ಕ್ಲಾಸ್‍ರೂಂನಲ್ಲಿ ತುಂಬಿತು ತಾಯ್ತತನದ ವಾತ್ಸಲ್ಯ
ಕೊಡಗು

ಕ್ಲಾಸ್‍ರೂಂನಲ್ಲಿ ತುಂಬಿತು ತಾಯ್ತತನದ ವಾತ್ಸಲ್ಯ

January 12, 2019

ಗೋಣಿಕೊಪ್ಪ: ಅದು ಕಾಲೇಜು ಕೊಠಡಿ. ಆದರೆ ಅಲ್ಲಿ ಪಾಠ-ಪ್ರವ ಚನವಿರಲಿಲ್ಲ. ಅಲ್ಲಿ ಪ್ರೀತಿ ಮೈದಳೆದಿತ್ತು. ತಾಯ್ತನದ ವಾತ್ಸಲ್ಯ ಅರಳಿತ್ತು. ಎಲ್ಲರ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಸಹಪಾಠಿಗಳಿಂದ ಮಮತೆಯ ಮಡಿಲು ತುಂಬಿತ್ತು.

ಇದು ಗೋಣಿಕೊಪ್ಪಲು ಕಾಲೇಜಿನಲ್ಲಿ ಕಂಡುಬಂದು ದೃಶ್ಯ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಶಾಲಿನಿಗೆ ಕಳೆದ ಕಳೆದ ವರ್ಷ ಮದುವೆಯಾಗಿತ್ತು. ಆದರೂ ತನ್ನ ಓದುವ ಅಭಿಲಾಷೆಯಿಂದ ಪತಿಗೆ ತಿಳಿಸಿದ ಶಾಲಿನಿ ವ್ಯಾಸಂಗ ಮುಂದುವರೆಸಿದ್ದಳು. ಎರಡನೇ ವರ್ಷದ ಎಂ.ಎ ಪದವಿ ಓದುತ್ತಿದ್ದ ಶಾಲಿನಿ ಗರ್ಭಿಣಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಪ್ರಾಧ್ಯಾಪಕರ ಸಹಕಾರದಿಂದ ಕಳೆದ ಎರಡು ತಿಂಗಳಿಂದ ಮನೆಯಲ್ಲಿಯೇ ಓದಿಕೊಂಡು ನೇರವಾಗಿ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ. ಈ ಮಧ್ಯೆ ಏಳು ತಿಂಗಳ ತಾಯ್ತನದ ಹೊಸ್ತಿಲಲ್ಲಿದ್ದ ಶಾಲಿನಿಯನ್ನು ಕಾಲೇಜಿಗೆ ಬರಮಾಡಿಕೊಂಡ ಸಹಪಾಠಿಗಳು ಹಾಗೂ ಪ್ರಾಧ್ಯಾಪಕರು ಮಡಿಲು ತುಂಬಿ, ಬಳೆ ತೊಡಿಸಿ ಹಾರೈಸಿದರು. ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದರು.

Translate »