ಹಾಸನ: ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ಕೊರತೆಯಾಗ ದಂತೆ ಮುಂಜಾಗ್ರತೆ ವಹಿಸಿ ಜೊತೆಗೆ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನವನ್ನು ಚುರುಕುಗೊಳಿಸುವಂತೆ ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣ ದಲ್ಲಿಂದು ನಡೆದ ಜಿಲ್ಲಾ ಅಭಿವೃದ್ದಿ, ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬರಪರಿಸ್ಥಿತಿ ಇದ್ದು ಯಾವುದೇ ಗ್ರಾಮವು ಕುಡಿಯುವ ನೀರಿನ ಪೂರೈಕೆಯಿಂದ ವಂಚಿತವಾಗದಂತೆ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಗೆ ಈ ಬಾರಿ ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಲಭ್ಯವಾಗಿದ್ದು ಅವುಗಳ ಅನುಷ್ಠಾನಕ್ಕೆ ಪೂರಕವಾಗಿ ಕಚ್ಚಾ ವಸ್ತುಗಳಾದ ಜಲ್ಲಿ, ಎಂ. ಸ್ಯಾಂಡ್ ಮತ್ತು ಮರಳು ದೊರೆಯುವಂತೆ ಜಿಲ್ಲಾ ಡಳಿತ ಅಗತ್ಯ ಕ್ರಮ ವಹಿಸಬೇಕು ಆ ಮೂಲಕ ಜಿಲ್ಲೆಯ ಅಭಿವೃದ್ಧಿ ಚುರುಕುಗೊಳ್ಳಿಸಬೇಕು ಎಂದು ದೇವೇಗೌಡರು ತಿಳಿಸಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಪ್ರತಿಕ್ರಿಯೆ ನೀಡಿ ಎಲ್ಲಾ ಕ್ರಮ ಬದ್ದ ಕಲ್ಲು ಗಣಿ ಪ್ರದೇಶಗಳಿಗೆ ಅನುಮತಿ ನೀಡಲಾಗಿದೆ. ಆದರೆ ನಿಯಮ ಉಲ್ಲಂಘನೆಗಳ ಮೇಲೆ ನಿಗಾವಹಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಯನ್ನು ನಿಯಾನುಸಾರವೇ ಮಾಡ ಬೇಕಾಗಿರುವುದರಿಂಧ ಕಾಲಾ ವಕಾಶ ಬೇಕಾಗುತ್ತಿದೆ ಎಂದರು.
ಇದೇ ವೇಳೆ ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಬೇಲೂರು ತಾಲ್ಲೂಕುಗಳನ್ನು ಬರಪೀಡಿತ ಕೆಲವು ಹೋಬಳಿಗಳಲ್ಲಿನ ತೀವ್ರ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ ಮತ್ತು ಕೆ.ಎಸ್. ಲಿಂಗೇಶ್ ಅವರು ಹೆಚ್ಚಿನ ಅನುದಾನಕ್ಕೆ ಒತ್ತಾಯಿಸಿದರು.
ಹನಿ ನೀರಾವರಿ ಪೋತ್ಸಾಹಿಸಿ: ಜಿಲ್ಲೆಯಲ್ಲಿ ಹನಿ ನೀರಾವರಿ ಯೋಜನೆಯನ್ನು ಹೆಚ್ಚಿಗೆ ಪ್ರೋತ್ಸಾಹಿಸ ಬೇಕು. ತೋಟಗಾರಿಕಾ ಬೆಳೆ ಪ್ರದೇಶದಲ್ಲಿ ವಿಸ್ತರಣೆ ಯಾಗಬೇಕು, ಇಲಾಖೆಯ ಯೋಜನೆಗಳ ಅನುಷ್ಠಾನ ದಲ್ಲಿ ಅರ್ಹರನ್ನು ಗುರುತಿಸಿ ಹೆಚ್ಚು ಅಲೆಸದೆ ಸೌಲಭ್ಯ ತಲುಪಿಸಿ ಎಂದು ಮಾಜಿ ಪ್ರಧಾನಿ ಹೇಳಿದರು.
