ಸಂಸತ್‍ನಲ್ಲಿ ಪ್ರತಿಧ್ವನಿಸಿದ ತಲಚೇರಿ-ಮೈಸೂರು ರೈಲು  ಯೋಜನೆ: ಮೊದಲು ಪರಿಸರ ಇಲಾಖೆಯಿಂದ ಅನುಮತಿ  ಪಡೆಯುವಂತೆ ಕೇರಳ ಸಂಸದರಿಗೆ ಕೇಂದ್ರ ಸೂಚನೆ
ಕೊಡಗು

ಸಂಸತ್‍ನಲ್ಲಿ ಪ್ರತಿಧ್ವನಿಸಿದ ತಲಚೇರಿ-ಮೈಸೂರು ರೈಲು ಯೋಜನೆ: ಮೊದಲು ಪರಿಸರ ಇಲಾಖೆಯಿಂದ ಅನುಮತಿ ಪಡೆಯುವಂತೆ ಕೇರಳ ಸಂಸದರಿಗೆ ಕೇಂದ್ರ ಸೂಚನೆ

January 12, 2019

ನವದೆಹಲಿ: ದಕ್ಷಿಣ ಕೊಡ ಗಿನ ದಟ್ಟ ಅರಣ್ಯದ ನಡುವೆ ಹಾದು ಹೋಗಲಿರುವ ವಿವಾದಾತ್ಮಕ ತಲಚೇರಿ-ಮೈಸೂರು ರೈಲ್ವೆ ಯೋಜನೆಯ ವಿಚಾರ ಸಂಸತ್‍ನಲ್ಲೂ ಇಂದು ಪ್ರತಿಧ್ವನಿಸಿತು.

ಈ ವಿವಾದಾತ್ಮಕ ತಲಚೇರಿ-ಮೈಸೂರು ರೈಲ್ವೆ ಯೋಜನೆಯನ್ನು ಕೊಡಗು ಮತ್ತು ಮೈಸೂರು ನಿವಾಸಿಗಳು, ಕೊಡಗಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ಪರಿಸರವಾದಿ ಗಳು ಪ್ರತಿಭಟನೆ ಹಾಗೂ ಹೋರಾಟಗಳ ಮೂಲಕ ತೀವ್ರವಾಗಿ ವಿರೋಧಿಸುತ್ತಿ ದ್ದರೂ ಕೇರಳದ ಚುನಾಯಿತ ಜನಪ್ರತಿನಿಧಿ ಗಳು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಭಾರೀ ಲಾಬಿ ನಡೆಸುತ್ತಿದ್ದಾರೆ. ಸಂಸತ್‍ನಲ್ಲಿ ಪ್ರಸ್ತಾಪಿಸುತ್ತಲೇ ಇದ್ದಾರೆ.

ಇದೇ ಜ.2 ರಂದು ಕೇರಳ ಸಂಸದ ಮುಲ್ಲಪಲ್ಲಿ ರಾಮಚಂದ್ರ ಅವರು, ತಲ ಚೇರಿ-ಮೈಸೂರು ರೈಲ್ವೆ ಮಾರ್ಗದ ಕಾರ್ಯಸಾಧ್ಯತೆ ಅಧ್ಯಯನ ಪೂರ್ಣ ಗೊಂಡಿದೆಯೇ? ಸಮಗ್ರ ವರದಿಯನ್ನು ಸಲ್ಲಿಸಲಾಗಿದೆಯೇ? ಅದರ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಾಗಿದೆ? ಎಂದು ರೈಲ್ವೆ ಸಚಿವರನ್ನು ಸದನದಲ್ಲಿ ಪ್ರಶ್ನಿಸಿ ದರು. ಮುಲ್ಲಪಲ್ಲಿ ರಾಮಚಂದ್ರನ್ ಅವರ ಪ್ರಶ್ನೆಗೆ ರೈಲ್ವೆ ರಾಜ್ಯ ಸಚಿವ ರಾಜೇನ್ ಗೋಹೇನ್ ಪ್ರತಿಕ್ರಿಯಿಸಿ, ತಲಚೇರಿ-ಪಿರಿಯಾ ಪಟ್ಟಣವರೆಗಿನ (ಮೈಸೂರು ಜಿಲ್ಲೆ) ರೈಲು ಮಾರ್ಗದ ಯೋಜನೆಯ ಕಾರ್ಯಸಾಧ್ಯ ತೆಯ ವರದಿಯನ್ನು ಕೇರಳ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಸಹ ಭಾಗಿತ್ವದ ಸಂಸ್ಥೆಯಾದ ‘ಕೇರಳ ರೈಲು ಅಭಿವೃದ್ಧಿ ಕಾರ್ಪೊರೇಷನ್ ಲಿಮಿಟೆಡ್’ (ಕೆಆರ್‍ಡಿಸಿಎಲ್) ಸಿದ್ಧಪಡಿಸಿ 2018ರ ಜನ ವರಿಯಲ್ಲಿ ಸಲ್ಲಿಸಿದೆ. ಆದರೆ ಯಾವುದೇ ಭೂಮಾಪನ ಸರ್ವೆಯಾಗಲೀ, ಸೂಕ್ಷ್ಮ ಪರಿಸರ ವ್ಯವಸ್ಥೆ, ಸಂರಕ್ಷಿತ ಅರಣ್ಯ ಪ್ರದೇಶ ಮತ್ತು ಅಭಯಾರಣ್ಯಗಳ ಮೇಲೆ ರೈಲ್ವೆ ಮಾರ್ಗದಿಂದ ಆಗುವ ದುಷ್ಪರಿಣಾಮ ಗಳ ಮೌಲ್ಯಮಾಪನವಾಗಲೀ ಈ ಕಾರ್ಯ ಸಾಧ್ಯತಾ ವರದಿಯಲ್ಲಿ ಅಡಕವಾಗಿಲ್ಲ ಎಂದು ಸಚಿವರು ಉತ್ತರಿಸಿದರು. ಹಾಗಾಗಿ ಈ ಯೋಜನೆಗೆ ಕರ್ನಾಟಕದ ಅರಣ್ಯ ಇಲಾ ಖೆಯಿಂದ ಮೊದಲು ಅನುಮತಿ ಪಡೆಯಿರಿ ಎಂದು ಕೇರಳ ಸಂಸದರಿಗೆ ರೈಲ್ವೆ ಸಚಿ ವರು ಸಲಹೆ ನೀಡಿದರು.

