ಕೊಡಗು

ನಕ್ಸಲ್ ಚಲನವಲನ: ಕೊಡಗು ಗಡಿಯಲ್ಲಿ ಕೂಂಬಿಂಗ್ ಚುರುಕು
ಕೊಡಗು

ನಕ್ಸಲ್ ಚಲನವಲನ: ಕೊಡಗು ಗಡಿಯಲ್ಲಿ ಕೂಂಬಿಂಗ್ ಚುರುಕು

March 10, 2019

ಮಡಿಕೇರಿ: ಕೇರಳದ ವಯನಾಡು, ಚಾಮರಾಜನಗರ ಗಡಿ ಸೇರಿದಂತೆ ಕೊಡಗು-ಕೇರಳ ಗಡಿಗಳಿಗೆ ಹೊಂದಿಕೊಂಡಂತಿರುವ ದಟ್ಟ ಅರಣ್ಯಗಳಲ್ಲಿ ನಕ್ಸಲರ ಚಲನ ವಲನ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಕೇರಳದ ವಯನಾಡಿನ ಅರಣ್ಯದಲ್ಲಿ ಶಂಕಿತ ನಕ್ಸಲರು ಮತ್ತು ಕೇರಳ ನಕ್ಸಲ್ ನಿಗ್ರಹ ದಳದ ಥಂಡರ್ ಬೋಲ್ಟ್ ಕಮಾಂಡೊಗಳ ನಡುವೆ ಪರಸ್ಪರ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗುತ್ತಿದೆ. ಗುಂಡಿನ ಚಕಮಕಿಯ ಬಳಿಕ ನಕ್ಸಲರು ತಪ್ಪಿಸಿಕೊಂಡಿದ್ದು, ಕೊಡಗು ಜಿಲ್ಲೆಯ ಕಡೆ ನುಸುಳುವ ಸಾಧ್ಯತೆ ಇದೆ ಎಂದು…

ಕಾರು ಮರಕ್ಕೆ ಡಿಕ್ಕಿ: ಚಾಲಕ ಸಾವು
ಕೊಡಗು

ಕಾರು ಮರಕ್ಕೆ ಡಿಕ್ಕಿ: ಚಾಲಕ ಸಾವು

March 10, 2019

ಗೋಣಿಕೊಪ್ಪಲು: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವನವಾಸಿ ಕಲ್ಯಾಣ ಕೊಡಗು ಘಟಕದ ಅಧ್ಯಕ್ಷ ಸಿದ್ದ (55) ಮೃತಪಟ್ಟಿದ್ದಾರೆ. ತಿತಿಮತಿ ರೇಷ್ಮೆ ಹಡ್ಲು ಹಾಡಿ ನಿವಾಸಿಯಾಗಿದ್ದ ಇವರು, ಶನಿವಾರ ಬೆಳಗ್ಗೆ ತಿತಿಮತಿ-ಮೈಸೂರು ರಸ್ತೆಯ ಆನೆಚೌಕೂರು ಎಂಬಲ್ಲಿ ಕಾರು ಅಪ ಘಾತದಲ್ಲಿ ಗಾಯಗೊಂಡಿದ್ದರು. ಇವರು ಪ್ರಯಾ ಣಿಸುತ್ತಿದ್ದ ಮಾರುತಿ ಓಮ್ನಿ ಕಾರು ಮರಕ್ಕೆ ಡಿಕ್ಕಿ ಹೊಡೆದಿತ್ತು. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಸಾವನಪ್ಪಿದ್ದಾರೆ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಡೆಕುತ್ತಿ ಬಳಿ ಆನೆ ದಾಳಿ: ವಾಹನ ಜಖಂ, ಚಾಲಕನಿಗೆ ಗಾಯ
ಕೊಡಗು

