ಮಡಿಕೇರಿ: ಕೊಡಗು ಪ್ರವಾಸಿ ಉತ್ಸವ ಹಾಗೂ 3 ದಿನಗಳ ಕಾಲ ಹಮ್ಮಿ ಕೊಂಡಿರುವ `ಫಲಪುಷ್ಪ ಪ್ರದರ್ಶನ’ಕ್ಕೆ ರಾಜ್ಯ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಶುಕ್ರವಾರ ಇಲ್ಲಿ ಚಾಲನೆ ನೀಡಿದರು. ನಂತರ ಪಟ್ಟಣದ ನೈಸರ್ಗಿಕ ಸೊಬಗಿನ ರಾಜಾಸೀಟ್ ನಲ್ಲಿ ಹೂವುಗಳಿಂದ ಅಲಂಕೃತವಾಗಿದ್ದ ಕಾವೇರಿ ಮಾತೆಯ ಪ್ರತಿಮೆಗೆ ಪುಷ್ಪಾ ರ್ಚನೆ ನೆರವೇರಿಸಿ, ಉದ್ಯಾನದೊಳಗೆ ವಿಹರಿಸಿದ ಸಚಿವರು ವಿವಿಧ ಕಲಾಕೃತಿ ಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರಕೃತಿ ವಿಕೋಪದಿಂದ ಸಂತ್ರಸ್ತ ವಾಗಿದ್ದ…
ಸಂಸತ್‍ನಲ್ಲಿ ಪ್ರತಿಧ್ವನಿಸಿದ ತಲಚೇರಿ-ಮೈಸೂರು ರೈಲು ಯೋಜನೆ: ಮೊದಲು ಪರಿಸರ ಇಲಾಖೆಯಿಂದ ಅನುಮತಿ ಪಡೆಯುವಂತೆ ಕೇರಳ ಸಂಸದರಿಗೆ ಕೇಂದ್ರ ಸೂಚನೆ
January 12, 2019ನವದೆಹಲಿ: ದಕ್ಷಿಣ ಕೊಡ ಗಿನ ದಟ್ಟ ಅರಣ್ಯದ ನಡುವೆ ಹಾದು ಹೋಗಲಿರುವ ವಿವಾದಾತ್ಮಕ ತಲಚೇರಿ-ಮೈಸೂರು ರೈಲ್ವೆ ಯೋಜನೆಯ ವಿಚಾರ ಸಂಸತ್‍ನಲ್ಲೂ ಇಂದು ಪ್ರತಿಧ್ವನಿಸಿತು. ಈ ವಿವಾದಾತ್ಮಕ ತಲಚೇರಿ-ಮೈಸೂರು ರೈಲ್ವೆ ಯೋಜನೆಯನ್ನು ಕೊಡಗು ಮತ್ತು ಮೈಸೂರು ನಿವಾಸಿಗಳು, ಕೊಡಗಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ಪರಿಸರವಾದಿ ಗಳು ಪ್ರತಿಭಟನೆ ಹಾಗೂ ಹೋರಾಟಗಳ ಮೂಲಕ ತೀವ್ರವಾಗಿ ವಿರೋಧಿಸುತ್ತಿ ದ್ದರೂ ಕೇರಳದ ಚುನಾಯಿತ ಜನಪ್ರತಿನಿಧಿ ಗಳು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಭಾರೀ ಲಾಬಿ ನಡೆಸುತ್ತಿದ್ದಾರೆ. ಸಂಸತ್‍ನಲ್ಲಿ ಪ್ರಸ್ತಾಪಿಸುತ್ತಲೇ ಇದ್ದಾರೆ. ಇದೇ…
ಕ್ಲಾಸ್‍ರೂಂನಲ್ಲಿ ತುಂಬಿತು ತಾಯ್ತತನದ ವಾತ್ಸಲ್ಯ
January 12, 2019ಗೋಣಿಕೊಪ್ಪ: ಅದು ಕಾಲೇಜು ಕೊಠಡಿ. ಆದರೆ ಅಲ್ಲಿ ಪಾಠ-ಪ್ರವ ಚನವಿರಲಿಲ್ಲ. ಅಲ್ಲಿ ಪ್ರೀತಿ ಮೈದಳೆದಿತ್ತು. ತಾಯ್ತನದ ವಾತ್ಸಲ್ಯ ಅರಳಿತ್ತು. ಎಲ್ಲರ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಸಹಪಾಠಿಗಳಿಂದ ಮಮತೆಯ ಮಡಿಲು ತುಂಬಿತ್ತು. ಇದು ಗೋಣಿಕೊಪ್ಪಲು ಕಾಲೇಜಿನಲ್ಲಿ ಕಂಡುಬಂದು ದೃಶ್ಯ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಶಾಲಿನಿಗೆ ಕಳೆದ ಕಳೆದ ವರ್ಷ ಮದುವೆಯಾಗಿತ್ತು. ಆದರೂ ತನ್ನ ಓದುವ ಅಭಿಲಾಷೆಯಿಂದ ಪತಿಗೆ ತಿಳಿಸಿದ ಶಾಲಿನಿ ವ್ಯಾಸಂಗ ಮುಂದುವರೆಸಿದ್ದಳು. ಎರಡನೇ ವರ್ಷದ ಎಂ.ಎ ಪದವಿ ಓದುತ್ತಿದ್ದ ಶಾಲಿನಿ ಗರ್ಭಿಣಿಯಾಗಿದ್ದಳು. ಈ…
ಪೊನ್ನಂಪೇಟೆಯಲ್ಲಿ ಮನಸೂರೆಗೊಂಡ ಸಾಂಸ್ಕøತಿಕ ಸೌರಭ
January 12, 2019ವಿರಾಜಪೇಟೆ: ಕಲಾವಿದರ ನೃತ್ಯ, ಹಿಂದುಸ್ಥಾನಿ ಮತ್ತು ಕರ್ನಾಟಕ ಸಂಗೀತ ಗೀತಗಾಯನ, ವಯಲಿನ್, ಕೊಳಲು ವಾದನ, ಗೀಗಿಪದ, ಗಿರಿಜನ ನೃತ್ಯ, ಕಂಸಾಳೆ, ಮೊದಲಾದ ಸಾಂಸ್ಕøತಿಕ ಕಲೆಗಳು ಹಾಗೂ ಮೈಸೂರಿನ ಡೊಳ್ಳುಕುಣಿತದ ಕಲಾವಿದರು ನೋಡುಗರನ್ನು ರೋಮಾಂಚನಗೊಳಿಸಿದರು. ಕನ್ನಡ ಮತ್ತು ಸಂಸ್ಕøತಿಕ ಇಲಾಖೆಯಿಂದ ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಸೌರಭದಲ್ಲಿ ಮೈಸೂರಿನ ಅರಮನೆ ಕಲಾವಿದರು ನುಡಿಸಿದ ಸುಶ್ರಾವ್ಯ ವಯಲಿನ್ ವಾದನ ಪ್ರೇಕ್ಷಕರಿಗೆ ಮುದ ನೀಡಿತು. ಇದೇ ಕಲಾವಿದರ ಕೊಳಲು ವಾದನವು ಇಂಪಾಗಿತ್ತು. ಆನಂತರ ಬೆಂಗ ಳೂರಿನ ನಾಟ್ಯಾಲಯ ನೃತ್ಯ ಶಾಲೆಯ…
ಕೂಡಿಗೆ ಬಳಿ ಚಿರತೆ ದಾಳಿಗೆ ಆಕಳು ಬಲಿ
January 12, 2019ಕುಶಾಲನಗರ: ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಡಂಚಿನ ಗ್ರಾಮದಲ್ಲಿ ಬುಧವಾರ ಸಂಜೆ ಚಿರತೆ ದಾಳಿಗೆ ಆಕಳೊಂದು ಮೃತಪಟ್ಟಿ ರುವ ಘಟನೆ ನಡೆದಿದೆ. ಹುದುಗೂರು ಗ್ರಾಮದ ನಿವಾಸಿ ರೈತ ಮಹಿಳೆ ಆಶೀಯಾ ಎಂಬುವರಿಗೆ ಸೇರಿದ 3 ವರ್ಷದ ಆಕಳು ಬಲಿಯಾಗಿದೆ. ಸೋಮ ವಾರಪೇಟೆ ವಿಭಾಗದ ಹುದುಗೂರು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕಾಡಂಚಿನಲ್ಲಿರುವ ಜಮೀನಿನಲ್ಲಿ ಓಡಾ ಡುವ ಈ ಚಿರತೆ ಹೊಲಗದ್ದೆಗಳಲ್ಲಿ ಹುಲ್ಲು ಮೇಯುತ್ತಿರುವ ಹಸು, ಆಡು-ಕುರಿಗಳ ಮೇಲೆ…
ನೆರೆ ಸಂತ್ರಸ್ತರಿಗೆ ಧರ್ಮಸ್ಥಳ ಸಂಸ್ಥೆಯಿಂದ 8 ಕೋಟಿ ರೂ. ನೆರವು ವಿತರಣೆ
January 10, 2019ಮಡಿಕೇರಿ: ಪ್ರಕೃತಿ ವಿಕೋಪ ದಲ್ಲಿ ಸಂತ್ರಸ್ತರಾದವರಿಗೆ ಅನುಕಂಪದ ಬದಲಿಗೆ ಅನುಭೂತಿಯಿಂದ ಪ್ರತಿಯೊ ಬ್ಬರು ನೆರವು ನೀಡಬೇಕೆಂದು ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ರಾಜಶ್ರೀ ಡಾ.ಡಿ. ವೀರೇಂದ್ರ ಹೆಗ್ಗಡೆ ಕರೆ ನೀಡಿದ್ದಾರೆ. ಪ್ರಕೃತಿ ವಿಕೋಪದಿಂದಾಗಿ ಸಂತ್ರಸ್ತರಾದ ಕೊಡಗು ಜಿಲ್ಲೆಯ 2106 ಮಂದಿಗೆ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 8 ಕೋಟಿ ರೂ.ಗಳ ನೆರವು ನೀಡಲಾಯಿತು. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿತ ಸಮಾರಂಭದಲ್ಲಿ ಸಾಂಕೇತಿಕವಾಗಿ ಸಂತ್ರಸ್ತಗೆ ಪರಿಹಾರದ ಚೆಕ್‍ಗ ಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ….
ಜೂಜಾಟ: ನಾಲ್ವರ ಬಂಧನ
January 10, 2019ವಿರಾಜಪೇಟೆ: ವಿರಾಜಪೇಟೆ ಬಳಿಯ ವಿನಾಯಕ ನಗರದ ಹೊಳೆಯ ಬದಿಯಲ್ಲಿ ಜೂಜಾಟ ಅಡುತ್ತಿದ್ದ ನಾಲ್ಕು ಮಂದಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿ ಪಣಕ್ಕಿಟ್ಟಿದ್ದ ರೂ.71 ಸಾವಿರ ವನ್ನು ವಶಪಡಿಸಿಕೊಂಡಿದ್ದಾರೆ. ಬುಧವಾರ ಸಂಜೆ ಜೂಜಾಟದಲ್ಲಿ ತೊಡ ಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಟಿ.ಜೆ.ಗಣೇಶ್, ಗೋಪಾಲಕೃಷ್ಣ, ಕೆ.ಟಿ.ದೀಪಕ್ ಮತ್ತು ಹೆಚ್.ಎಂ.ರಾಜೇಶ್ ಅವರುಗಳನ್ನು ಬಂಧಿಸಿದ್ದು, ಇನ್ನು ಮೂವರು ಪರಾರಿಯಾದರು ಎಂದು ಪೊಲೀಸರು ತಿಳಿಸಿದರು. ಮತ್ತೊಂದು ಪ್ರಕರಣದಲ್ಲಿ ಪಟ್ಟ ಣದ ಖಾಸಗಿ ಬಸ್ಸು ನಿಲ್ದಾಣದ…
ಇಂದು ಕೊಡಗು ಪ್ರವಾಸಿ ಉತ್ಸವಕ್ಕೆ ಚಾಲನೆ
January 10, 2019ಮಡಿಕೇರಿ: ಜಿಲ್ಲಾಡಳಿತ, ಪ್ರವಾಸೋದ್ಯಮ, ತೋಟಗಾರಿಕೆ ಹಾಗೂ ಪಶುಪಾಲನೆ ಇಲಾಖೆ ಸಹಯೋಗದಲ್ಲಿ ಜ.11 ರಿಂದ ಮೂರು ದಿನಗಳ ಕಾಲ ‘ಕೊಡಗು ಪ್ರವಾಸಿ ಉತ್ಸವ’ವು ನಗರದ ರಾಜಾಸೀಟು ಮತ್ತು ಗಾಂಧಿ ಮೈದಾನದಲ್ಲಿ ನಡೆಯಲಿದೆ. ಜ.11 ರಂದು ಸಂಜೆ 4.30 ಗಂಟೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ‘ಕೊಡಗು ಪ್ರವಾಸಿ ಉತ್ಸವಕ್ಕೆ’ ಚಾಲನೆ ನೀಡಲಿದ್ದಾರೆ. ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಉದ್ಘಾಟಿಸಲಿದ್ದಾರೆ. ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ಬಿ.ಎ.ಹರೀಶ್,…
ವಿಷ ಸೇವಿಸಿ, ಮನೆಗೆ ಬೆಂಕಿ ಇಟ್ಟುಕೊಂಡ ಭೂಪ
January 10, 2019ಗೋಣಿಕೊಪ್ಪಲು: ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋತೂರು ಗ್ರಾಮದ ಲಕ್ಕುಂದ ಹಾಡಿಯ ಮಲೆಯಾಳಿ ಸುರೇಂದ್ರ(45) ಎಂಬುವರು ವಿಷ ಸೇವಿಸಿ, ತನ್ನ ಮನೆಗೆ ಬೆಂಕಿ ಇಟ್ಟುಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆ ಸುರೇಂದ್ರ ವಿಷ ಸೇವಿಸಿ ತನ್ನ ಮನೆಗೆ ಬೆಂಕಿ ಇಟ್ಟುಕೊಂಡರೆನ್ನಲಾಗಿದೆ. ಬೆಂಕಿ ಹತ್ತಿಕೊಂಡ ಹೊಗೆಯಿಂದ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿ ಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ವಿಷ ಸೇವಿಸಿದ್ದ ಸುರೇಂದ್ರ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಆತನನ್ನು ಕುಟ್ಟ ಆಸ್ಪತ್ರೆಗೆ ಸಾಗಿಸಿ ನಂತರ ಹೆಚ್ಚಿನ…
ಗುಡ್ಡೆಹೊಸೂರು ಶಾಲೆಯಲ್ಲಿ ಮಕ್ಕಳ ಸಂತೆ
January 10, 2019ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ಸಂತೆ ಭರ್ಜರಿಯಾಗಿ ನಡೆಯಿತು. ಇಲ್ಲಿನ ಗ್ರಾಪಂ ಅಧ್ಯಕ್ಷ ಕೆ.ಎಸ್.ಭಾರತಿಯವರು ಸಂತೆಗೆ ಚಾಲನೆ ನೀಡಿದರು. ಈ ಸಂದರ್ಭ ಎಸ್‍ಡಿಎಂಸಿ ಅಧ್ಯಕ್ಷ ಬಿ.ಎಸ್.ದಿನೇಶ್ ಮತ್ತು ಸದಸ್ಯರು ಹಾಜರಿದ್ದರು. ಗುಡ್ಡೆಹೊಸೂರುನ ಗ್ರಾಮಸ್ಥರಿಗೆ ಸ್ಥಳೀಯವಾಗಿ ಮಂಗ ಳವಾರ ಕುಶಾಲನಗರ ಸಂತೆಯಾದ್ದರಿಂದ ಹಲವು ಸಾರ್ವಜನಿಕರು ಶಾಲಾ ಆವರಣದಲ್ಲಿ ತರಕಾರಿ ಖರೀದಿಸುವ ದೃಶ್ಯ ಕಂಡು ಬಂತು. ಈ ಸಂದರ್ಭ ಶಾಲಾ ಮುಖ್ಯಶಿಕ್ಷಕ ಸಣ್ಣಸ್ವಾಮಿ ಮತ್ತು ಶಿಕ್ಷಕ ವೃಂದ ಹಾಜರಿದ್ದರು. ಈ ಸಂದರ್ಭ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ…