ಕುಶಾಲನಗರ ವ್ಯಾಪ್ತಿಯಲ್ಲಿ ಕುಲಶಾಸ್ತ್ರ ಅಧ್ಯಯನ ಆರಂಭ
ಕೊಡಗು

ಕುಶಾಲನಗರ ವ್ಯಾಪ್ತಿಯಲ್ಲಿ ಕುಲಶಾಸ್ತ್ರ ಅಧ್ಯಯನ ಆರಂಭ

March 7, 2019

ಕೊಡವರು ಸಮಗ್ರ ಮಾಹಿತಿ ನೀಡಿ ಸಹಕರಿಸಲು ಎನ್.ಯು.ನಾಚಪ್ಪ ಮನವಿ
ಕುಶಾಲನಗರ: ತಾಲೂಕಿನಾ ದ್ಯಂತ ಆರಂಭಗೊಂಡಿರುವ ಕೊಡವರ ಮೂಲ ಕುಲಶಾಸ್ತ್ರ ಅಧ್ಯಯನಕ್ಕೆ ಕೊಡವ ಕುಟುಂಬಗಳು ಅಗತ್ಯ ಸಹಕಾರ ನೀಡ ಬೇಕು ಎಂದು ಸಿಎನ್‍ಸಿ ಮುಖ್ಯಸ್ಥ ಎನ್. ಯು.ನಾಚಪ್ಪ ಮನವಿ ಮಾಡಿದರು.

ಪಟ್ಟಣದ ಕೊಡವ ಸಮಾಜದಲ್ಲಿ ಏರ್ಪ ಡಿಸಿದ್ದ ಕೊಡವ ಕುಲಶಾಸ್ತ್ರ ಅಧ್ಯಯನ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಅನೇಕ ವರ್ಷಗಳಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಸೇರ್ಪಡೆಗೊಳಿಸಬೇಕು. ಕೊಡವ ತಕ್ಕ್ ಮಾತೃಭಾಷೆಯನ್ನು ಹೊಂದಿರುವ ಕೊಡವ ಬುಡಕಟ್ಟು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಮೂಲಕ ಸಂವಿಧಾನ ಭದ್ರತೆ ನೀಡಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಹೋರಾಟ ನಡೆಸಿದ ಫಲವಾಗಿ ಸರ್ಕಾರ ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ಮತ್ತೆ ಅವಕಾಶ ಮಾಡಿಕೊಟ್ಟಿದೆ. ಕೆಲವು ಪಟ್ಟಭದ್ರ ಹಿತಾ ಸಕ್ತಿಗಳಿಂದ ಈ ಹಿಂದೆ ಕುಲಶಾಸ್ತ್ರ ಅಧ್ಯ ಯನವನ್ನು ಸ್ಥಗಿತಗೊಳಿಸಲಾಗಿತ್ತು. ಜೊತೆಗೆ ಕೊಡವರ ದಾರಿ ತಪ್ಪಿಸುವ ಹುನ್ನಾರ ನಡೆಯುತ್ತಿರುವುದು ಆತಂಕಕಾರಿ ಬೆಳ ವಣಿಗೆ ಎಂದು ಹೇಳಿದರು.

ಕೊಡವ ಜನಾಂಗ ಅಭದ್ರತೆಗೆ ಒಳಗಾ ಗುತ್ತಿದ್ದು, ಈ ನಿಟ್ಟಿನಲ್ಲಿ ಕೊಡವ ಕುಲ ಶಾಸ್ತ್ರ ಅಧ್ಯಯನ ತಂಡ ಸಮಗ್ರ ಮಾಹಿತಿ ನೀಡುವ ಮೂಲಕ ಸಮುದಾಯದ ಏಳಿ ಗೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋ ಧನಾ ಸಂಸ್ಥೆ ಮೈಸೂರು ಮುಖ್ಯಸ್ಥ ಡಾ.ಮಧು ಸೂದನ್ ಮಾತನಾಡಿ, ಕೊಡಗು ಜಿಲ್ಲೆಯ ಮೂಲನಿವಾಸಿಗಳಾದ ಕೊಡವ ಸಮುದಾ ಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ ಹಾಗೂ ಕೊಡ ವರ ಆಚಾರ ವಿಚಾರ ಹಾಗೂ ಸಂಸ್ಕೃತಿ, ಪರಂಪರೆ ಕುರಿತು ಕುಲಶಾಸ್ತ್ರ ಅಧ್ಯಯನ ವನ್ನು ಕೈಗೊಳ್ಳಲಾಗಿದೆ ಎಂದರು.

ಲೋಕೂರು ವರದಿಯ ಆಧಾರದ ಮಾನ ದಂಡಗಳಾದ ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ ಹಿಂದುಳಿಯುವಿಕೆ, ಅಸ್ಪøಶ್ಯತೆಗೆ ಒಳಗಾ ದವರೇ, ನಾಚಿಕೆ ಮತ್ತು ಅಂಜಿಕೆಯ ಸ್ವಭಾವ, ವಿಶಿಷ್ಟವಾದ ಸಂಸ್ಕೃತಿ ಹಾಗೂ ಭೌಗೋಳಿಕ ಪ್ರತ್ಯೇಕತೆ ಎಂಬ ಅಂಶಗಳ ಮೇಲೆ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬಹುದೇ ಎಂಬ ಅಧ್ಯ ಯನವನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೊಡವ ಜನರು ತಮ್ಮ ಸಮಗ್ರವಾದ ವಸ್ತು ನಿಷ್ಠ ಮಾಹಿತಿಯನ್ನು ನೀಡುವ ಮೂಲಕ ಸಹಕಾರ ನೀಡಬೇಕು ಎಂದು ಹೇಳಿದರು.

ಕೊಡವ ಸಮಾಜದ ಅಧ್ಯಕ್ಷ ಅಜಪರ ವಂಡ ನಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಹಾಗೂ ಕೊಡವ ಸಮಾಜದ ಮಾಜಿ ಅಧ್ಯಕ್ಷ ಬೋಸ್ ಮೊಣ್ಣಪ್ಪ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Translate »