ಬೆಂಡೆಕುತ್ತಿ ಬಳಿ ಆನೆ ದಾಳಿ: ವಾಹನ ಜಖಂ, ಚಾಲಕನಿಗೆ ಗಾಯ

March 10, 2019

ಗೋಣಿಕೊಪ್ಪಲು: ಕಾಡಾನೆ ದಾಳಿಯಿಂದ ವಾಹನ ಜಖಂಗೊಂಡಿರುವ ಘಟನೆ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ವಾಹನ ಚಲಾಯಿಸುತ್ತಿದ್ದ ನಿಟ್ಟೂರು ಗ್ರಾಮದ ಮಹೇಶ್ (28) ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರ ಬೆಳಿಗ್ಗೆ 8 ಗಂಟೆ ವೇಳೆ ಕಾರ್ಮಿಕರನ್ನು ಕರೆದುಕೊಂಡು ಬರಲು ಮಾರುತಿ ವ್ಯಾನ್ ನಲ್ಲಿ ತಟ್ಟೆಕೆರೆಗೆ ತೆರಳುತ್ತಿದ್ದ ಸಂದರ್ಭ ಬೆಂಡೆಕುತ್ತಿ ಎಂಬಲ್ಲಿ ಕಿರಿದಾದ ರಸ್ತೆಯಲ್ಲಿ ತೋಟದಿಂದ ಬಂದ ಕಾಡಾನೆ ವಾಹನದ ಮೇಲೆ ದಿಢೀರ್ ದಾಳಿ ನಡೆಸಿದೆ. ಕೋರೆಯಲ್ಲಿ ಚುಚ್ಚಿದ ಪರಿಣಾಮ ವಾಹನದ ಮುಂಭಾಗ ಜಖಂಗೊಂಡಿದೆ. ಮಹೇಶ್ ಅವರ ಕಾಲು…

ಲೋಕಸಭಾ ಚುನಾವಣೆ ವ್ಯವಸ್ಥಿತ ನಿರ್ವಹಣೆಗೆ ನಿರ್ದೇಶನ
ಕೊಡಗು

ಲೋಕಸಭಾ ಚುನಾವಣೆ ವ್ಯವಸ್ಥಿತ ನಿರ್ವಹಣೆಗೆ ನಿರ್ದೇಶನ

March 9, 2019

ಮಡಿಕೇರಿ: ಲೋಕಸಭಾ ಚುನಾ ವಣೆ ದಿನಾಂಕ ಶೀಘ್ರವೇ ಪ್ರಕಟವಾಗ ಲಿದ್ದು, ಚುನಾವಣೆ ಸಂಬಂಧ ಈಗಾಗಲೇ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸ ಲಾಗಿದೆ. ಆ ದಿಸೆಯಲ್ಲಿ ನೋಡಲ್ ಅಧಿ ಕಾರಿಗಳು ತಮ್ಮ ತಮ್ಮ ಕಾರ್ಯವ್ಯಾಪ್ತಿ ತಿಳಿದು ಕರ್ತವ್ಯ ಪ್ರಜ್ಞೆಯಿಂದ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 543 ಮತಗಟ್ಟೆ ಕೇಂದ್ರಗಳಿದ್ದು, ಈ ಮತಗಟ್ಟೆ ಕೇಂದ್ರಗಳ ಸುಸ್ಥಿತಿ ಸಂಬಂ ಧಿಸಿದಂತೆ ಈಗಾಗಲೇ ಸೆಕ್ಟರ್…

ಬೊಳ್ಳುಮಾಡು ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ
ಕೊಡಗು

ಬೊಳ್ಳುಮಾಡು ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ

March 9, 2019

ವಿರಾಜಪೇಟೆ: ಗ್ರಾಮೀಣ ಭಾಗದ ಮಹಿಳೆ ಮತ್ತು ಮಕ್ಕಳಿಗೆ ಸರಕಾರ ನೀಡು ತ್ತಿರುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸುವಂತಾ ಗಬೇಕು ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ತಾಲೂಕಿನ ಬೆಳ್ಳುಮಾಡು ಗ್ರಾಮದಲ್ಲಿ ಶಿಶು ಕಲ್ಯಾಣ ಇಲಾಖೆ-ನಬಾರ್ಡ್ ಯೋಜನೆಯಿಂದ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಇತ್ತೀಚೆಗೆ ಸರಕಾರ ಮಹಿಳೆಯರಿಗಾಗಿ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿ ರುವುದರಿಂದ ಅದು ಸರಿಯಾದ ರೀತಿಯಲ್ಲಿ ಬಡ ಕೂಲಿ ಕಾರ್ಮಿಕರಿಗು ಹಾಗೂ ಇತರ ಮಹಿಳೆಯರಿಗೆ ದೊರಕುವಂತಾಗಬೇಕು. ಈ…

