ಮರದಿಂದ ಬಿದ್ದು ಕಾರ್ಮಿಕ ಸಾವು
ಕೊಡಗು

ಮರದಿಂದ ಬಿದ್ದು ಕಾರ್ಮಿಕ ಸಾವು

March 7, 2019

ಸೋಮವಾರಪೇಟೆ: ತೋಟದಲ್ಲಿ ಮರ ಕಪಾತು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಆಯತಪ್ಪಿ ಕೆಳಬಿದ್ದು ಕಾರ್ಮಿಕ ರೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಇಂದು ಮಧ್ಯಾಹ್ನ ಸಮೀಪದ ನಗರಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಪಟ್ಟಣ ಸಮೀಪದ ಹಾನಗಲ್ಲು ಬಾಣೆ ನಿವಾಸಿ ಭಾಗ್ಯ ಎಂಬುವರ ಪತಿ ಶಿವ(55) ಎಂಬುವರು ಇಂದು ಮರ ಕಪಾತು ಮಾಡಲೆಂದು ನಗರಳ್ಳಿ ಗ್ರಾಮದ ತನುಷಿ ಅವರ ತೋಟಕ್ಕೆ ತೆರಳಿದ್ದರು. ಮಧ್ಯಾಹ್ನದ ವೇಳೆಗೆ ಮರ ಕಡಿಯುತ್ತಿದ್ದ ಸಂದರ್ಭ ಆಯತಪ್ಪಿ ಕೆಳಬಿದ್ದಿದ್ದಾರೆ.

ಸುಮಾರು 45 ಅಡಿ ಎತ್ತರದಿಂದ ಕೆಳ ಬಿದ್ದಿರುವ ಶಿವ ಸ್ಥಳದಲ್ಲೇ ಅಸುನೀಗಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ ಮತ್ತು ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದು, ಅಂತ್ಯಕ್ರಿಯೆ ಮಾ.8ರಂದು ಹಾನಗಲ್ಲು ಬಾಣೆಯ ರುದ್ರಭೂಮಿಯಲ್ಲಿ ನಡೆಯಲಿದೆ.

Translate »