ದೃಷ್ಟಿಹೀನ ವಿದ್ಯಾರ್ಥಿಗಳ ಸಹಾಯಾರ್ಥ  ಫೆ.16ಕ್ಕೆ `ಸ್ನೇಹ ಸ್ಫೂರ್ತಿ’ ಸಂಗೀತ ಸಂಜೆ
ಮೈಸೂರು

ದೃಷ್ಟಿಹೀನ ವಿದ್ಯಾರ್ಥಿಗಳ ಸಹಾಯಾರ್ಥ ಫೆ.16ಕ್ಕೆ `ಸ್ನೇಹ ಸ್ಫೂರ್ತಿ’ ಸಂಗೀತ ಸಂಜೆ

January 12, 2019

ಮೈಸೂರು: ದೃಷ್ಟಿಹೀನ ವಿದ್ಯಾರ್ಥಿಗಳ ಸಹಾಯಾರ್ಥ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಫೆ.16ರಂದು ಸಂಜೆ 7ರಿಂದ `ಸ್ನೇಹ ಸ್ಫೂರ್ತಿ’ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಹನ ವಿಕಲಾಂಗರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿ.ನರಸಿಂಹಯ್ಯ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನ ಮನಸ್ಕ ಐವರು ದೃಷ್ಟಿ ವಿಕಲಚೇತನರಿಂದ ಕಳೆದ ಹದಿನೆಂಟು ವಷರ್Àಗಳ ಹಿಂದೆ ಸರಸ್ವತಿಪುರಂನಲ್ಲಿ ಸ್ಥಾಪನೆಯಾದ ಪ್ರತಿಷ್ಠಾನ ಅಂಧರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ದೃಷ್ಟಿಹೀನರನ್ನು ಮುಖ್ಯವಾಹಿನಿಗೆ ತರಲು ಶಾಲಾ ಪಠ್ಯಪುಸ್ತಕಗಳನ್ನು ಬ್ರೈಲ್ ಲಿಪಿಗೆ ಮಾರ್ಪಡಿಸಿ ರಾಜ್ಯಾದ್ಯಂತ ಉಚಿತವಾಗಿ ವಿತರಿಸಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆಂದೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಉಚಿತ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲಾಗಿದೆ.
ತಲಾ 25 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದಲ್ಲಿ ಆಶ್ರಯ ನೀಡಲಾಗಿದೆ. ಇದರ ನಿರ್ವಹಣೆಗೆ ಆರ್ಥಿಕ ಸಮಸ್ಯೆ ಕಾಡುತ್ತಿರುವುದರಿಂದ, ದೇಣಿಗೆ ಸಂಗ್ರಹಿಸುವುದಕ್ಕೆ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಮೈಸೂರು ವಿವಿಯ ಸೆನೆಟ್ ಭವನದಲ್ಲಿ ಅಂದು ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾವಗೀತೆ, ಭಕ್ತಿಗೀತೆ, ಜಾನಪದ ಸೇರಿದಂತೆ ಚಲನಚಿತ್ರ ಗೀತೆಗಳನ್ನು ಅಂಧ ಕಲಾ ವಿದರು ಹಾಡಲಿದ್ದು, 100 ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಪ್ರಾಯೋಜಿಸಲು ಇಚ್ಛಿಸುವ ಕಂಪನಿ, ಸಂಸ್ಥೆಗಳು ಹಾಗೂ ಯಾವುದೇ ತಂಡಗಳ ಲೋಗೊಗಳನ್ನು ಭಿತ್ತಿಪತ್ರಗಳಲ್ಲಿ ಬಿತ್ತರಿಸಲಾಗುವುದು. ಮಾಹಿತಿಗಾಗಿ ಮೊ.ಸಂ. 9448016501, 76766 96252 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿದರು. ಗೋಷ್ಠಿ ಯಲ್ಲಿ ಸಹನಾ ವಿಕಲಚೇತನರ ಸೇವಾ ಪ್ರತಿಷ್ಠಾನದ ಟ್ರಸ್ಟಿ ಹಾಲಪ್ಪ ಶೆಟ್ಟಿ ಇದ್ದರು.

Translate »