ಜೂಜಾಟ: ನಾಲ್ವರ ಬಂಧನ
ಕೊಡಗು

ಜೂಜಾಟ: ನಾಲ್ವರ ಬಂಧನ

January 10, 2019

ವಿರಾಜಪೇಟೆ: ವಿರಾಜಪೇಟೆ ಬಳಿಯ ವಿನಾಯಕ ನಗರದ ಹೊಳೆಯ ಬದಿಯಲ್ಲಿ ಜೂಜಾಟ ಅಡುತ್ತಿದ್ದ ನಾಲ್ಕು ಮಂದಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿ ಪಣಕ್ಕಿಟ್ಟಿದ್ದ ರೂ.71 ಸಾವಿರ ವನ್ನು ವಶಪಡಿಸಿಕೊಂಡಿದ್ದಾರೆ.

ಬುಧವಾರ ಸಂಜೆ ಜೂಜಾಟದಲ್ಲಿ ತೊಡ ಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಟಿ.ಜೆ.ಗಣೇಶ್, ಗೋಪಾಲಕೃಷ್ಣ, ಕೆ.ಟಿ.ದೀಪಕ್ ಮತ್ತು ಹೆಚ್.ಎಂ.ರಾಜೇಶ್ ಅವರುಗಳನ್ನು ಬಂಧಿಸಿದ್ದು, ಇನ್ನು ಮೂವರು ಪರಾರಿಯಾದರು ಎಂದು ಪೊಲೀಸರು ತಿಳಿಸಿದರು. ಮತ್ತೊಂದು ಪ್ರಕರಣದಲ್ಲಿ ಪಟ್ಟ ಣದ ಖಾಸಗಿ ಬಸ್ಸು ನಿಲ್ದಾಣದ ಬಳಿ (ಮಟ್ಕಾ) ಅದೃಷ್ಟ ಸಂಖ್ಯೆ ಅಂಕಗಳ ಮೇಲೆ ಹಣ ಪಾವತಿಸಿ ಜೂಜಾಟ ಆಡುತ್ತಿದ್ದ ವಿಶ್ವನಾಥ್ ಎಂಬಾತನನ್ನು ನಗರ ಠಾಣೆ ಪೊಲೀಸರು ಬಂಧಿಸಿ, ರೂ.4 ಸಾವಿರವನ್ನು ವಶಪಡಿಸಿ ಕೊಂಡು ವಿಶ್ವನಾಥ್ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಠಾಣಾಧಿಕಾರಿ ಸಂತೋಷ್ ಕಶ್ಯಪ್ ತಿಳಿಸಿದ್ದಾರೆ.

ಸರ್ಕಲ್ ಇನ್ಸ್‍ಪ್ಯೆಕ್ಟರ್ ಕುಮಾರ್ ಆರಾಧ್ಯ ಅವರ ಮಾರ್ಗಧರ್ಶನದಲ್ಲಿ ಎಸ್‍ಐ ಸಂತೋಷ್ ಕಶ್ಯಪ್, ಸುಬ್ರಹ್ಮಣ್ಯ, ಸಿಬ್ಬಂದಿ ಸುನೀಲ್, ಮುನೀರ್, ರಜನ್, ಸತೀಶ್, ಕುಮಾರ್, ಯೋಗೇಶ್, ಗಿರೀಶ್, ಸಂತೋಷ್ ಅವರು ಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »