾಸ್ಕ್, ಸ್ಯಾನಿ ಟೈಸರ್ ಇನ್ನಿತರ ವೈದ್ಯಕೀಯ ವಸ್ತುಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿಗೆ ಹಸ್ತಾಂತರಿ ಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹಲವು ಬಾರಿ ಮನವಿ ಮಾಡಿದ್ದಾರೆ.

ಆಹಾರ ಹಂಚುವಾಗಲೂ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೆ ಗೊಂದಲ ವಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ. ಆದರೆ ಇದನ್ನು ಯಾರೂ ಪಾಲಿಸಿದಂತೆ ಕಾಣುತ್ತಿಲ್ಲ. ಸಿಕ್ಕ ಸಿಕ್ಕಲ್ಲಿ ಆಹಾರದ ಪೆÇಟ್ಟಣ ನೀಡುವುದು, ಯಾವುದೋ ಒಂದು ಪ್ರದೇಶದ ನಿವಾಸಿಗಳಿಗೆ ಪದೇ ಪದೆ ವಸ್ತುಗಳ ವಿತರಿಸುತ್ತಿದ್ದಾರೆ. ಜಿಲ್ಲಾ ಡಳಿತ ಈ ಬಗ್ಗೆ ಪರಿಶೀಲಿಸುವುದರ ಜೊತೆಗೆ ಲಾಕ್‍ಡೌನ್ ಸಂತ್ರಸ್ತರ ನೆರವು ಕೇಂದ್ರ ಆರಂಭಿಸಿ, ದಾನಿಗಳು ನೀಡುವ ವಸ್ತುಗಳನ್ನು ಸಂಗ್ರಹಿಸಿ, ಸಮರ್ಪಕ ರೀತಿಯಲ್ಲಿ ಫಲಾನುಭವಿಗಳಿಗೆ ತಲುಪಿ ಸಬೇಕು. ಸಾಮಾನ್ಯವಾಗಿ ರಾಜಕೀಯ ಮುಖಂಡರು ತಮ್ಮ ವ್ಯಾಪ್ತಿಯ ಬಡವ ರಿಗೆ ನೆರವಾಗುತ್ತಾರೆ. ಅದಕ್ಕೂ ಅವಕಾಶ ವಾಗುವಂತೆ ಕ್ರಮ ಕೈಗೊಳ್ಳಬೇಕು. ಸಾಧ್ಯವಾದರೆ ವಲಯ ಅಥವಾ ವಾರ್ಡ್ ವ್ಯಾಪ್ತಿಯಲ್ಲಿ ನೆರವು ನಿರ್ವ ಹಣಾ ಕೇಂದ್ರ ತೆರೆದು, ದಾನಿಗಳಿಂದಲೇ ವಿತರಣೆಗೆ ವ್ಯವಸ್ಥೆ ಮಾಡಿಕೊಡಬೇಕು. ಹೀಗಾದರೆ ಕಷ್ಟದಲ್ಲಿರುವ ಎಲ್ಲರಿಗೂ ನೆರವಾಗಲು ಸಾಧ್ಯ. ಒಂದೆರಡು ತಿಂಗಳಿಗೆ ಅಗತ್ಯ ವಾದಷ್ಟು ವಸ್ತುಗಳ ಒದಗಿಸಬಹುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವು ದಕ್ಕೂ ನೆರವಾಗುತ್ತದೆ ಎಂಬುದು ಪ್ರಜ್ಞಾ ವಂತರ ಆಗ್ರಹವಾಗಿದೆ.

Translate »