ಮರಗೋಡಿನಲ್ಲಿ ಕಾಡುಗೂಬೆ ರಕ್ಷಣೆ
ಕೊಡಗು

ಮರಗೋಡಿನಲ್ಲಿ ಕಾಡುಗೂಬೆ ರಕ್ಷಣೆ

April 8, 2020

ಮಡಿಕೇರಿ, ಏ.7- ಅಪರೂಪದಲ್ಲಿ ಅಪರೂಪ ಎನಿಸಿರುವ ಚುಕ್ಕೆ ಕಾಡು ಗೂಬೆ ಮರಿಯೊಂದನ್ನು ಮರಗೋಡುವಿನಲ್ಲಿ ರಕ್ಷಿಸಲಾಗಿದೆ. ತಾಯಿಯಿಂದ ಬೇರ್ಪಟ್ಟಿದ್ದ ಈ ಗೂಬೆ ಮರಿ ತೋಟದ ರಸ್ತೆ ಬದಿಯಲ್ಲಿ ಕುಳಿತಿತ್ತು. ಇದನ್ನು ಗಮನಿಸಿದ ಚಿತ್ರಕಲಾವಿದ ಐಮಂಡ ರೂಪೇಶ್ ನಾಣಯ್ಯ ತಕ್ಷಣವೇ ಮಡಿಕೇರಿ ಡಿಎಫ್‍ಒ ಪ್ರಭಾಕರನ್ ಅವರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ರೇಂಜರ್ ದೇವಯ್ಯ ಮತ್ತು ಸಿಬ್ಬಂದಿ ಗೂಬೆ ಮರಿಯನ್ನು ವಶಕ್ಕೆ ಪಡೆದರು. ಬಿಳಿ ಬಣ್ಣದ ಈ ಗೂಬೆ ನೋಡಲು ಅತ್ಯಾಕರ್ಷಕವಾಗಿದ್ದು, ಕಾಳಸಂತೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ ಎನ್ನಲಾಗಿದೆ. ಗೂಬೆ ಮರಿ ಆರೋಗ್ಯವಾಗಿದ್ದು ಕೆಲ ದಿನಗಳ ಕಾಲ ನಿಗಾವಹಿಸಿ ಬಳಿಕ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿ ದೇವಯ್ಯ ತಿಳಿಸಿದ್ದಾರೆ.

Translate »