ಸಾಮರಸ್ಯಕ್ಕೆ ಧಕ್ಕೆ ವಿಡಿಯೋ ಅಪ್‍ಲೋಡ್ ವಾಟ್ಸ್‍ಆಪ್ ಗ್ರೂಪ್ ಅಡ್ಮಿನ್‍ಗೆ ಪೊಲೀಸ್ ನೋಟಿಸ್
ಕೊಡಗು

ಸಾಮರಸ್ಯಕ್ಕೆ ಧಕ್ಕೆ ವಿಡಿಯೋ ಅಪ್‍ಲೋಡ್ ವಾಟ್ಸ್‍ಆಪ್ ಗ್ರೂಪ್ ಅಡ್ಮಿನ್‍ಗೆ ಪೊಲೀಸ್ ನೋಟಿಸ್

April 8, 2020

ಮುಚ್ಚಳಿಕೆ ಬರೆಸಿಕೊಂಡು ಗ್ರೂಪ್ ಡಿಲೀಟ್‍ಗೆ ಸೂಚನೆ
ಕುಶಾಲನಗರ, ಏ.7- ವಾಟ್ಸಾಪ್ ಗ್ರೂಪ್‍ನಲ್ಲಿ ಧಾರ್ಮಿಕ ಸಾಮರಸ್ಯ ಕದಡುವ ರೀತಿಯ ವೀಡಿಯೊ ಹರಿ ಬಿಟ್ಟ ಕಾರಣ ಗ್ರೂಪ್ ಅಡ್ಮಿನ್‍ಗೆ ಪೆÇಲೀಸರು ವಾರ್ನಿಂಗ್ ನೀಡಿದ್ದಾರೆ.

ಕುಶಾಲನಗರ ಹಿತರಕ್ಷಣಾ ವೇದಿಕೆ ಎಂಬ ಗ್ರೂಪ್‍ನಲ್ಲಿ ಧಾರ್ಮಿಕ ಸಾಮ ರಸ್ಯ ಕದಡುವ ವಿಡೀಯೊ ಶೇರ್ ಮಾಡಲಾಗಿದೆ. ಈ ಸಂಬಂಧ ಚರ್ಚೆ ಗಳು ನಡೆಯುತ್ತಿವೆ ಎಂಬ ಕಾರಣಕ್ಕೆ ಅಡ್ಮಿನ್ ನಂಜುಂಡಸ್ವಾಮಿಗೆ ಪೆÇಲೀಸರು ನೋಟಿಸ್ ನೀಡಿದ್ದಾರೆ. ಕೂಡಲೆ ಗ್ರೂಪ್ ಡಿಲೀಟ್ ಮಾಡುವಂತೆ ಸೂಚಿಸಿ ಮುಚ್ಚ ಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಡ್ಮಿನ್ ನಂಜುಂಡಸ್ವಾಮಿ, ಇತ್ತೀಚೆಗೆ ಮೇಲೆ ಉಲ್ಲೇಖಿಸಿದ ಗ್ರೂಪ್‍ನಿಂದ ದೂರ ಉಳಿದಿದ್ದೆ. ಗ್ರೂಪಿನಲ್ಲಿ ಸರ್ವಧರ್ಮ, ಪಕ್ಷಗಳ ಪ್ರಮುಖರಿದ್ದು ಕೆಲವು ದಿನ ಗಳಿಂದ ಕೆಲವು ಪಕ್ಷಗಳು ಪರ ವಿರೋಧ ವಿಷಯಗಳ ಬಗ್ಗೆ ಪರಸ್ಪರ ಕೆಸರೆ ರಚಾಟ ನಡೆಸಿದ ಕಾರಣ ಗ್ರೂಪ್ ಸದಸ್ಯರ ಬೇಜವಾಬ್ದಾರಿಕೆಗೆ ನನ್ನ ತಲೆತಂಡ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Translate »