ಕುಶಾಲನಗರ ವ್ಯಾಪ್ತಿಯಲ್ಲಿ ಕುಲಶಾಸ್ತ್ರ ಅಧ್ಯಯನ ಆರಂಭ
ಕೊಡಗು

ಕುಶಾಲನಗರ ವ್ಯಾಪ್ತಿಯಲ್ಲಿ ಕುಲಶಾಸ್ತ್ರ ಅಧ್ಯಯನ ಆರಂಭ

March 7, 2019

ಕೊಡವರು ಸಮಗ್ರ ಮಾಹಿತಿ ನೀಡಿ ಸಹಕರಿಸಲು ಎನ್.ಯು.ನಾಚಪ್ಪ ಮನವಿ ಕುಶಾಲನಗರ: ತಾಲೂಕಿನಾ ದ್ಯಂತ ಆರಂಭಗೊಂಡಿರುವ ಕೊಡವರ ಮೂಲ ಕುಲಶಾಸ್ತ್ರ ಅಧ್ಯಯನಕ್ಕೆ ಕೊಡವ ಕುಟುಂಬಗಳು ಅಗತ್ಯ ಸಹಕಾರ ನೀಡ ಬೇಕು ಎಂದು ಸಿಎನ್‍ಸಿ ಮುಖ್ಯಸ್ಥ ಎನ್. ಯು.ನಾಚಪ್ಪ ಮನವಿ ಮಾಡಿದರು. ಪಟ್ಟಣದ ಕೊಡವ ಸಮಾಜದಲ್ಲಿ ಏರ್ಪ ಡಿಸಿದ್ದ ಕೊಡವ ಕುಲಶಾಸ್ತ್ರ ಅಧ್ಯಯನ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಅನೇಕ ವರ್ಷಗಳಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಸೇರ್ಪಡೆಗೊಳಿಸಬೇಕು. ಕೊಡವ…

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ಕೊಡಗು

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

March 7, 2019

ಮಡಿಕೇರಿ: ಕಾಫಿ ತೋಟದಲ್ಲಿ ಮರದ ಕೊಂಬೆ ಕಡಿಯುವ ಸಂದರ್ಭ ವಿದ್ಯುತ್ ತಂತಿ ತಗುಲಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. 7ನೇ ಹೊಸಕೋಟೆಯ ಮಾರುತಿ ನಗರದ ಕಾಫಿ ತೋಟವೊಂದರ ಲೈನ್ ಮನೆಯಲ್ಲಿ ವಾಸವಾಗಿದ್ದ ಹೇಮಂತ್(23) ಮೃತಪಟ್ಟವನು. ಘಟನೆ ವಿವಿರ: ಮೂಲತಃ ತಮಿಳುನಾಡು ಮೂಲದ ಹೇಮಂತ್ 7ನೇ ಹೊಸಕೋಟೆಯ ಮಾರುತಿ ನಗರದ ಕಾಫಿ ತೋಟವೊಂದರಲ್ಲಿ ತನ್ನ ತಾಯಿ ಯೊಂದಿಗೆ ವಾಸವಾಗಿದ್ದ. ಇಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಸ್ಪ್ರಿಂಕ್ಲರ್ ಮಾಡುವ ಸಲುವಾಗಿ…

ನೀರು ಕುಡಿಯಲು ಕೆರೆಗಿಳಿದ ಆನೆಗಳ ಪೀಕಲಾಟ
ಕೊಡಗು

ನೀರು ಕುಡಿಯಲು ಕೆರೆಗಿಳಿದ ಆನೆಗಳ ಪೀಕಲಾಟ

March 7, 2019

ನಾಪೋಕ್ಲು: ನೀರು ಕುಡಿಯಲೆಂದು ಬಂದ ಕಾಡಾನೆಗಳು ಕೆರೆಗೆ ಬಿದ್ದು ಮೇಲೇಳಲು ಆಗದೆ ಪರದಾ ಡಿದ ಘಟನೆ ಸಮೀಪದ ಚೆಯ್ಯಂಡಾಣೆ ಬಳಿಯ ಚೇಲಾ ವರ ಗ್ರಾಮದಲ್ಲಿ ನಡೆದಿದೆ. ಚೇಲಾವರ ಗ್ರಾಮದ ನಿವಾಸಿ ಪಟ್ಟಚೆರವಂಡ ವಾಸು ಸುಬ್ಬಯ್ಯ ತಮ್ಮ ಕಾಫಿ ತೋಟದ ನಡುವೆ ಕೃಷಿಗಾಗಿ ಕೆರೆಯನ್ನು ತೆಗೆದಿದ್ದರು. ಬುಧವಾರ ರಾತ್ರಿ ಮೂರು ಕಾಡಾನೆಗಳು ಕೆರೆಯಲ್ಲಿ ಬಿದ್ದು ಮೇಲೇಳ ಲಾಗದೆ ಪರದಾಡುತ್ತಿದ್ದು, ಗ್ರಾಮಸ್ಥರ ನೆರವಿನಿಂದ ಗುರು ವಾರ ತೆರಳಿದವು. ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬಂದಿರುವ ಸಾಧ್ಯತೆ ಇದ್ದು, ಅವುಗಳಲ್ಲಿ ಎರಡು…

ಮರದಿಂದ ಬಿದ್ದು ಕಾರ್ಮಿಕ ಸಾವು
ಕೊಡಗು

ಮರದಿಂದ ಬಿದ್ದು ಕಾರ್ಮಿಕ ಸಾವು

March 7, 2019

ಸೋಮವಾರಪೇಟೆ: ತೋಟದಲ್ಲಿ ಮರ ಕಪಾತು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಆಯತಪ್ಪಿ ಕೆಳಬಿದ್ದು ಕಾರ್ಮಿಕ ರೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಇಂದು ಮಧ್ಯಾಹ್ನ ಸಮೀಪದ ನಗರಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಪಟ್ಟಣ ಸಮೀಪದ ಹಾನಗಲ್ಲು ಬಾಣೆ ನಿವಾಸಿ ಭಾಗ್ಯ ಎಂಬುವರ ಪತಿ ಶಿವ(55) ಎಂಬುವರು ಇಂದು ಮರ ಕಪಾತು ಮಾಡಲೆಂದು ನಗರಳ್ಳಿ ಗ್ರಾಮದ ತನುಷಿ ಅವರ ತೋಟಕ್ಕೆ ತೆರಳಿದ್ದರು. ಮಧ್ಯಾಹ್ನದ ವೇಳೆಗೆ ಮರ ಕಡಿಯುತ್ತಿದ್ದ ಸಂದರ್ಭ ಆಯತಪ್ಪಿ ಕೆಳಬಿದ್ದಿದ್ದಾರೆ. ಸುಮಾರು 45 ಅಡಿ ಎತ್ತರದಿಂದ ಕೆಳ ಬಿದ್ದಿರುವ ಶಿವ ಸ್ಥಳದಲ್ಲೇ ಅಸುನೀಗಿದ್ದಾರೆ….

ಬೆಳೆಹಾನಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಸೂಚನೆ
ಕೊಡಗು

ಬೆಳೆಹಾನಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಸೂಚನೆ

March 7, 2019

ಮಡಿಕೇರಿ: ಬೆಳೆ ಹಾನಿ ಪರಿಹಾರ ಸಂಬಂಧ ಪರಿಹಾರ ತಂತ್ರಾಂಶ ದಲ್ಲಿ ದಾಖಲಿಸಿ, ಕೂಡಲೇ ಕಚೇರಿಗೆ ಸಲ್ಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದ ಕಾಮಗಾರಿಗಳು ಹಾಗೂ ಪರಿಹಾರ ವಿತರಣೆ ಪ್ರಗತಿ ಕುರಿತು ಬುಧವಾರ ನಡೆದ ಸಭೆಯ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳೆಹಾನಿ ಸಂಬಂಧಿಸಿದಂತೆ ಈಗಾ ಗಲೇ ಬೆಳೆ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ. ಬಾಕಿ ಇರುವುದನ್ನು ತಂತ್ರಾಂಶದಲ್ಲಿ ಅಳವಡಿಸಿ ಮಾಹಿತಿ…

1 58 59 60 61 62 187
Translate »