ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ
ಮೈಸೂರು

ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ

March 8, 2019

ಬೆಂಗಳೂರು: ಪ್ರತಿಷ್ಠಿತ ಮೈಸೂರು, ಬೆಂಗಳೂರು ಉತ್ತರ ಸೇರಿದಂತೆ 16 ಲೋಕಸಭಾ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿ ಗಳ ಪಟ್ಟಿಯನ್ನು ಕಾಂಗ್ರೆಸ್ ಸಿದ್ಧಪಡಿಸಿದೆ. ತುಮಕೂರು ಸೇರಿದಂತೆ ಹಾಲಿ ಸಂಸ ದರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಮತ್ತೆ ಅವ ರಿಗೇ ಟಿಕೆಟ್ ನೀಡಲು ಪಕ್ಷದ ಕೇಂದ್ರ ಚುನಾ ವಣಾ ಪರಿಶೀಲನಾ ಸಮಿತಿಗೆ ಶಿಫಾರಸು ಮಾಡಿದೆ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಇಂದು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಚುನಾವಣಾ ಹಾಗೂ ಪ್ರಚಾರ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪಕ್ಷ ಎಲ್ಲಿ ಗೆಲ್ಲಲು ಸಾಧ್ಯವಿಲ್ಲವೋ ಅಂತಹ 12 ಕ್ಷೇತ್ರಗಳಲ್ಲಿ ಕೆಲವನ್ನು ಮಿತ್ರ ಪಕ್ಷ ಜೆಡಿಎಸ್‍ಗೆ ಬಿಟ್ಟುಕೊಡುವ ಹಿನ್ನೆಲೆಯಲ್ಲಿ ಆ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆಸಿಲ್ಲ. ಬೆಂಗಳೂರು ದಕ್ಷಿಣ ಲೋಕ ಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಪ್ರಿಯಾಕೃಷ್ಣ, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಏಕೈಕ ಹೆಸ ರನ್ನು ಶಿಫಾರಸು ಮಾಡಲಾಗಿದೆ. ಉಳಿದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಘಟಕದ ಶಿಫಾರಸು, ಚುನಾ ವಣಾ ಸಮಿತಿ ನಡೆಸಿರುವ ಸಮೀಕ್ಷೆ ಇವೆಲ್ಲವನ್ನೂ ಮಾನದಂಡವಾಗಿ ಇಟ್ಟುಕೊಂಡು ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಎರಡು-ಮೂರು ಹೆಸರನ್ನು ಪರಿಶೀಲನಾ ಸಮಿತಿಗೆ ಕಳುಹಿಸಲು ತೀರ್ಮಾನಿಸಿದೆ.

ದೆಹಲಿಯಲ್ಲಿ ನಿನ್ನೆ ಮೈತ್ರಿ ಪಕ್ಷ ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯೆ ಸೀಟು ಹೊಂದಾಣಿಕೆ ಕುರಿತು ನಡೆದ ಸಮಾಲೋಚನಾ ಸಭೆಯಲ್ಲಿ ಕ್ಷೇತ್ರಗಳನ್ನು ಅಂತಿಮ ಗೊಳಿಸಿದ್ದರೂ, ಜೆಡಿಎಸ್ ಪಾಲಾಗಲಿರುವ ಮೈಸೂರು, ಬೆಂಗಳೂರು ಉತ್ತರ ಹಾಗೂ ತುಮಕೂರು ಕ್ಷೇತ್ರಗಳಿಗೂ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಇಂದಿನ ಸಭೆಯಲ್ಲಿ ಅಖೈರುಗೊಳಿಸಲಾಗಿದೆ.

ಸಿಎಲ್‍ಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಶಿಫಾರಸು ಮಾಡಿಸಿದ್ದಾರೆ. ಮೈಸೂರು ಕ್ಷೇತ್ರಕ್ಕೆ ವಿಜಯಶಂಕರ್, ಬ್ರಿಜೇಶ್ ಕಾಳಪ್ಪ ಹಾಗೂ ಸೂರಜ್ ಹೆಗ್ಡೆ, ಬೆಂಗಳೂರು ಉತ್ತರಕ್ಕೆ ಸಿ. ನಾರಾಯಣ ಸ್ವಾಮಿ ಹಾಗೂ ಬಿ.ಎಲ್.ಶಂಕರ್, ಬೆಂಗಳೂರು ಕೇಂದ್ರಕ್ಕೆ ರಿಜ್ವಾನ್ ಅರ್ಷದ್, ರೋಷನ್ ಬೇಗ್, ಎಚ್.ಪಿ.ಸಾಂಗ್ಲಿಯಾನ, ಮಂಗಳೂರು ರಮಾನಾಥ ರೈ, ಬಿ.ಕೆ.ಹರಿಪ್ರಸಾದ್, ವಿನಯ್ ಕುಮಾರ್ ಸೊರಕೆ. ಉತ್ತರ ಕನ್ನಡ ಪ್ರಶಾಂತ್ ದೇಶಪಾಂಡೆ, ನಿವೇದಿತ್ ಆಳ್ವ, ಹಾವೇರಿ ಬಸವರಾಜ್ ಶಿವಣ್ಣನವರ್, ಸಲೀಂ ಅಹಮದ್, ಡಿ.ಆರ್.ಪಾಟೀಲ್, ಕೆ.ಬಿ.ಕೋಳಿವಾಡ್, ಧಾರವಾಡ ವಿನಯ್ ಕುಲಕರ್ಣಿ, ಶಾಕೀರ್ ಸನದಿ, ವೀರಣ್ಣ ಮತ್ತಿಕಟ್ಟಿ, ಬೆಳಗಾವಿ ರಮೇಶ್ ಜಾರಕಿಹೊಳಿ, ವಿವೇಕ್‍ರಾವ್ ಪಾಟೀಲ್, ನಾಗರಾಜ್ ಜಾಧವ್, ಬಾಗಲಕೋಟೆ ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ್, ಬೀದರ್ ಈಶ್ವರ್ ಖಂಡ್ರೆ, ಸಿ.ಎಂ.ಇಬ್ರಾಹಿಂ, ವಿಜಯ್ ಸಿಂಗ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಆರತಿ ಕೃಷ್ಣ ಹಾಗೂ ಡಾ. ಡಿ.ಎಲ್.ವಿಜಯಕುಮಾರ್ ಹೆಸರನ್ನು ಶಿಫಾರಸು ಮಾಡಲಾಗಿದೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಗೆಲುವನ್ನೇ ಮಾನದಂಡವಾಗಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಶಿಫಾರಸು ಮಾಡಲಾಗಿದೆ ಎಂದರು. ಇದೇ 11ರಂದು ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ ಸಭೆ ನಡೆಯಲಿದೆ, ಅಲ್ಲಿ ಪಟ್ಟಿ ಪರಿಶೀಲನೆ ನಂತರ ಕೇಂದ್ರ ಚುನಾವಣಾ ಸಮಿತಿ ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದರು.

Translate »