ಇದೇ ವೇಳೆ ಜಿಲ್ಲೆಯಲ್ಲಿ ರೈತರ ಸಾಲಮನ್ನಾ ಪ್ರಕ್ರಿಯೆಯ ಪ್ರಗತಿ ಬಗ್ಗೆ ಜಿಲ್ಲಾಧಿಕಾರಿಯವರಿಂದ ಮಾಹಿತಿ ಪಡೆದ ಅವರು, ಆದಷ್ಟು ಬೇಗ ಎಲ್ಲಾ ರೈತರಿಗೂ ಖುಣ ಮುಕ್ತ ಪತ್ರ ದೊರಕಿಸಲು ಸಹ ಕಾರ ಹಾಗೂ ಖಾಸಗಿ ಬ್ಯಾಂಕ್ ಅಧಿಕಾರಿಗಳು ಪ್ರಾಮಾಣಿಕವಾಗಿ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಪ್ರಧಾನ ಮಂತ್ರಿ ಜನ್‍ಧನ್ ಯೋಜನೆಯಡಿ ಎಲ್ಲಾ ಕುಟುಂಬಗಳಿಗೂ ಬ್ಯಾಂಕ್ ಖಾತೆ ತೆರೆಸಲಾಗಿದೆ. ಎಲ್ಲಾ ಸಬ್ಸಿಡಿ ಹಣ ಅಥವಾ ಸವ ಲತ್ತುಗಳು ಅದಕ್ಕೆ ನೇರವಾಗಿ ವರ್ಗಾವಣೆಯಾಗ ಬೇಕು. ರೈತರು ಜನ ಸಾಮಾನ್ಯರಿಗೆ ಎಲ್ಲಾ ರೀತಿಯ ನೆರವು ಒದಗಿಸಿ ಎಂದು ದೇವೇ ಗೌಡ ಅವರು ಹೇಳಿದರು. ಸಭೆಯಲ್ಲಿ ಖಾಸಗಿ ಬ್ಯಾಂಕ್ ಖಾತೆಯೊಂದ ರಲ್ಲಿ ವೃದ್ಯಾಪ್ಯ ವೇತನ ಹಣವನ್ನು ಬೇರೆ ಸಾಲಕ್ಕೆ ಕಟಾವು ಮಾಡಿದ ವಿಚಾರವು ತೀವ್ರ ಚರ್ಚೆಗೆ ಒಳ ಪಟ್ಟಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ ಅವರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸು ವಂತೆ ಜಿಲ್ಲಾ ಪೊಲಿಸ್ ವರಿಷ್ಠಾ ಧಿಕಾರಿ ಡಾ. ಎ.ಎನ್. ಪ್ರಕಾಶ್ ಗೌಡ ಅವರಿಗೆ ಸೂಚಿಸಿದರು.
ಅಧಿಕಾರಿಗಳ ಬದ್ದತೆಯಿಂದ ಪ್ರಾಮಾಣಿಕತೆ ಯಿಂದ ಕೆಲಸ ನಿರ್ವಹಿಸಬೇಕು ಜನರ ಕುಂದು ಕೊರತೆಗಳಿಗೆ ಸ್ಪಂದಿಸಬೇಕು ಇದಷ್ಟು ದಿನ ಸಾರ್ವಜನಿಕರ ಪ್ರೀತಿ ಗಳಿಸಿ ಕೆಲಸ ಮಾಡಿ ಎಂದರು. ಸಂಸದರ ಆದರ್ಶ ಗ್ರಾಮ ಯೋಜನೆ ಯ ಅನುಷ್ಠಾನದಲ್ಲಿಯೂ ನಿರೀಕ್ಷಿತ ಸಾಧನೆಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ದೇವೇಗೌಡರು ಸೂಚನೆ ನೀಡಿದರು. ಬೆಳೆ ವಿಮೆ ವಿತರಣೆಯಲ್ಲಾ ಗುತ್ತಿರುವ ಲೋಪ, ರೈತರ ಸಂಕಷ್ಟಗಳು, ತೆಂಗು ಬೆಳೆ ಹಾನಿಗೆ ಪರಿಹಾರ ವಿತರಣೆಯ ಲ್ಲಾಗುತ್ತಿ ರುವ ಅಡೆತಡೆಗಳ ಬಗ್ಗೆಯೂ ತೀವ್ರ ಚರ್ಚೆ ನಡೆಯಿತು.
ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಹಾಗೂ ಹೊಸದಾಗಿ ಅನುಮೋದನೆಗೊಂಡಿರುವ ರೈಲ್ವೆ ಕಾಮಗಾರಿಗಳಿಗೆ ಭೂಸ್ವಾದೀನ ಪ್ರಕ್ರಿಯೆ ಚುರುಕು ಗೊಳಿಸುವಂತೆ ದೇವೇಗೌಡರು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್. ಲಿಂಗೇಶ್ ಅವರು ಬೇಲೂರಿನಂತೆ ಹಳೇಬೀಡು ಕೂಡ ಐತಿಹಾಸಿಕ ಮಹತ್ವ ಹೊಂದಿದ್ದು ಅಲ್ಲಿಗೂ ರೈಲು ಸಂಪರ್ಕ ದೊರೆಯುವಂತೆ ಮಾಡಲು ಸಹಕರಿಸುವಂತೆ ಮನವಿ ಮಾಡಿದರು.
ಹೆಚ್.ಎನ್. ಪ್ರಕಾಶ್ ನಿಧನಕ್ಕೆ ಸಂತಾಪ: ಸಭೆಯ ಪ್ರಾರಂಭದಲ್ಲಿ ಇತ್ತೀಚಿಗೆ ನಿಧನರಾದ ಮಾಜಿ ಶಾಸಕರಾದ ಹೆಚ್.ಎಸ್. ಪ್ರಕಾಶ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಮಾಜಿ ಪ್ರಧಾನಿ ದೇವೇಗೌಡ ಅವರು ಮಾತನಾಡಿ ಹೆಚ್.ಎಸ್. ಪ್ರಕಾಶ್ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾ ಗಿದ್ದು ಹಾಸನ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸೋಣ ಎಂದರು.