ಜ.18ರಂದು ‘ಟೆಸ್ಟಿಂಗ್ ಆಫ್  ಹೈಪೋಥೆಸಿಸ್’ ಕುರಿತು ಕಾರ್ಯಾಗಾರ
ಮೈಸೂರು

ಜ.18ರಂದು ‘ಟೆಸ್ಟಿಂಗ್ ಆಫ್ ಹೈಪೋಥೆಸಿಸ್’ ಕುರಿತು ಕಾರ್ಯಾಗಾರ

January 12, 2019

ಮೈಸೂರು: ಮೈಸೂರಿನ ಕುವೆಂಪುನಗರದ ಶ್ರೀ ಕಾವೇರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಜ.18ರಂದು ಬೆಳಿಗ್ಗೆ 10ಕ್ಕೆ ಕಾಲೇಜಿನ ಆಡಿಟೋರಿಯಂನಲ್ಲಿ ಮೈಸೂರು ವಿಶ್ವವಿದ್ಯಾ ನಿಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಹಾಗೂ ಸಂಪನ್ಮೂಲ ವ್ಯಕ್ತಿ ಡಾ.ಎನ್.ನಾಗರಾಜ ಅವರಿಂದ ‘ಟೆಸ್ಟಿಂಗ್ ಆಫ್ ಹೈಪೋಥೆಸಿಸ್’ ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಮುಖ್ಯ ಅತಿಥಿಯಾಗಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಡಾ. ಬಿ.ಹೆಚ್. ಸುರೇಶ್ ಭಾಗವಹಿಸುವರು. ಗೌರವ ಅತಿಥಿಗಳಾಗಿ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜಿ.ಹೆಚ್.ಮಹದೇವಸ್ವಾಮಿ ಭಾಗವಹಿಸಲಿದ್ದು, ಶ್ರೀ ಕಾವೇರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಕೆ.ಕುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9686616422 ಸಂಪರ್ಕಿಸಬಹುದು.

Translate »