ಕರ್ನಾಟಕ ರಾಜ್ಯದಲ್ಲಿ ಹಾದು ಹೋಗುವ ಉದ್ದೇಶಿತ ರೈಲ್ವೆ ಮಾರ್ಗದ ವಿರುದ್ಧ ಸ್ಥಳೀ ಯರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ರೈಲು ಮಾರ್ಗದಲ್ಲಿನ ಅರಣ್ಯ ತೆರವು ವಿವಾದವನ್ನು ಮೊದಲು ಬಗೆಹರಿಸಿಕೊ ಳ್ಳುವಂತೆ ಕೆಆರ್‍ಡಿಸಿಎಲ್ ಸಲಹೆ ನೀಡ ಲಾಗಿದೆ. ಇದರೊಟ್ಟಿಗೆ ಕರ್ನಾಟಕ ಸರ್ಕಾರ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಎಲ್ಲ ಸಂಸ್ಥೆಗಳ ನಡುವೆ ಸಮನ್ವಯ ಸಾಧಿ ಸಿಕೊಂಡು ಪ್ರಸ್ತಾವಿತ ನೂತನ ರೈಲು ಮಾರ್ಗಕ್ಕೆ ಅನುಮತಿ ಇರುವ ಸಮರ್ಪಕ ಹಾಗೂ ಪರಿಷ್ಕøತ ವರದಿಯನ್ನು ಸಲ್ಲಿಸು ವಂತೆ ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದರು. ಕರ್ನಾಟಕ, ಅದರಲ್ಲೂ ಕೊಡ ಗಿನ ಜನತೆಯ ತೀವ್ರ ವಿರೋಧವಿದ್ದರೂ ಈ ರೈಲು ಮಾರ್ಗದ ಸಮಗ್ರ ಯೋಜನಾ ವರದಿಯನ್ನು ರೈಲ್ವೆ ಇಲಾಖೆ ಮತ್ತು ಕೆಆರ್‍ಡಿಸಿಎಲ್ ವೆಚ್ಚ ಹಂಚಿಕೆ ಆಧಾರದ ಮೇಲೆ ತಯಾರಿಸುವಂತೆ ಕೇರಳ ಸರ್ಕಾರ ಆದೇಶಿಸಿತ್ತು.

49 ಕಿ.ಮೀ. ರೈಲು ಮಾರ್ಗ ಕೇರಳ ಅರಣ್ಯದ ಮೂಲಕ ಹಾದು ಬಂದರೆ, ನಾಗ ರಹೊಳೆ ಹುಲಿ ಸಂರಕ್ಷಣಾ ವಲಯದ ಲ್ಲಿನ 11 ಕಿ.ಮೀ. ಸೇರಿದಂತೆ 35 ಕಿ.ಮೀ. ಮಾರ್ಗ ಕರ್ನಾಟಕದ ಪರಿಸರ ಸೂಕ್ಷ್ಮ ಪ್ರದೇ ಶದ ಮೂಲಕ ಹಾದು ಹೋಗಲಿದೆ.
ಈ ರೈಲು ಮಾರ್ಗಕ್ಕಾಗಿ ಕೇರಳ ಸಂಸ ದರ ಜೋರಾಗಿದೆ. ಮುಲ್ಲಪಲ್ಲಿ ರಾಮ ಚಂದ್ರನ್ ಅವರು 2018ರ ಜು.25ರಲ್ಲಿ ಒಂದು ಬಾರಿ ಕಾರ್ಯಸಾಧ್ಯತೆ ಮತ್ತು ಸಮಗ್ರ ಯೋಜನಾ ವರದಿಯ ಬಗ್ಗೆ ಸಂಸ ತ್ತಿನಲ್ಲಿ ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದು.

180 ಕಿ.ಮೀ ಉದ್ದದ ತಲಚೇರಿ ರೈಲ್ವೆ ಮಾರ್ಗವು ಹಸಿರು ಪ್ರದೇಶ ವಾದ ಮಾನಂದವಾಡಿ, ಕುಟ್ಟಾ, ಕಾನೂರು, ಬಾಳೆಲೆ, ತಿತಿಮತಿ ಮತ್ತು ಆನೆಚೌಕೂರು ಮೂಲಕ ಮೈಸೂರು ತಲುಪಲಿದ್ದು, ಈ ಯೋಜನೆಗೆ 5000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

Translate »