ನೀರು ಕುಡಿಯಲು ಕೆರೆಗಿಳಿದ ಆನೆಗಳ ಪೀಕಲಾಟ
ಕೊಡಗು

ನೀರು ಕುಡಿಯಲು ಕೆರೆಗಿಳಿದ ಆನೆಗಳ ಪೀಕಲಾಟ

March 7, 2019

ನಾಪೋಕ್ಲು: ನೀರು ಕುಡಿಯಲೆಂದು ಬಂದ ಕಾಡಾನೆಗಳು ಕೆರೆಗೆ ಬಿದ್ದು ಮೇಲೇಳಲು ಆಗದೆ ಪರದಾ ಡಿದ ಘಟನೆ ಸಮೀಪದ ಚೆಯ್ಯಂಡಾಣೆ ಬಳಿಯ ಚೇಲಾ ವರ ಗ್ರಾಮದಲ್ಲಿ ನಡೆದಿದೆ. ಚೇಲಾವರ ಗ್ರಾಮದ ನಿವಾಸಿ ಪಟ್ಟಚೆರವಂಡ ವಾಸು ಸುಬ್ಬಯ್ಯ ತಮ್ಮ ಕಾಫಿ ತೋಟದ ನಡುವೆ ಕೃಷಿಗಾಗಿ ಕೆರೆಯನ್ನು ತೆಗೆದಿದ್ದರು. ಬುಧವಾರ ರಾತ್ರಿ ಮೂರು ಕಾಡಾನೆಗಳು ಕೆರೆಯಲ್ಲಿ ಬಿದ್ದು ಮೇಲೇಳ ಲಾಗದೆ ಪರದಾಡುತ್ತಿದ್ದು, ಗ್ರಾಮಸ್ಥರ ನೆರವಿನಿಂದ ಗುರು ವಾರ ತೆರಳಿದವು. ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬಂದಿರುವ ಸಾಧ್ಯತೆ ಇದ್ದು, ಅವುಗಳಲ್ಲಿ ಎರಡು ಮರಿ ಯಾನೆಗಳು ಹಾಗೂ ಒಂದು ದೊಡ್ಡ ಆನೆ ನೀರಿನಲ್ಲಿ ಸಿಲುಕಿದ್ದ ಸುದ್ದಿ ಗ್ರಾಮ ವ್ಯಾಪ್ತಿಯಲ್ಲಿ ವ್ಯಾಪಿಸಿತು. ಗ್ರಾಮ ಸ್ಥರು ಅಧಿಕ ಸಂಖ್ಯೆಯಲ್ಲಿ ಬಂದು ಕೆರೆಯಲ್ಲಿ ಬಿದ್ದ ಆನೆಗಳನ್ನು ವೀಕ್ಷಿಸತೊಡಗಿದರೆ, ಅತ್ತ ಕಾಡಾನೆ ಗಳು ತಮ್ಮನ್ನು ಕಾಪಾಡಿ ಎನ್ನುವಂತೆ ರಾತ್ರಿಯಿಡೀ ಘೀಳಿಡುತ್ತಿದ್ದವು. ಸುದ್ದಿ ತಿಳಿದು ಸ್ಥಳಕ್ಕೆ ವಿರಾಜಪೇಟೆ ಯಿಂದ ಅರಣ್ಯಾಧಿಕಾರಿಗಳಾದ ಗೋಪಾಲ, ರೋಷಿಣಿ ಹಾಗೂ ಡಿಎಫ್‍ಓ ರಾಜು ಅವರ ತಂಡ ಆಗಮಿಸಿತು. ನಾಪೋಕ್ಲಿನ ಎಎಸ್‍ಐ ವಿಶ್ವನಾಥ್, ಸಿಬ್ಬಂದಿಗಳಾದ ನವೀನ್, ಹರ್ಷ, ಮಹಂತೇಶ್, ಅಗ್ನಿಶಾಮಕ ದಳದ ಸಿಬ್ಬಂದಿ ಬಂದರು. ಗ್ರಾಮಸ್ಥರು ಸೇರಿ ಕೆರೆಯಿಂದ ಆನೆ ಗಳನ್ನು ಮೇಲೆತ್ತಲು ಹರಸಾಹಸ ಪಟ್ಟರು. ಮರದ ದಿಮ್ಮಿಗಳನ್ನು ಹಾಕಿ ಆನೆಗಳನ್ನು ಮೇಲೆತ್ತಲು ಪ್ರಯ ತ್ನಿಸಿದರು. ಸತತ ಪ್ರಯತ್ನದ ಬಳಿಕ ಕೆರೆಯಿಂದ ಮೇಲೆ ಬಂದ ಆನೆಗಳು ತಮ್ಮ ನೆಲೆಯತ್ತ ತೆರಳಿದವು.

Translate »