ಕಾರು ಮರಕ್ಕೆ ಡಿಕ್ಕಿ: ಚಾಲಕ ಸಾವು
ಕೊಡಗು

ಕಾರು ಮರಕ್ಕೆ ಡಿಕ್ಕಿ: ಚಾಲಕ ಸಾವು

March 10, 2019

ಗೋಣಿಕೊಪ್ಪಲು: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವನವಾಸಿ ಕಲ್ಯಾಣ ಕೊಡಗು ಘಟಕದ ಅಧ್ಯಕ್ಷ ಸಿದ್ದ (55) ಮೃತಪಟ್ಟಿದ್ದಾರೆ.

ತಿತಿಮತಿ ರೇಷ್ಮೆ ಹಡ್ಲು ಹಾಡಿ ನಿವಾಸಿಯಾಗಿದ್ದ ಇವರು, ಶನಿವಾರ ಬೆಳಗ್ಗೆ ತಿತಿಮತಿ-ಮೈಸೂರು ರಸ್ತೆಯ ಆನೆಚೌಕೂರು ಎಂಬಲ್ಲಿ ಕಾರು ಅಪ ಘಾತದಲ್ಲಿ ಗಾಯಗೊಂಡಿದ್ದರು. ಇವರು ಪ್ರಯಾ ಣಿಸುತ್ತಿದ್ದ ಮಾರುತಿ ಓಮ್ನಿ ಕಾರು ಮರಕ್ಕೆ ಡಿಕ್ಕಿ ಹೊಡೆದಿತ್ತು. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಸಾವನಪ್ಪಿದ್ದಾರೆ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »