ಬೊಳ್ಳುಮಾಡು ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ
ಕೊಡಗು

ಬೊಳ್ಳುಮಾಡು ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ

March 9, 2019

ವಿರಾಜಪೇಟೆ: ಗ್ರಾಮೀಣ ಭಾಗದ ಮಹಿಳೆ ಮತ್ತು ಮಕ್ಕಳಿಗೆ ಸರಕಾರ ನೀಡು ತ್ತಿರುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸುವಂತಾ ಗಬೇಕು ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವಿರಾಜಪೇಟೆ ತಾಲೂಕಿನ ಬೆಳ್ಳುಮಾಡು ಗ್ರಾಮದಲ್ಲಿ ಶಿಶು ಕಲ್ಯಾಣ ಇಲಾಖೆ-ನಬಾರ್ಡ್ ಯೋಜನೆಯಿಂದ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಇತ್ತೀಚೆಗೆ ಸರಕಾರ ಮಹಿಳೆಯರಿಗಾಗಿ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿ ರುವುದರಿಂದ ಅದು ಸರಿಯಾದ ರೀತಿಯಲ್ಲಿ ಬಡ ಕೂಲಿ ಕಾರ್ಮಿಕರಿಗು ಹಾಗೂ ಇತರ ಮಹಿಳೆಯರಿಗೆ ದೊರಕುವಂತಾಗಬೇಕು. ಈ ನೂತನ ಅಂಗನವಾಡಿ ಗ್ರಾಮಸ್ಥರಿಗೆ ಸದುಪ ಯೋಗವಾಗಲಿ ಎಂದರು. ಜಿಪಂ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಅನೇಕ ವರ್ಷಗಳ ಹಿಂದೆ ಅಂಗನವಾಡಿ ಕೇಂದ್ರ ಮುಂಜೂರಾದರೂ ಸರಿಯಾದ ಸ್ಥಳ ಸಿಗದ ಕಾರಣ ನೆನೆಗುದಿಗೆ ಬಿದ್ದಿತ್ತು. ಆದರೆ ಈಗ ಅನುಕೂಲವಾದ ಅಂಗನವಾಡಿ ಕಟ್ಟಡ ಪುಟ್ಟ ಮಕ್ಕಳಿಗೆ ಎಲ್ಲಾ ಸೌಲಭ್ಯಗಳುಳ್ಳ ಕೇಂದ್ರವಾಗಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡಿಸಿ ಕೊಳ್ಳುವಂತೆ ಹೇಳಿದರು. ಮಹಿಳಾ ಮತ್ತು ಮಕ್ಕಳ ಇಲಾಖೆಯ ಪ್ರಭಾ ಮಾತನಾಡಿ, ಮಹಿ ಳೆಯರಿಗೆ ಆರೋಗ್ಯ ತಪಾಸಣೆ, ಮನೆಯಲ್ಲಿಯೇ ಕುಳಿತು ಕಾಲಹರಣ ಮಾಡದಂತೆ ಸ್ವಉದ್ಯೋಗಕ್ಕಾಗಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯಗಳನ್ನು ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

ಅಂಗನವಾಡಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಗ್ರಾಪಂ ಸದಸ್ಯ ಪೊನ್ನಣ್ಣ, ಕೆದಮುಳ್ಳೂರು ಗ್ರಾಪಂ ಸದಸ್ಯ ಕಿರಣ್ ಕುಮಾರ್, ಗ್ರಾಮಸ್ಥರಾದ ಅಪ್ಪುಣ, ಮೂಳೇರ ಪ್ರತಾಪ್, ಎ.ಎನ್.ತನು ಅಪ್ಪಯ್ಯ, ಜನಾರ್ದನ ರೈ, ವಿರಾಜಪೇಟೆ ಪಪಂ ಮಾಜಿ ಅಧ್ಯಕ್ಷ ಇ.ಸಿ.ಜೀವನ್ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಎಂ.ಆರ್.ಮಿನಾಕ್ಷಿ ನಿರೂಪಿಸಿದರೆ, ಮಾಯಮ್ಮ ವಂದಿಸಿದರು.

Translate »